ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಇಂದು ಉತ್ತರ ಪ್ರದೇಶದ ರಾಬಿನ್ ಸಿಂಗ್ ಪರಿಸರ ಪ್ರೇಮಿ ಯುವಕ ಭೇಟಿ ನೀಡಿ ಮರವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭೀಮಣ್ಣ ವಕೀಲರು ಮಾತನಾಡಿ ಉತ್ತರ ಪ್ರದೇಶದ ರಾಬಿನ್ ಸಿಂಗ್ ಎನ್ನುವ ಯುವಕ ಪರಿಸರ ಸಂರಕ್ಷಣೆ ಗತಿ ವಿಧಿಯ ಪರ್ಯಾವರಣದ ನಿಮಿತ್ಯ ಕನ್ಯಾಕುಮಾರಿಯಿಂದ ಸೈಕಲ್ ಮೂಲಕ ಜಾಗೃತಿ ಅಭಿಯಾನವನ್ನು ಕೈಗೊಂಡಿದ್ದು ದೇಶದ ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸೈಕಲ್ ಮುಖಾಂತರ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಶುರು ಮಾಡಿದ್ದಾರೆ.ಸಾರ್ವಜನಿಕರಿಗೆ ಪರಿಸರ ಬಗ್ಗೆ,ಪರಿಸರ ಸಂರಕ್ಷಣೆ,ಪರಿಸರ ರಕ್ಷಣೆ ಈ ವಿಷಯಗಳನ್ನ ಹೇಳುತ್ತಾ ಸೈಕಲ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಸುಮಾರು ಎರಡು ವರ್ಷಗಳ ಕಾಲ ಇವರು ಈ ದೇಶದ ಎಲ್ಲ ಜಿಲ್ಲೆಗಳಲ್ಲೂ ಪರಿಸರ ಸಂರಕ್ಷಣೆಯ ವಿಷಯವನ್ನು ಇಟ್ಕೊಂಡು ಸುತ್ತಾಡುವವರಿದ್ದಾರೆ ಸದ್ಯ 2 ತಿಂಗಳಿನಿಂದ ಇವರು ಸೈಕಲ್ ನಿಂದಲೇ ಸುತ್ತಾಡುತ್ತಿದ್ದಾರೆ.ಇವರನ್ನು ಕಂಡ ನಮ್ಮ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಸಸಿ ನೀಡುವ ಮೂಲಕ ಸ್ವಾಗತವನ್ನು ಕೋರಿದರು ರಾಬಿನ್ ಸಿಂಗ್ ಅವರ ಉದ್ದೇಶ ಭಾರತ ಸಂಪೂರ್ಣ ಹಸಿರು ಆಗಬೇಕು.ಉತ್ತಮ ಗಾಳಿ ದೊರೆಯುವಂತಾಗಬೇಕು ಎನ್ನುವದೇ ಅವರ ಉದ್ದೇಶ.ಇಂದು ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡುರುವುದು ನಮಗೆಲ್ಲ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಪರಿಸರ ಪ್ರೇಮಿ ರಾಬಿನ್ ಸಿಂಗ್ ಅವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ರಾಯಪ್ಪ ವಕೀಲರು, ಜೀವ ಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ,ಅಶೋಕ ಖಾಜಿ,ವೀರೇಶ ಇಲ್ಲೂರು ವಕೀಲರು,ಚನ್ನವೀರಗೌಡ, ಉಮೇಶಗೌಡ,ಅಮರಯ್ಯ ಶಾಸ್ತ್ರಿ, ಲಿಂಗರಾಜು,ಪ್ರಲ್ಹಾದ ಪ್ರೀಯ ಪೋಟೋ ಸ್ಟುಡಿಯೋ, ಮತ್ತಿತರರು ಉಪಸ್ಥಿತರಿದ್ದರು.