ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅನೈರ್ಮಲ್ಯದಿಂದ ಕೂಡಿದೆ
ಸಾರ್ವಜನಿಕರ ಆರೋಗ್ಯಕ್ಕೆ ಪೂರಕವಾಗಿ ಶುಚಿಯಾಗಿರಬೇಕಾದ ಆಸ್ಪತ್ರೆ ಉಪಕೇಂದ್ರ ಆವರಣವೇ ಹಾವು ಹಲ್ಲಿಗಳ ಆವಾಸ ಸ್ಥಾನವಾಗಿದ್ದು, ಕುಡುಕರ ವಾಸ ಸ್ಥಳವಾಗಿದೆ, ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರಿನ ವ್ಯವಸ್ಥೆ ಕೂಡಾ ಇಲ್ಲ, ಸ್ವಚ್ಛತೆಯಂತೂ ಮರೀಚಿಕೆಯಾಗಿದೆ, ಗಿಡಗಂಟಿಗಳು ಬೆಳೆದು ಇದು ಆಸ್ಪತ್ರೆಯೋ.? ದನದ ಕೊಟ್ಟಿಗೆಯೋ ಎಂಬಂತಾಗಿದೆ.
ಇದು ಒಂದು ಹಳ್ಳಿಗಾಡಿನ ಗ್ರಾಮ. ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಆರೋಗ್ಯಉಪ ಕೇಂದ್ರದ ಕಥೆಯಾಗಿದೆ.
ಮೊದಲೇ ಸರ್ಕಾರಿ ಆಸ್ಪತ್ರೆ ಎಂದರೆ ಅಷ್ಟಕ್ಕಷ್ಟೇ ಎಂಬ ಭಾವನೆ ಜನರ ಮನದಲ್ಲಿದ್ದು, ಈ ಆಸ್ಪತ್ರೆಯ ಆವರಣ ಕಂಡಾಕ್ಷಣ ಅದು ನಿಜ ಎಂಬಂತಾಗಿದೆ.ಇಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ ಆಸ್ಪತ್ರೆ ಕಟ್ಟಡದ ಸುತ್ತಮುತ್ತ ಗಿಡ ಗಂಟಿಗಳು ಬೆಳೆದು ವಿಷಜಂತುಗಳು ಹೆಚ್ಚಿವೆ. ಸಾರ್ವಜನಿಕರು,ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ರಸ್ತೆ ಇಲ್ಲದೆ ಭಯದಿಂದ ತಿರುಗಾಡುವಂತಾಗಿದೆ.ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ನೀಡಿದ್ದು ಸಮರ್ಪಕವಾದ ಉತ್ತರ ದೊರಕಿಲ್ಲ ಎಂದು ನರ್ಸ್ ರೇಖಾರವರು ತಿಳಿಸಿದ್ದಾರೆ.
ಇದು ನಿಜಕ್ಕೂ ಇಲ್ಲಿನ ಆಡಳಿತಾಧಿಕಾರಿಗಳ ವೈಫಲ್ಯವೂ ಹೌದು ಸ್ಥಳಿಯ ಜನಪ್ರತಿನಿಧಿಗಳು ಇತ್ತ ಇನ್ನಾದರೂ ಗಮನಹರಿಸಿ ಆಸ್ಪತ್ರೆ ಆವರಣವನ್ನು ಶುಚಿಯಾಗಿ ಇಡಬೇಕೆಂದು ಗ್ರಾಮದ ಜನ ಸೇವಕ ವೆಂಕಟೇಶ್ ಮತ್ತು ಊರಿನ ಗೌಡ್ರು ಗೋಪಾಲ್ ರಾಜ್ ಆಗ್ರಹಿಸಿದ್ದಾರೆ.
ವರದಿ ಉಸ್ಮಾನ್ ಖಾನ್