ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಸಾಗಿತು ಈ ಸಂದರ್ಭದಲ್ಲಿ ಉದ್ಘಾಟನೆ ಅಧ್ಯಕ್ಷರಾಗಿ ಆಗಮಿಸಿದ ಲಿಂಗಸಗೂರು ಶಾಸಕರು ಶ್ರೀ ಡಿ.ಎಸ್.ಹೂಲಗೇರಿ ಹಾಗೂ ಮಾನಪ್ಪ ವಜ್ಜಲ್ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿ ಮತ್ತು ಶ್ರೀ ರಾಜಾ ಅಮರೇಶ ನಾಯಕ ಸಂಸದರು ರಾಯಚೂರು ಇವರ ಉದ್ಘಾಟನೆ ಮೂಲಕ ಜಾನುಪದ ಕಲೆಗಳು ಹಾಗೂ ಸಾಂಸ್ಕೃತಿಕ ನೃತ್ಯಗಳ ಜೊತೆ ಸಾಗಿದ ಕನ್ನಡ ಹಬ್ಬಅತ್ಯಂತ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ರಾಯಚೂರು ಸಂಸದರಾದಂತಹ ಶ್ರೀ ರಾಜಾ ಅಮರೇಶ ನಾಯಕ ಹಾಗೂ ಲಿಂಗಸಗೂರು ಶಾಸಕರು ಶ್ರೀ ಡಿ.ಎಸ್.ಹೂಲಗೇರಿ ಹಾಗೂ ಮಾನಪ್ಪ ವಜ್ಜಲ್ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿ ಇವರು ಮಾತನಾಡಿ
ಶಿಕ್ಷಣದ ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿದರೆ ಮಕ್ಕಳು ತಮ್ಮ ಗ್ರಹಿಕಾ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ.ದಿನೇದಿನೇ ಮಕ್ಕಳ ನಾಲಿಗೆಯಿಂದ ಕನ್ನಡ ಭಾಷೆಯ ಬೀಜಗಳು ಮಾಯವಾಗುತ್ತಿವೆ ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.”ನಮ್ಮ ಪರಿಸರದ ನಾಶ ಎಂದರೆ ಅದು ಇಡೀ ಜೀವ ಜಗತ್ತಿನ ನಾಶ,ಬಡವರ ನಾಶ” ಎಂದ ಅವರು,”ನಮ್ಮ ಗುರಿಯು ಬಡತನದ ನಿರ್ಮೂಲನೆಯಲ್ಲ,ಐಶ್ವರ್ಯದ ಧ್ರುವೀಕರಣವಾಗುವುದು”ಎಂದರು.”ಯಾವ ಭಾಷೆಯೂ ಇನ್ನೊಂದು ಭಾಷೆಯನ್ನು ಅಳಿಸಿ ಹಾಕಬಾರದು.ನಾವು ಕನ್ನಡವನ್ನೇ ಜೀವಿಸಬೇಕು. ಕನ್ನಡದ ಪತ್ರಿಕೆಗಳನ್ನು ಓದಬೇಕು.ಕನ್ನಡದ ಸಿನಿಮಾಗಳನ್ನು ನೋಡಬೇಕು ಕನ್ನಡ ಯಾವತ್ತೂ ಬೆಳಗುವ ದೀಪವಾಗಬೇಕು” ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಶಿಕ್ಷಣ ಸಂಸ್ಥೆಯಾದ ಅಲ್ಲಮಪ್ರಭು ನರ್ಸಿಂಗ್ ಕಾಲೇಜು ಇವರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ವಿಶೇಷವಾಗಿ ಗಮನ ಸೆಳೆಯಿತು. ಪುಸ್ತಕ ಪ್ರೇಮಿಗಳಿಗೆ ಅನೇಕ ಪುಸ್ತಕ ಶಿಬಿರಗಳು ಲಭ್ಯವಿದ್ದವು.
ಈ ಸಂದರ್ಭದಲ್ಲಿ ಅನೇಕ ಸಾಹಿತ್ಯ ಪ್ರೇಮಿಗಳು, ಸಾಹಿತಿಗಳು,ವಿದ್ಯಾರ್ಥಿಗಳು,ಶಿಕ್ಷಕರು ಭಾಗವಹಿಸಿದ್ದರು.