ಹಿಂದಿನ ಕಾಲದಲ್ಲಿ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಸಂಪರ್ಕಿಸಲು ತುಂಬಾ ತೊಂದರೆಪಡುತ್ತಿದ್ದನು. ಯಾಕೆಂದರೆ ಆಗಿನ ಕಾಲದಲ್ಲಿ ದೂರವಾಣಿ ಸಂಪರ್ಕವಾಗಲಿ,ಯಾವುದೇ ಸೌಲಭ್ಯಗಳಿರಲಿಲ್ಲ. ಇಂತಹ ಸೌಲಭ್ಯಗಳಿಲ್ಲದೆ ಬಹಳಷ್ಟು ವರ್ಷಗಳ ಕಾಲ ತನ್ನ ಜೀವನವನ್ನು ಕಳೆದಿದ್ದಾನೆ ಕಾಲ ಬದಲಾದಂತೆ ಅಂಚೆ ಪತ್ರ,ಟೆಲಿಗ್ರಾಮ್ (ತಂತಿ ಸಂದೇಶ)ವನ್ನು ಕಂಡು ಹಿಡಿದು ಸಂಪರ್ಕಕ್ಕೆ ಅನುಕೂಲ ಮಾಡಿಕೊಂಡನು ಆಗಲೇ ಇದು ತುಂಬಾ ಜನಪ್ರಿಯವಾಗಿತ್ತು ಮಾತಿನ ಮೂಲಕ ಸಂಪರ್ಕಿಸಲು ಸಾಧ್ಯವಾಗದಿದ್ದರೂ ಬರಹದ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತಿತ್ತು. ಹೀಗೆಯೇ ವರ್ಷಗಳು ಕಳೆದಂತೆ ದೂರವಾಣಿ ಬಳಸುವ ಪದ್ಧತಿ ಜಾರಿಗೆ ಬಂದಿತು.ಇಲ್ಲಿ ಇನ್ನೊಬ್ಬರನ್ನು ಸಂಪರ್ಕಿಸಲು ಶ್ರಮ ಪಡುವ ಅಗತ್ಯವಿರಲಿಲ್ಲ.ಇದಕ್ಕಿಂತಲೂ ಜನರನ್ನು ಅತಿ ವೇಗವಾಗಿ ವಶಪಡಿಸಿಕೊಂಡಿದ್ದು ಮೊಬೈಲ್ ಫೋನ್. ನೋಕಿಯಾ ೧೧೦೦ ದಿಂದ ಆರಂಭವಾದ ಸಾಧಾರಣ ಮೊಬೈಲ್ ಫೋನ್ ಇಂದು ವಿಶ್ವವನ್ನು ತನ್ನ ಕಡೆ ಸ್ವಾಧೀನಪಡಿಸಿಕೊಂಡಿದೆ.
ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ ನಾವು ಕಲಿಯುಗದಲ್ಲಿ ಜೀವಿಸುತ್ತಿದ್ದೇವೆ ಅನ್ನುವುದಕ್ಕಿಂತ ಮೊಬೈಲ್ ಯುಗದಲ್ಲಿ ಜೀವಿಸುತ್ತಿದ್ದೇವೆ ಎನ್ನುವುದು ಸೂಕ್ತವಾಗಿದೆ.ಯಾಕೆಂದರೆ ಅಂತಹ ಪರಿಸ್ಥಿತಿ ನಿರ್ಮಾಣವಾಗಿ ಇಂದು ಹೊತ್ತು ಊಟ ಬಿಟ್ಟರೂ ಮೊಬೈಲ್ ಬಿಡಲಾರದ ಸ್ಥಿತಿ ಬಂದಿದೆ. ಮೊದಲು ಬ್ಯಾಂಕಿನಲ್ಲಿ ಹಣ ಜಮಾ ಮಾಡುವುದಾಗಲಿ, ಕರೆಂಟ್ ಬಿಲ್ಲು, ಟೆಲಿಪೋನ್ ಬಿಲ್, ಬಸ್ಸು, ರೈಲು,ವಿಮಾನದ ಟಿಕೆಟ್ ಬುಕ್ ಮಾಡುವುದಕ್ಕೆ ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ಇತ್ತು. ಆದರೆ ಈಗ ಮೊಬೈಲ್ ಬಂದಾಗಿನಿಂದ ಬಹಳಷ್ಟು ಕೆಲಸಗಳು ಕ್ಷಣದಲ್ಲಿ ಮುಗಿಯುತ್ತಿವೆ. ಹೀಗೆ ವರ್ಷಗಳು ಕಳೆಯುತ್ತ ಮೊಬೈಲ್ ನಲ್ಲಿ ಹೊಸ ಹೊಸ ಆಪ್ ಗಳು ಆವಿಷ್ಕಾರಗೊಂಡವು.ಇಲ್ಲಿ ನಿಮಗೆ ತಿಳಿಸಲು ಹೊರಟಿರುವ ಆಪ್ ಹೆಸರು ಫೇಸ್ ಬುಕ್. ಇದು ಬೇರೆ ಕಡೆ ಎಲ್ಲೋ ಇರುವ ವ್ಯಕ್ತಿಗಳನ್ನು ಸ್ನೇಹ ಮಾಡಿಕೊಡುವ ಆಪ್ ಈ ಫೇಸ್ ಬುಕ್.ಇದು ಒಂದು ಯಶಸ್ವಿ ಆಪ್ ಕೂಡ. ಈ ಫೇಸ್ ಬುಕ್ ಕಂಡು ಹಿಡಿದಿದ್ದ ಉದ್ದೇಶವೇ ಬೇರೆ? ಆದರೆ ಬಳಕೆಯಾಗುತ್ತಿರುವ ರೀತಿಯೇ ಬೇರೆಯಾಗಿದೆ. ಯಾಕೆ ಈ ರೀತಿ ಆಗುತ್ತಿದೆ ಎಂಬುದು ಖಚಿತವಾಗಿ ತಿಳಿಯುತ್ತಿಲ್ಲ. ಆದರೂ ಕೆಲವೊಂದು ವಿಷಯಗಳನ್ನು ತಿಳಿಸುವ ಅನಿವಾರ್ಯತೆ ಎದುರಾಗಿದೆ. ಅದಕ್ಕಿಂತಲೂ ಮುಂಚಿತವಾಗಿ ಈ ಫೇಸ್ ಬುಕ್ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸಿಕೊಡಲು ಇಚ್ಚಿಸುತ್ತೇನೆ. ಈ ಫೇಸ್ ಬುಕ್ ಫೆಬ್ರವರಿ 2004 ರಲ್ಲಿ ಕ್ಯಾಂಬ್ರಿಡ್ಜನಲ್ಲಿ ಆವಿಷ್ಕಾರ ಗೊಂಡಿತು. ಇದರ ಮೂಲ ಕೇಂದ್ರ ಕಚೇರಿ Hacker Way cika 1601 Willow road, Menlo Pack, California, US ನಲ್ಲಿದೆ. ಇದರ ಜಾಲವು