ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜನಮನಗೆದ್ದ ಹಳ್ಳಿ ಪ್ರತಿಭೆ ಕಲಾವಿದ ದುರುಗಪ್ಪ ಕಂಬಳಿ

ಕೊಪ್ಪಳ:ಪ್ರತಿಭೆ ಯಾರ ಸ್ವತ್ತೂ ಅಲ್ಲ ಅನ್ನುವ ಮಾತು ಕೇಳಿದ್ದೇವೆ.ಪ್ರತಿಭೆಗೆ ಬಡತನ ಸಿರಿತನ ಓದು ವಿದ್ವತ್ತಿನ ಭೇದ ಭಾವ ಇಲ್ಲ.ಕೆಲವರು ಹುಟ್ಟಿನಿಂದಲೇ ಕಲೆಯನ್ನ ಹೊತ್ತು ತರುತ್ತಾರೆ ಇನ್ನು ಕೆಲವರು ತಮ್ಮ ಪ್ರಯತ್ನದಿಂದ ಅದನ್ನು ಪಡೆಯುತ್ತಾರೆ.

ಬದುಕಿನ ವಿಶ್ವವಿದ್ಯಾಲಯದಲ್ಲಿ ಶಿಸ್ತಿನ ವಿದ್ಯಾರ್ಥಿಯಾಗಿರುವ ದುರುಗಪ್ಪ ಕಂಬಳಿ ಅವರು ನಮ್ಮ ನಡುವಿನ ಅಪರೂಪದ ಸಾಧಕ.ಬಾಲ್ಯದಿಂದಲೇ ಸಂಗೀತ, ಭಜನೆ,ನಾಟಕ,ಮಿಮಿಕ್ರಿ, ಅಭಿನಯ,ನೃತ್ಯ ಹೀಗೆ ಅನೇಕ ಕಲೆಗಳನ್ನ ಕರಗತ ಮಾಡಿಕೊಂಡಿರುವ ಗ್ರಾಮೀಣ ಭಾಗದ ಬಹುಮುಖ ಪ್ರತಿಭೆ.ಜನರು ಇವರನ್ನು ಜೂನಿಯರ್‌ ರಾಜು ತಾಳಿಕೋಟೆ ಅನ್ನುತ್ತಾರೆ ಅದನ್ನು ರಾಜು ಅವರ ಮಕ್ಕಳು ಕೂಡಾ ಒಪ್ಪಿಕೊಂಡು,ಗೌರವಿಸಿದ್ದಾರೆ.

ಮುತ್ನಾಳ ಪ್ಯಾಲೇಸ್ ಚಲನಚಿತ್ರದ ಮೂಲಕ ಬೆಳಕಿಗೆ ಬಂದಿರುವ ದುರುಗಪ್ಪ ಕಂಬಳಿ ಅವರು ಕೊಪ್ಪಳ ತಾಲ್ಲೂಕಿನ ಚಿಕ್ಕಸೂಳಿಕೇರಿ ಎಂಬ ಕುಗ್ರಾಮದಲ್ಲಿ ಜನಿಸಿದ್ದಾರೆ.ಇವರ ತಂದೆ ಕರಿಯಪ್ಪ ಕಂಬಳಿ ತಾಯಿ ದ್ಯಾಮವ್ವ ಕಂಬಳಿ ಇವರು ಇಂದು ತಮ್ಮ ಸಾಧನೆಯಿಂದ ರಾಜ್ಯ ಹಾಗೂ ಅಂತರರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಕಿರುಚಿತ್ರ, ಸಿನಿಮಾ, ನಾಟಕ,ಟಿಕ್ ಟಾಕ್,ರೀಲ್ಸಗಳ ಮೂಲಕ ಜನರ ಹೃದಯದಲ್ಲಿ ಉಳಿದಿದ್ದಾರೆ.ಇವರನ್ನು ಹಚ್ಚಿಕೊಂಡಿರುವ ಅನೇಕ ಪ್ರೇಕ್ಷಕ ಹಾಗೂ ಅಭಿಮಾನಿ ಬಳಗ ಇದೆ.

