ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಮಂಗಳವಾರ ಕುರಿಗಳು ಹಾಗೂ ದನಗಳ ಸಂತೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.ಅದರಲ್ಲಿ ಎಸ್ ಎನ್ ಕ್ಯಾಂಪ್ ಬಾಲಕ ಆಟವಾಡುವಾಗ ಬಿದ್ದು ಪ್ರಜ್ಞೆ ತಪ್ಪಿದ ಬಾಲಕ ಯಶವಂತ(8ವರ್ಷ)ನ ಪಾಲಕರ ಆಕ್ರಂದನ ಕೇಳಿ ಅಮರೇಗೌಡ ಮಲ್ಲಾಪೂರ ಮಗುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು.
ಎಸ್ ಎನ್ ಕ್ಯಾಂಪ್ ನಲ್ಲಿ ಬಾಲಕ ಯಶವಂತ(8ವರ್ಷ) ಆಟವಾಡುವಾಗ ಬಿದ್ದು ಪ್ರಜ್ಞೆ ತಪ್ಪಿ ಕೋಮಾಸ್ಥಿತಿಯಲ್ಲಿದ್ದ ಈ ಬಾಲಕನನ್ನು ತಂದೆ ಹನುಮಂತ ತಾಯಿ ಚೆನ್ನಮ್ಮ 15ಕಿಲೋ ಮೀಟರ್ ದೂರದಲ್ಲಿರುವ ಸಿಂಧನೂರು ನಗರಕ್ಕೆ ತರುವಾಗ ಇನ್ನೂ ಸ್ವಲ್ಪ ದೂರದಲ್ಲಿ ಆಸ್ಪತ್ರೆ ಇರುವಾಗಲೇ ಹಿರೇ ಹಳ್ಳದ ಹತ್ತಿರ ಟ್ರಾಫಿಕ್ ಸಮಸ್ಯೆಯಾಗಿ ಮದ್ಯದಲ್ಲೇ ಸಿಲುಕಿಕೊಂಡರು.ಆತಂಕಗೊಂಡ ಪಾಲಕರು ಭಯದಿಂದ ಆಟೋದಿಂದ ಇಳಿದು ನನ್ನ ಮಗನನ್ನು ಉಳಿಸಿಕೊಡಿ,ಬದುಕಿಸಿ ಕೊಡಿ ಎಂದು ಗೋಗರೆಯುತ್ತಾ ಇರುವಾಗ ಅದೇ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ತಮ್ಮ ಪರಿಸರ ಸೇವೆಗೆ ಎಂದು ತೆಗೆದುಕೊಂಡಿರುವ ವಿದ್ಯುತ್ ಚಾಲಿತ ವಾಹನವನ್ನು ಪಾದಾಚಾರಿ ಮಾರ್ಗದ ಮೇಲೆ ಎತ್ತಿಟ್ಟು ಆ ಬಾಲಕ ಮತ್ತು ಪಾಲಕರನ್ನು ಕರೆದುಕೊಂಡು ತಮಗೆ ಪರಿಚಯವಿರುವ ಡಾ.ದೊಡ್ಡಬಸವ ಅವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನುಷ್ಯತ್ವದ ಮಾನವೀಯತೆ ಮೆರೆದರು. ಅಮರೇಗೌಡ ಮಲ್ಲಾಪೂರ ಅವರ ಪರಿಸರ ಜಾಗೃತಿ ಜೊತೆಗೆ ಮನುಷ್ಯತ್ವದ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಅಪಾರವಾದ ಮೆಚ್ಚುಗೆ ವ್ಯಕ್ತವಾಯಿತು. ಸಂದರ್ಭದಲ್ಲಿ ಬಾಲಕನ ಪಾಲಕರಾದ ಹನುಮಂತ ಮತ್ತು ಚೆನ್ನಮ್ಮ ಪರಿಸರ ಪ್ರೇಮಿ ಹಾಗೂ ಮಾನವೀಯತೆ ಮೆರೆದ ಅಮರೇಗೌಡ ಮಲ್ಲಾಪೂರ ಅವರಿಗೆ ಆಸ್ಪತ್ರೆಯಲ್ಲೇ ಸನ್ಮಾನಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯೆದ್ಯರಾದ ಡಾ.ದೊಡ್ಡಬಸವ,ವನಸಿರಿ ಫೌಂಡೇಶನ್ ಗೌರವ ಅದ್ಯಕ್ಷ ಶಂಕರಗೌಡ ಎಲೆಕೂಡ್ಲಿಗಿ ಇನ್ನಿತರರು ಇದ್ದರು.