ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗುರುವಂದನಾ ಕಾರ್ಯಕ್ರಮವು ವಿಜಯ ವಿಠ್ಠಲ ದೇವಸ್ಥಾನದಲ್ಲಿ ಸಂಪನ್ನ

ಸಿರುಗುಪ್ಪ:ವಿಶ್ವ ಮದ್ವ ಮಹಾಪರಿಷತ್ತಿನ ಅಂಗಸಂಸ್ಥೆಯವರು ಜಗನ್ನಾಥದಾಸವರೇಣ್ಯರ ಹರಿಕಥಾಮೃತಸಾರ ಮತ್ತು ಅನ್ಯಮತೀಯ ದಾಸರು ದಾಸಿಯರ ಚರಿತ್ರೆಗಳನ್ನು ಒಳಗೊಂಡಂತೆ ದಾಸ,ದಾಸಶ್ರೀ, ದಾಸ ನಿಧಿ, ದಾಸರತ್ನ, ಹಾಗೂ ದಾಸ ಶಿರೋಮಣಿ ಹೆಸರಿನ ಪರೀಕ್ಷೆಗಳನ್ನು ನಡೆಸುತ್ತಾರೆ.

ಈ ಹಿನ್ನಲೆಯಲ್ಲಿ
ಸಿರುಗುಪ್ಪ ಅಂಗಸಂಸ್ಥೆಯವರು ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಹಿಳೆಯರಿಗೆ ಪ್ರಶಸ್ತಿಪತ್ರಗಳನ್ನು, ನೆರೆ ಜಿಲ್ಲೆ ಕೊಪ್ಪಳದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಪದಕಿಯ ಅಧ್ಯಕ್ಷ ಪ್ರಮೋದಾಚಾರ್ಯ ಪೂಜಾರ್ ರವರು ಇಲ್ಲಿಗೆ ಆಗಮಿಸಿ ಪ್ರಶಸ್ತಿಗಳನ್ನು
ವಿತರಣೆ ಮಾಡಿದರು.

ಈ ವಿಶೇಷ ಸಂದರ್ಭದಲ್ಲಿ
ವಿದ್ಯಾಲಯದ
ಉಪನ್ಯಾಸಕರು ಮತ್ತು ಮುಖ್ಯಪ್ರಾದ್ಯಾಪಕರೂ ಆದ ಪ್ರಮೋದಾಚಾರ್
ಇವರೊಂದಿಗೆವಿಜಯವಿಠ್ಠಲ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು

ಆಚಾರ್ಯರು ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಂಗಳ ದ್ರವ್ಯಗಳೊಂದಿಗೆ
ಉಡಿ ತುಂಬುವ
ಸಾಮಾಗ್ರಿಗಳನ್ನು ಒಪ್ಪ ಓರಣವಾಗಿರಸಲಾಗಿತ್ತು.

ನಗರದ ವಿಜಯ ವಿಠಲ ಮಂಡಳಿಯ ಅನೇಕ ಸದಸ್ಯರು ಆಚಾರ್ಯರು ಆಗಮಿಸುತ್ತಿರುವ ಕಾರಣ ದೇವಸ್ಥಾನದ ಮುಂದಿನ ರಸ್ತೆಯನ್ನು ಅಲಂಕರಿಸಿದ್ದರು. ಆಚಾರ್ಯರು ಆಗಮಿಸುತ್ತಿದ್ದಂತೆ ಕಳಸ ಕನ್ನಡಿಗಳನ್ನು ಹಿಡಿದು ಬರ ಮಾಡಿಕೊಂಡರು

ಈ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರು ದಾಸರ ಭಜನೆಗಳೊಂದಿಗೆ
ಕೋಲಾಟವನ್ನು ಆಡುತ್ತಾ ಆಕರ್ಷಕ ಹೆಜ್ಜೆಗಳನ್ನು ಹಾಕುತ್ತಾ ತಮ್ಮ ಪ್ರತಿಭೆ ಪ್ರದರ್ಶಿಸಿದರು

ಈ ಕಾರ್ಯಕ್ರಮದ ನಿಮಿತ್ತ ದೇವಸ್ಥಾನದಲ್ಲಿನ ರುಕ್ಮಿಣಿ ಮತ್ತು ಪಾಂಡುರಂಗ ದೇವರ ಮೂರ್ತಿಗಳಿಗೆ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದಗಳನ್ನು ವಿತರಿಸಲಾಯಿತು

ಭಜನಾ ಮಂಡಳಿಯ ಅತ್ಯಂತ ಹಿರಿಯರೂ ಆದ ಶ್ರೀಮತಿ ಅನುರಾಧಾಬಾಯಿ ಮತ್ತು ಶ್ರೀಮತಿ ದ್ವಾರಕಾಬಾಯಿ ಇವರು ಎಲ್ಲಾ ಪರೀಕ್ಷೆಗಳಲ್ಯ ಅತೀ ಹೆಚ್ಚು ಅಂಕಗಳನ್ನು ಪಡೆದಿರುವುದು ವಿಷೇಶತೆ ಆಗಿದೆ

ದೇವಸ್ಥಾನದಲ್ಲಿ ಶ್ರೀಮತಿಯರಾದ
ವಾಣಿ ಕುಮುದಾ ಅನಸೂಯಾ,ಉಷಾ ಗೀತಾ, ಸರಳಾಬಾಯಿ,ಶೀಲಾ,ರಮಾಬಾಯಿ ಇವರು ಪೂಜಾ‌ ಕಾರ್ಯದಲ್ಲಿ ಸಹಕರಿಸಿದರು.

ಅರ್ಚಕ ಶ್ರೀಧರಾಚಾರ್ಯರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀಮತಿಯರಾದ ದ್ವಾರಕಾಬಾಯಿ ಅನುರಾಧಾಬಾಯಿ ವೀಣಾ ಅರುಣಾ ರಾಧಾ ಸುವರ್ಣ ಆನಂದಿನಿ ಪಾರ್ವತಿ ರಾಧಾ ಸೇರಿದಂತೆ ಅನೇಕರು ಸೇರಿ ಗುರುವಂದನಾ ಕಾರ್ಯವನ್ನು ಸಂಪನ್ನಗೊಳಿಸಿದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