ಶಾಲೆಯ ಶಿಕ್ಷಣ ಪಡೆಯದ ದುರುಗಪ್ಪ ಅವರು ಮೊದಲು ಕುರಿ ದನಗಳನ್ನು ಕಾದು ಬವಣೆ ಪಟ್ಟಿದ್ದಾರೆ.ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಇವರು ತಂದೆಯ ಆಶ್ರಯದಲ್ಲಿ ಬೆಳೆದಿದ್ದಾರೆ.ಇವರು ತಮ್ಮ ಸ್ವಂತ ಪ್ರಯತ್ನ, ಪರಿಶ್ರಮ,ಛಲ,ಆತ್ಮವಿಶ್ವಾಸದ ಮೂಲಕ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ.ರಂಗಭೂಮಿಯಲ್ಲಿ ಹಾಸ್ಯ ಕಲಾವಿದರಾಗಿ ನಟಿಸುವ ಇವರು ಅಷ್ಟೇ ಲೀಲಾಜಾಲವಾಗಿ ಅಭಿನಯಿಸುತ್ತಾರೆ ಕ್ಷಣಾರ್ಧದಲ್ಲಿ ಹಾಡುಗಳನ್ನು ಕಟ್ಟಿ ಜನರನ್ನು ರಂಜಿಸುತ್ತಾರೆ ಇವರು ಹಳ್ಳಿ ಜನರ ಫೇವರೇಟ್ ನಟ.

ಇವರ ಅಭಿನಯ ಮೆಚ್ಚಿ ಸುತ್ತಮುತ್ತಲಿನ ಹಾಗೂ ದೂರದ ಜಿಲ್ಲೆಗಳಿಗೆ ಆಹ್ವಾನಿಸಿ ಅವಕಾಶ ನೀಡಿದ್ದಾರೆ,ಗೌರವಿಸಿದ್ದಾರೆ.ಅಪಾರ ಜ್ಞಾಪಕ ಶಕ್ತಿ ಹೊಂದಿರುವ ಇವರು ಜಾನಪದ,ತತ್ವಪದ,ಭಜನೆ ಪದ,ಹಂತಿಪದ,ಲಾವಣಿಪದ,ಹಳೆಗನ್ನಡ ಪದ,ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.

ಊರಿನಲ್ಲಿ ಚಿಕ್ಕ ಹೋಟೆಲ್‌ ಇಟ್ಟುಕೊಂಡಿರುವ ಇವರು ಕಷ್ಟ,ಸಮಸ್ಯೆ,ಅವಮಾನ,ಬಡತನದ ಮಧ್ಯೆ ಜೀವನ ಸಾಗಿಸಿದ್ದಾರೆ,ಇವರಿಗೆ ಮೂರು ಜನ ಹೆಣ್ಣುಮಕ್ಕಳು ಒಬ್ಬ ಮಗ ಇದ್ದಾರೆ.ಮಕ್ಕಳು ಕೂಡಾ ಕಿರುಚಿತ್ರ ಕಲಾವಿದರು.ಇವರ ಕನಸಿಗೆ ಹೆಂಡತಿ ಲಕ್ಷ್ಮವ್ವ ಹಾಗೂ ಮಗ ಭೀಮಣ್ಣ ಅವರು ಸಾಥ್ ನೀಡಿದ್ದಾರೆ.

