ಸಿರುಗುಪ್ಪ ತಾಲೂಕಿನ ಕೆಂಚಗಾರ ಬೆಳಗಲ್ಲು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣದ ವ್ಯವಸ್ಥೆಯ ಅಧ್ಯಯನಕ್ಕಾಗಿ ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿದ್ದರು
ತಾಲೂಕಿನ ಬೆಳೆಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಂಟು ಮತ್ತು ಒಂಬತ್ತನೇ ತರಗತಿಯ ಒಟ್ಟು 86 ವಿದ್ಯಾರ್ಥಿಗಳು ಮತ್ತು ಓರ್ವ ಡಿ ಗ್ರೂಪ್ ನೌಕರ,ಮೂರು ಜನ ಅತಿಥಿ ಶಿಕ್ಷಕರು ಹಾಗೂ ಶಿಕ್ಷಕರುಗಳು ಸೇರಿ ಒಟ್ಟು 11 ಜನರು,ಶಾಲಾ ಮಕ್ಕಳೊಂದಿಗೆ ಮಾನ್ಯತೆ ಪಡೆದ ಮೂರು ಖಾಸಗಿ ಬಸ್ಸುಗಳಲ್ಲಿ ಇದೇ ತಿಂಗಳ ಡಿಸೆಂಬರ್ 5 ರಂದು ಶಿರಸಿ, ಹೊರನಾಡು,ಶೃಂಗೇರಿ,ಧರ್ಮಸ್ಥಳ,ಬೇಲೂರು, ಹಳೇಬೀಡು,ಶ್ರವಣಬೆಳಗೊಳ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಒಟ್ಟು ಐದು ದಿನಗಳ ಶಾಲಾ ಶೈಕ್ಷಣಿಕ ಪ್ರವಾಸ ಬೆಳೆಸಿದ್ದರು
ಅಂತಿಮ ದಿನವಾದ ಶುಕ್ರವಾರ ಮಧ್ಯಾನ್ಹ ನಂತರ ಅವಧಿಯಲ್ಲಿ ಶ್ರವಣಬೆಳಗೊಳ ಜೈನಬಸದಿ ಮತ್ತು ಗೊಮ್ಮಟೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು.ಬೆಟ್ಟದಿಂದ ಮೆಟ್ಟಿಲುಗಳಿಂದ ಜಾರಿ ಬಿದ್ದ 9ನೇ ತರಗತಿಯ ವಿದ್ಯಾರ್ಥಿನಿ ನಾಗಲಕ್ಷ್ಮಿಯ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆಕೆಯನ್ನು ಹಾಸನದ ಆಸ್ಪತ್ರೆಯಲ್ಲಿ ಸೇರಿಸಲಾಯಿತು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆಂದು ತಿಳಿದು ಬಂದಿದೆ
ಶಾಲಾ ಮುಖ್ಯೋಪಾಧ್ಯಾಯ ರಸೂಲ್ ಸೇರಿದಂತೆ ಇನ್ನಿತರರು ಅಲ್ಲಿಯೇ ಇದ್ದು ಶವ ಪರೀಕ್ಷೆ ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಳಿಸಿ ವಿದ್ಯಾರ್ಥಿನಿಯ ಮೃತ ದೇಹದೊಂದಿಗೆ ವಾಪಸಾಗಿದ್ದಾರೆ
ಇನ್ನುಳಿದ ಮಕ್ಕಳು ಹಾಗೂ ಕೆಲ ಶಿಕ್ಷಕರುಗಳು ಗ್ರಾಮಕ್ಕೆ ಮೊದಲೇ ಇಂದು ಮಧ್ಯಾಹ್ನದ ವೇಳೆ ವಾಪಾಸಾದರು
ಮೃತಪಟ್ಟ ವಿದ್ಯಾರ್ಥಿನಿ ನಾಗಲಕ್ಷ್ಮಿಯ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಗುರಪ್ಪ ಹಾಗೂ ಇನ್ನಿತರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು ಕುಟುಂಬಕ್ಕೆ ಸಾಂತ್ವನ ಹೇಳುವುದು ಹಾಗೂ ಶಾಲಾ ಸುಧಾರಣಾ ಸಮಿತಿಯವರೊಂದಿಗೆ ಘಟನೆಯ ಕುರಿತಾಗಿ ವಿಷಯ ಸಂಗ್ರಹ ಪಾಲಕ ಪೋಷಕರಿಗೆ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ತಿಳಿಸಿದ್ದಾರೆ.
ಆದರೆ ಈ ವೇಳೆ ಅನೇಕ ಗ್ರಾಮಸ್ಥರು ಮತ್ತು ಪಾಲಕ ಪೋಷಕರಿಂದ ಶಿಕ್ಷಕರ ನಿರ್ಲಕ್ಷದ ಕುರಿತಾಗಿಯೂ ಅನೇಕ ಮಾತುಗಳು ಕೇಳಿ ಬರುತ್ತಿವೆ.