ಇಂದು ಸಿಂಧನೂರು ತಾಲೂಕಿನ ವಿಶ್ವಕರ್ಮ ಬಂಧುಗಳು ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಸನ್ಮಾನ್ಯ ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜವಳಗೇರಿ ಪರಮ ಪೂಜ್ಯರಾದ ಶ್ರೀ ಸೂರ್ಯನಾರಾಯಣ ಮಹಾಸ್ವಾಮಿಗಳು,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಕಾರ್ಯದರ್ಶಿ ಸೋಮಣ್ಣ ಪತ್ತಾರ ಸುಕಲಪೇಟೆ,ರಾಮು ಗುಣದಾಳ,ಕಾಳಪ್ಪ ಕಣ್ಣೂರು ಮಸ್ಕಿ,ವಿಜಯ ಮಸ್ಕಿ,ಬಸವರಾಜ ಪತ್ತಾರ ಕಮತಗಿ, ಸುರೇಶ ಸಂಗಾಪೂರ,ಚನ್ನಪ್ಪ ಕೆ.ಹೊಸಹಳ್ಳಿ, ರಾಜು ಬಳಗಾನೂರ,ಬ್ರಹ್ಮಯ್ಯ ಮಾನ್ವಿ ಇನ್ನಿತರರು ಉಪಸ್ಥಿತರಿದ್ದರು.