ಪಾಂಡುರಂಗನ ಅಪ್ಪಟ ಭಕ್ತರಾಗಿರುವ ಇವರು ಪ್ರತಿ ವರ್ಷ ಫಂಡರಾಪುರಕ್ಕೆ ಪಾದಯಾತ್ರೆ ಮಾಡುತ್ತಾರೆ.ಯಾವುದೇ ದುಶ್ಚಟ ಇಲ್ಲದ ಸರಳ ಸಜ್ಜನ ವ್ಯಕ್ತಿ ಇವರು ನಟಿಸಿರುವ ಕಿರುಚಿತ್ರಗಳು ಅನೇಕ.ಅವುಗಳೆಂದರೆ
1)ಜಾನಕಿ
2)ಬಸಪ್ಪನವರು
3)ಗೌಡ್ರ ಋಣ
4)ಹಳ್ಳಿ ಹೆಂಡ್ತಿ
5)ಸಿಟಿ ಹೆಂಡ್ತಿ
6)ಆನ್ ಲೈನ್ ಕ್ಲಾಸ್
7)ಗೌರಮೆಂಟ್ ಸಾಲಿ
8)ಕುಡುಕ ರಂಗ
9)ರೈತ ಶಂಕ್ರಪ್ಪ
10)ಸೈನಾ
11)ಸ್ಪಷ್ಟ ಕನಸು
12)ಅವಿಭಕ್ತ ಕುಟುಂಬ
13)ತಾಯಿಯ ಮಡಿಲು
14)ಹಳ್ಳಿ ಮಂದಿ
15)ಅಣ್ಣ ತಮ್ಮ
16)ಪರಿವರ್ತನೆ ಭಾಗ 1
17)ಪರಿವರ್ತನೆ ಭಾಗ 2
18)ಹಳ್ಳಿ ಕಾಲೇಜು
19)ಕನಸಿನ ಹಾದಿ
20)ನಮ್ಮೂರ ರೇಖಾ
21)ರಿಚ್ ಹುಡುಗಿ
22)ಅಂತರ
23)ಫಸ್ಟ್ ವಾರ್ನಿಂಗ್
24)ಮಗನ ಮದುವೆ
25)ನಮ್ಮ ಪೋಲಿಸ್ರು
26)ಪ್ರೇಮದ ಕಾಣಿಕೆ
27)ಮುಗ್ಧನ ಮದುವೆ
28)ಕೊನೆಗೂ ಕೈ ಬಿಡಲಿಲ್ಲ ಭೂಮಿ ತಾಯಿ
29)ಅನಾಥನ ಮದುವೆ
30)ಫಾಲ್ತು ಪರಮೇಶಿ ಭಾಗ 1
31)ಫಾಲ್ತು ಪರಮೇಶಿ ಭಾಗ 2
32)ಫಾಲ್ತು ಪರಮೇಶಿ ಭಾಗ 3
33)ರೈತನ ಬಾಳು
34)ಕಾವೇರಿ
35)ಜನಕ

ಅಭಿನಯಿಸಿದ ಚಲನಚಿತ್ರಗಳು
1)ಮುತ್ನಾಳ ಪ್ಯಾಲೇಸ್
2)ನವ ಭಾರತ
3)ನೈಂಟಿ ಹೊಡಿ ಮನಿಗಿ ನಡಿ
4)ಗಿರ್ಕಿ

ಇವರಿಗೆ ಯಾವುದೇ ಡೈಲಾಗ್ ಬರೆಯುವ ಅವಶ್ಯಕತೆ ಇರುವುದಿಲ್ಲ.ತಮ್ಮ ವಾಕ್ ಚಾತುರ್ಯದ ಮೂಲಕ ಜನರನ್ನ ಕಟ್ಟಿಹಾಕುತ್ತಾರೆ.ಇವರು ಪುಟಗಟ್ಟಲೆ ಮಾತುಗಳನ್ನು ತಡವರಿಸದೆ ಒಪ್ಪಿಸುತ್ತಾ,ಹೊಸ ಹೊಸ ಹಾಸ್ಯಗಳನ್ನು ಸೃಷ್ಠಿಸುತ್ತಾರೆ ಗ್ರಾಮೀಣ ಭಾಗದಲ್ಲಿ ಇವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ ಅವುಗಳೆಂದರೆ
1)ಕಂಗೆಟ್ಟ ಹುಲಿ
2)ನ್ಯಾಯ ನೀಡಿದ ಹುಲಿ
3)ಬಡವ ಬೀಸಿದ ಕೊಡ್ಲಿ
4)ಕೊಬ್ಬಿ ನಿಂತ ಕರಿಚಿರತೆ
5)ದಿಲ್ಲಿ ಹೊಕ್ಕ ಪುಂಡ ಹುಲಿ
6)ರಕ್ತ ರಾತ್ರಿ

ಸೇರಿದಂತೆ ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಕಲಾ ಸೇವೆ ಮಾಡಿದ್ದಾರೆ.ಕಲಾಭಿಮಾನಿಗಳ ಪ್ರೀತಿ,ಆಶೀರ್ವಾದ ಗಳಿಸಿದ್ದಾರೆ.ಆರೋಗ್ಯ,ಶಿಕ್ಷಣ ಕ್ಕೆ ಸಂಬಂಧಿಸಿದ ಬೀದಿ ನಾಟಕಗಳಲ್ಲಿ ಅಭಿನಯಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ

ಇವರು ಪ್ರತಿಭೆಗಳ ಕಣಜ.ಇವರ ತಲೆಯಲ್ಲಿ ಸಾಕಷ್ಟು ಕತೆಗಳಿವೆ.ರಿಯಾಲಿಟಿ ಶೋ ಗಳಿಗೆ ಹೋಗುವಂತೆ ಹೇಳಿದರೆ “ನನಗೆ ಜನರ ಪ್ರೀತಿ,ಅಭಿಮಾನ ಸಾಕು ಅದೇ ನನಗೆ ಆಸ್ತಿ” ಅನ್ನುತ್ತಾರೆ.ಸ್ವಂತ ಯೂಟ್ಯೂಬ್ ಚಾಲನ್ ಹೊಂದಿರುವ ಇವರು ಮಿಲಿಯನ್ ಗಟ್ಟಲೆ ವೀವ್ಸಗಳನ್ನು,ರಾಶಿ ರಾಶಿ ಕಮೆಂಟ್ ಗಳನ್ನು ಪಡೆದಿದ್ದಾರೆ.

ಮನದಲ್ಲಿ ನೂರಾರು ನೋವುಗಳಿದ್ದರೂ ಅವುಗಳನ್ನು ಒತ್ತಿಕೊಂಡು ಜನರಿಗೆ ಖುಷಿ ಕೊಡುವ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.ಬಡತನ ಇವರಿಗೆ ಅಡ್ಡ ಬಂದಿಲ್ಲ.ಕಣ್ಣುಗಳಲ್ಲಿ ಕನಸುಗಳನ್ನು ಕಟ್ಟಿಕೊಂಡು ಹಗಲು ರಾತ್ರಿ ಧ್ಯಾನಿಸುವ ಇವರು ಅನನ್ಯ ಕನಸುಗಾರ.ತಾನು ಎಷ್ಟೇ ಎತ್ತರ ಬೆಳೆದರೂ ಚೂರು ಅಹಂಕಾರ ಇಲ್ಲದ ಮುಗ್ಧ ಹೃದಯಿ,ಕಲಾ ಪೋಷಕ.ಹುಟ್ಟಿದವರು ಕೊನೆಗೆ ಸಾಯುತ್ತಾರೆ ಆದರೆ ಕಲಾವಿದರು ಮಾತ್ರ ಜೀವಂತ ಉಳಿಯುತ್ತಾರೆ ಅನ್ನುವ ಮಾತಿಗೆ ಇವರೆ ಸಾಕ್ಷಿ.

ಮಕ್ಕಳ ಶಿಕ್ಷಣ,ಸಂಸಾರದ ಭಾರ, ಜೊತೆಗೆ ಕನಸುಗಳ ಬೆನ್ನು ಹತ್ತಿರುವ ದುರುಗಪ್ಪ ಅವರಿಗೆ ಸಹೃದಯರ ಪ್ರೀತಿ,ಸಹಕಾರ, ಸಹಾಯದ ಅಗತ್ಯವಿದೆ.ಕೈ ಜೋಡಿಸುವ,ಗುರುತಿಸುವ ಮನಸ್ಸುಗಳು ಬೇಕಾಗಿವೆ.