ಯುಎಸ್ ನಲ್ಲಿ 2004 ರಿಂದ ಆರಂಭವಾಗಿದ್ದು ಪ್ರಪಂಚದಾದ್ಯಂತ ವ್ಯಾಪಿಸಿದೆ. ಇದರ ಜನಕ ಮಾರ್ಕ್ ಜೂಕರ್ ಎಂದು ಗುರ್ತಿಸುತ್ತಿದ್ದಾರೆ ವಿನಃ ಈ ಆವಿಷ್ಕಾರಕ್ಕೆ ಜೊತೆಯಾದವರ ಹೆಸರನ್ನು ಬಹಳಷ್ಟು ಜನರು ಗುರ್ತಿಸುವುದನ್ನೆ ಮರೆತಿದ್ದಾರೆ. ಅವರ ಹೆಸರು ಈ ರೀತಿಯಾಗಿವೆ. Eduardo Saverin, Andrew Mocullum, Dustin Maskovitz & Chirs Hughes ಡಿಸೆಂಬರ್ 2021 ರ ಪ್ರಕಾರ ಪ್ರಪಂಚದ ಜನ ಸಂಖ್ಯೆ 7.9
ಬಿಲಿಯನ್. ಈ ಪ್ರಶ್ನೆ ಮಧ್ಯೆ ಯಾಕೆ ಬಂದಿತು? ಎನ್ನುವ ಅನುಮಾನ ನಿಮ್ಮನ್ನು ಕಾಡುವುದು ಸಹಜ. ನನ್ನ ಬಳಿ ಇದಕ್ಕೆ ಉತ್ತರವಿದೆ. 7.9 ಬಿಲಿಯನ್ ಜನ ಸಂಖ್ಯೆ ಹೊಂದಿರುವ ಈ ಪ್ರಪಂಚದಲ್ಲಿ 2022 ರ ಸಮೀಕ್ಷೆ ಪ್ರಕಾರ ಪ್ರತಿ ತಿಂಗಳು 2.85 ಬಿಲಿಯನ್ ಜನರು ಈ app ಬಳಸುತ್ತಿದ್ದಾರೆ. ಅಂದರೆ ಇದರ ವ್ಯಾಮೋಹ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದು ನೀವೇ ತಿಳಿದುಕೊಳ್ಳಬಹುದು. ಉಳಿದ 5.5 ಬಿಲಿಯನ್ ಜನರು ಈ ಆಪ್ ಬಳಸುತ್ತಿದ್ದಾರೆ ಇಲ್ಲವೊ ನನಗೆ ಖಚಿತವಾಗಿ ಗೊತ್ತಿಲ್ಲ. ಈ ಫೇಸ್ ಬುಕ್ ಕಂಪನಿಯಲ್ಲಿ ಸಮೀಕ್ಷೆ ಪ್ರಕಾರ 39,651 ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ ವಾರ್ಷಿಕ ವರಮಾನ ಕೂಡ ಉತ್ತಮವಾಗಿದೆ. ವಾರ್ಷಿಕ ವರಮಾನ 89.5 ಬಿಲಿಯನ್ ಡಾಲರ್. ಇದು ಫೇಸ್ ಬುಕ್ ಬಗ್ಗೆ ಇರುವ ಸಂಕ್ಷಿಪ್ತ ಮಾಹಿತಿಯಾಗಿದೆ. ಈ ಲೇಖನ ಬರೆಯುವ ಪ್ರಮುಖ ಉದ್ದೇಶ ಪ್ರಸ್ತುತ ಸ್ಥಿತಿಯಲ್ಲಿ ಫೇಸ್ ಬುಕ್ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂದು ತಿಳಿಸುವುದು. ಫೇಸ್ ಬುಕ್ ಬಳಸುವುದು ತಪ್ಪು ಎಂದು ನಾನು ಹೇಳುವುದಿಲ್ಲ. ಆದರೆ ಫೇಸ್ ಬುಕ್ ನ್ನು ಅರ್ಥರಹಿತವಾಗಿ ಬಳಸುವುದು ತಪ್ಪು ಎಂದು ನಾನು