ವಿಪರೀತ ಸ್ವಾಭಿಮಾನಿ ಯಾಗಿರುವ ಇವರು ತಮ್ಮ ಅನ್ನವನ್ನ ತಾವೇ ಸಂಪಾದಿಸುತ್ತಾರೆ.ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಇವರು ಅಲ್ಲಿ ನಿಲ್ಲುವುದಿಲ್ಲ.ಯಾವುದೇ ಪ್ರಚಾರದ ಹಂಗು ಇಲ್ಲದೆ ಬೆಳೆದ ಜವಾರಿ ಗಟ್ಟಿ ಪ್ರತಿಭೆ.ಖ್ಯಾತ ಯೂಟ್ಯೂಬ್ ರ ಹಾಗೂ ಕಲಾವಿದರ ಸಂಪರ್ಕ ಇಟ್ಟುಕೊಂಡಿರುವ ಇವರು ಅವರ ಪ್ರೀತಿ, ಸ್ನೇಹ ಗಳಿಸಿದ್ದಾರೆ.ಇಂತಹ ಹಳ್ಳಿ ಪ್ರತಿಭೆಗಳು ಮುನ್ನೆಲೆಗೆ ಬರಬೇಕು ಇವರಿಗೆ ಗೌರವ,ಮಾಶಾಸನ ಸಿಗಬೇಕು ಅಂದಾಗ ಮಾತ್ರ ಅದಕ್ಕೊಂದು ಗೌರವ.

ರಂಗಭೂಮಿ ನಟರಾಗಿ,ಕಿರುಚಿತ್ರ,ಸಿನಿಮಾ ನಟರಾಗಿ,ಜಾನಪದ ಗಾಯಕರಾಗಿ ಜನರ ಮನಸ್ಸಿಗೆ ಸಂತೋಷ ನೀಡುವ ಹೆಬ್ಬಯಕೆ ಹೊಂದಿರುವ ಇವರ ಕಲೆ,ಅಭಿನಯ,ಹಾಡುಗಾರಿಕೆ ವಿಶಿಷ್ಟ.ಯಾವುದೇ ಸಿನಿಮಾ ಸ್ಟಾರ್ ಗೂ ಕಡಿಮೆ ಇಲ್ಲದಂತೆ ನಟಿಸುವ ಹಾಗೂ ಅಭಿಮಾನಿ ವರ್ಗ ಹೊಂದಿರುವ ಇವರಿಗೆ ನಾಡಿನ ಜನರ ಮೆಚ್ಚುಗೆ,ಶುಭ ಹಾರೈಕೆ ಸದಾ ಇರಲಿ ಎನ್ನುವುದೆ ನಮ್ಮೆಲ್ಲರ ಕೋರಿಕೆ.

ದುರುಗಪ್ಪ ಕಂಬಳಿ ಅಪ್ಪಟ ಗ್ರಾಮೀಣ ಪ್ರತಿಭೆ,ಮೃದು ಜೀವಿ,ಅಭಿಜಾತ ಕಲಾವಿದ.ಅವರ ಅನೇಕ ಕಿರುಚಿತ್ರಗಳನ್ನು ಗಮನಿಸಿದ್ದೇನೆ.ಅವರಿಗೆ ಶುಭವಾಗಲಿ
-ಪುರುಷೋತ್ತಮ ಜೂಡಿ.
ಚಿತ್ರ ನಿರ್ದೇಶಕ.

ಸಂಪರ್ಕ-
ದುರುಗಪ್ಪ ಕಂಬಳಿ-8494870299

-ಸುರೇಶ ಕಂಬಳಿ
ಕೊಪ್ಪಳ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