ಹೇಳುತ್ತೇನೆ. ಫೇಸ್ ಬುಕ್ ಆವಿಷ್ಕಾರ ಗೊಂಡಿದ್ದು ಫೆಬ್ರವರಿ 4,2004 ಎಂದು ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾಗಿದೆ. ನಿಜ ಸಂಗತಿಯೇನೆಂದರೆ ಜುಲೈ 2003 ರಂದು ಫೇಸ್ ಮಾಸ್ ಎಂಬ ಹೆಸರಿನಿಂದ ಆವಿಷ್ಕಾರಗೊಂಡಿತ್ತು. ಅನಂತರ ಫೆಬ್ರುವರಿ 4,2004 ರಂದು
ಫೇಸ್ ಮಾಸ್ ಎಂದು ಇದ್ದದ್ದನ್ನು ದಿ ಫೇಸ್ ಬುಕ್ ಎಂಬ ಹೆಸರಿಗೆ ಬದಲಾಯಿಸಲಾಯಿತು. ಆದರೆ ಈ ಸಂಗತಿ ಬಹಳಷ್ಟು ಜನರಿಗೆ ತಿಳಿದಿಲ್ಲ.ಇನ್ನು ಕೆಲವು ಜನರಿಗೆ ಫೇಸ್ ಬುಕ್ ಯಾವ ಉದ್ದೇಶಕ್ಕಾಗಿ ಕಂಡುಹಿಡಿದಿದ್ದಾರೆ ಎಂದು ತಿಳಿದಿಲ್ಲ. ಅದರ ಉದ್ದೇಶ ತಿಳಿಯದೆ ಫೇಸ್ ಬುಕ್ಕ ನ್ನು ನಾವೆಲ್ಲ ನಿರಂತರವಾಗಿ ಬಳಸುತ್ತಿದ್ದೇವೆ. ಕೇವಲ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮ ಖಾತೆ ಮಾಡಿಕೊಂಡು ಪ್ರೊಫೈಲ್ ನಲ್ಲಿ ಚೆನ್ನಾಗಿ ಕಾಣಿಸುವ ಹುಡುಗ, ಹುಡುಗಿಯರ
ಭಾವಚಿತ್ರಕ್ಕೆ ಆಕರ್ಷಣೆಗೊಂಡು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಕೆಲವೊಂದು ಖಾತೆಗಳನ್ನು ನೀವು ಗಮನಿಸಿರಬಹುದು.ಯಾರದೋ ಹೆಸರಿನ ಖಾತೆಗೆ ಯಾವುದೋ ಸಿನಿಮಾ ನಟ,ನಟಿಯರ
ಭಾವಚಿತ್ರವನ್ನು ಹಾಕಿದರೆ ಇನ್ನೂ ಕೆಲವರು ಬೇರೆ ಬೇರೆ ಹೆಸರು ಹಾಕಿ ಯಾರಿಗೂ ಗೊತ್ತಿಲ್ಲದೆ ಇರುವ ಭಾವಚಿತ್ರದ ಜೊತೆ ಸುಳ್ಳು ಮಾಹಿತಿಯನ್ನು ದಾಖಲಿಸಿ ನಕಲಿ ಖಾತೆಯನ್ನು ತೆರೆಯುವುದರಿಂದ ಅವರಿಗೆ ಏನು ಪ್ರಯೋಜನವಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಇತ್ತೀಚೆಗಂತೂ ನಕಲಿ ಖಾತೆಗಳ ಹಾವಳಿ ತೀವ್ರವಾಗಿದೆ. ಇವರ ದುರದ್ದೇಶಕ್ಕೆ ಬಲಿಯಾದ ಜೀವಗಳು ಎಷ್ಟು ಅನ್ನುವುದು ಆ ದೇವರಿಗೆ ಮಾತ್ರ ಗೊತ್ತು. ಇದೇ ಫೇಸ್ಬುಕ್ ನಲ್ಲಿ ನನ್ನ ಮನಸ್ಸಿಗೆ ಹೆಚ್ಚು ಗಾಯಗೊಳಿಸಿದ ಒಂದು ಪೋಸ್ಟ್ ಕಂಡಿತು. ವಿವರವಾಗಿ ಓದಿದಾಗ ಎಂತಹ ವಿಕೃತ ಮನಸ್ಸಿಗಿಂತಲೂ ಕೀಳಾದ ವ್ಯಕ್ತಿಗಳು ಇರುವ ವ್ಯಕ್ತಿಗಳು ಇರುವುದು ನೋಡಿ ಅಸಹ್ಯ ಅನಿಸಿತು. ಇದು ಒಬ್ಬ ಸಹೋದರಿಯ ದುರಂತ ಕಥೆ. ನೂರಾರು ಕನಸುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ ಸಹೋದರಿ ಫೇಸ್ ಬುಕ್ ಖಾತೆಯಲ್ಲಿ ತನ್ನ ಮೂಲ ಭಾವಚಿತ್ರದ ಸಹಿತ ತನ್ನ ವಿವರವನ್ನು ದಾಖಲಿಸಿದ್ದಳು. ಆದರೆ ದಿನಗಳು ಒಂದೇ ರೀತಿ ಇರುವುದಿಲ್ಲ, ಬದಲಾಗುತ್ತಲೇ ಇರುತ್ತವೆ. ಹೀಗಿರುವಾಗ ವಿಧಿಯ ಆಟವೋ, ಸಹೋದರಿಯ ದುರಾದೃಷ್ಟವೋ ತಿಳಿಯದು ಸಮಾಜದಲ್ಲಿ ಬದುಕುತ್ತಿರುವ ವಿಕೃತ ಮನಸ್ಸಿಗಿಂತಲೂ ಕೀಳಾಗಿರುವ ಮೃಗಗಳು ಅವಳ ಭಾವಚಿತ್ರವನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಂಡು ಏನು ತಪ್ಪು ಮಾಡದ ಅವಳ ಬದುಕಿಗೆ ಕೊಳ್ಳಿಯಿಟ್ಟರು. ವಿಷಯ ತಿಳಿದ ಸಹೋದರಿ ಮತ್ತು ಅವಳ ಕುಟುಂಬ ಅವಮಾನ ತಾಳಲಾರದೇ ಸಾವಿಗೆ ಶರಣಾಯಿತು. ಈ ರೀತಿ ಎಷ್ಟು ಜೀವಗಳು ಬಲಿಯಾಗಿವೆ ಅದು ದೇವರಿಗೆ ಮಾತ್ರ ಗೊತ್ತು. ಇದು ನಿಮಗೆ ಹೇಳಲು ಕಾರಣ ಇನ್ನೂ ಮುಂದೆಯಾದರೂ ಈ ರೀತಿ ಬಲಿಯಾಗದೇ ಸಹೋದರಿಯರು ನಿಮ್ಮ ಫೇಸ್ ಬುಕ್ ಖಾತೆಯಲ್ಲಿ ಮೂಲ ಭಾವ ಚಿತ್ರ ಮತ್ತು ಮೊಬೈಲ್ ನಂಬರನ್ನು ಯಾವುದೇ ಕಾರಣಕ್ಕೂ ಪೋಸ್ಟ್ ಮಾಡಬೇಡಿ. ಇಲ್ಲವಾದರೆ ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿಯಾದರೂ ಬರಬಹುದು. ಸಾಲದಕ್ಕೆ ನಕಲಿ ಖಾತೆಗಳನ್ನು ತೆರೆದು ಮನಸ್ಸನ್ನು ಕದಲಿಸುವ ಪೋಸ್ಟ್ ಗಳನ್ನು ಅಪ್ಲೋಡ್ ಮಾಡಿ ಯುವ ಜನಾಂಗವನ್ನು ಹಲವಾರು ರೀತಿಯಲ್ಲಿ ದಾರಿ ತಪ್ಪಿಸಿ ಅವರ ಜೀವನವನ್ನು ನಾಶ ಮಾಡುತ್ತಿದ್ದಾರೆ. ಅದೇ ರೀತಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುವುದು,ಶೇರ್ ಮಾಡುವುದು ನಡೆಯುತ್ತಲೇ ಇದೆ. ಯಾಕೆಂದರೆ ಈಗಿನ ಕಾಲಮಾನ ತುಂಬ ಸೂಕ್ಷ್ಮವಾಗಿದೆ. ಯಾರನ್ನು ಪೂರ್ತಿಯಾಗಿ ನಂಬುವ ಪರಿಸ್ಥಿತಿಯಲ್ಲಿ ನಾವಿಲ್ಲ. ಅಪರಿಚಿತ ವ್ಯಕ್ತಿಗಳ ಪರಿಚಯ, ಸ್ನೇಹ ಮಾಡಿಕೊಳ್ಳಬೇಕೆನ್ನುವವರು ಮೈಯಲ್ಲಾ ಕಣ್ಣಾಗಿದ್ದರೂ ಕಡಿಮೆಯೇ. ಆದರೂ ಎಚ್ಚರವಿರಲಿ, ಅದೇ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ನಿಶ್ಚಿತ. ಇಂತಹ ದೊಡ್ಡ ಅಂತರ್ಜಾಲವನ್ನು ಹೊಂದಿರುವ ಫೇಸ್ ಬುಕ್ ಕಂಪನಿ ಇಂತಹ ನಕಲಿ ಖಾತೆಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಫೇಸ್ ಬುಕ್ ಎಂದರೆ ಸ್ನೇಹಿತ ಎಂದು ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ. ಆದರೆ ಅದು ತಪ್ಪು. ಫೇಸ್ ಬುಕ್ ಸ್ನೇಹದ ವಾತಾವರಣವನ್ನು ನಿರ್ಮಿಸುವ ಒಂದು ಸಾಧನ ಮಾತ್ರ. ಸದುಪಯೋಗವಾಗಬೇಕಾಗಿರುವ ಫೇಸ್ ಬುಕ್ ದುರ್ಬಳಕೆಯಾಗುತ್ತಿದೆ. ಇದೇ ರೀತಿ ದುರ್ಬಳಕೆ ಮಾಡುವುದು ಮುಂದುವರೆದರೆ ಫೇಸ್ ಬುಕ್ ಇದ್ದದ್ದು ಫೇಕ್ ಬುಕ್ ಆಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದೇ ರೀತಿ ಫೇಸ್ ಬುಕ್ ನಲ್ಲಿ ಅರಾಜಕತೆ, ಹಲವಾರು ಸಮಸ್ಯೆಗಳು ಉಂಟಾಗಿ ಫೇಸ್ ಬುಕ್ ಕಂಪನಿ ಪಾಕಿಸ್ತಾನ, ಚೀನಾ, ನಾರ್ತ್ ಕೋರಿಯಾ, ಕ್ಯೂಬಾ, ಇರಾನ್, ಬಾಂಗ್ಲಾ ದೇಶ,ವಿಯೇಟ್ನಾಂ, ಮಾರಿಷಸ್, ಈಜಿಪ್ಟ್ ಮತ್ತು ಸಿರಿಯಾ ದೇಶದಲ್ಲಿ
ಫೇಸ್ ಬುಕ್ ನ್ನು ನಿಷೇಧಿಸಿತು. ಇದೇ ರೀತಿ ಮುಂದುವರೆದರೆ ನಮ್ಮ ದೇಶದಲ್ಲಿಯೂ
ನಿಷೇದಗೊಳಗಾಗುವ ಸಾಧ್ಯತೆ ಇದೆ. ಸ್ನೇಹಿತರೇ ನಿಮಗೆ ಹೆಚ್ಚಿಗೆ ತಿಳಿಸುವ ಅಗತ್ಯವಿಲ್ಲ. ನೀವು ತಿಳಿದವರು.ಫೇಸ್ ಬುಕ್ ಬಳಸುವಾಗ ಎಚ್ಚರವಿರುವುದು ಉತ್ತಮ. ಆದ್ದರಿಂದ ಫೇಸ್ ಬುಕ್ ಬಳಕೆದಾರರಿಗೆ ತಿಳಿಸುವ ವಿಷಯವೇನೆಂದರೆ ಫೇಸ್ ಬುಕ್ ಬಳಕೆದಾರರೇ ಎಚ್ಚರ, ಎಚ್ಚರ, ಎಚ್ಚರ.