ಸಿರಗುಪ್ಪ:ಶ್ರೀರಾಘವೇಂದ್ರ ಸ್ವಾಮಿಗಳ ವಿದ್ಯಾಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳ ಅಮೃತ ಹಸ್ತದಿಂದ ಸಿರುಗುಪ್ಪ ತಾಲೂಕು ಬ್ರಾಹ್ಮಣ ಸಂಘದ ಉದ್ಘಾಟನೆಯಾಗುವುದಾಗಿ ಸುದ್ದಿಗೋಷ್ಠಿಯನ್ನು ಸಿರುಗುಪ್ಪ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಜೋಯಿಸ್ ಶನಿವಾರ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕುಲಕರ್ಣಿ ರಾಘವೇಂದ್ರ ಮಾತನಾಡಿ ಇದೇ ತಿಂಗಳ ಡಿಸೆಂಬರ್ 15ರ ದಿನಾಂಕದ ಗುರುವಾರ ಸಂಜೆ 5:00ಗೆ ನಗರದ ಶ್ರೀ ಶನೈಶ್ಚರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಸಿರುಗುಪ್ಪ ತಾಲೂಕು ಬ್ರಾಹ್ಮಣ ಸಂಘವು ಅಸ್ತಿತ್ವಕ್ಕೆ ಬರಲಿದ್ದು ಶ್ರೀಗಳು ಅಂದು ಪದಾಧಿಕಾರಿಗಳ ಘೋಷಣೆ ಮತ್ತು ಅವರುಗಳಿಗೆ ಜವಾಬ್ದಾರಿಗಳನ್ನು ನೀಡಲಿದ್ದಾರೆ ಸಂಘ ರಚನೆಯ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳ ಹಿಂದೆ ತಾಲೂಕು ವಿಪ್ರ ಸಮಾಜದವರು ಹಾಜರಿದ್ದ ಸಭೆಯಲ್ಲಿ 14 ಜನ ನಿರ್ದೇಶಕರುಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿತ್ತು. ಇದುವರೆಗೂ ಸಮಾಜದ ಬಾಂಧವರಲ್ಲಿ ಯಾವುದೇ ಸಂಘದ ರಚನೆಯಾಗಿರಲಿಲ್ಲ ಎಂದು ತಿಳಿಸಿದರು
ಬ್ರಾಹ್ಮಣ ಸಮಾಜದ ಅಭಿವೃದ್ಧಿ ಮತ್ತು ಸಮಾಜದ ಎಲ್ಲರಿಗೂ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡುವ ಮುಖ್ಯ ಉದ್ದೇಶ ಹಾಗೂ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನ ಅಥವಾ ಹಿತಾಸಕ್ತಿಗಳಿಗೆ ಧಕ್ಕೆಯಾದಲ್ಲಿ ಕಾನೂನು ಪ್ರಕಾರವಾಗಿ ವಿರೋಧ ವ್ಯಕ್ತಪಡಿಸುವ ಮತ್ತು ಸೂಕ್ತ ಕ್ರಮಕ್ಕಾಗಿ ಕಾನೂನು ಹೋರಾಟಗಳನ್ನು ರೂಪಿಸಿ ಬ್ರಾಹ್ಮಣ ಸಮುದಾಯದ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಸಂಘ ಸ್ಥಾಪಿತವಾಗುತ್ತಿದೆ ಎಂದು ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಘವೇಂದ್ರಾಚಾರ್ ತಿಳಿಸಿದರು.
ಮಹಿಳಾ ಬ್ರಾಹ್ಮಣ ಸಂಘದ ಅಧ್ಯಕ್ಷೆ ಶ್ರೀಮತಿ ದೀಪಾ ಶ್ಯಾಮಾಚಾರ್ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಅನೇಕ ಅವಕಾಶಗಳನ್ನು ಕಲ್ಪಿಸಲಾಗುತ್ತಿದ್ದು ನಮ್ಮ ಸಮಾಜದ ಮಹಿಳೆಯರಿಗೂ ಸಹ ಉತ್ತಮ ಅವಕಾಶಗಳನ್ನು ರೂಪಿಸಿಕೊಡುವ ಹಿನ್ನೆಲೆಯಲ್ಲಿ ಮಹಿಳಾ ಘಟಕ ರಚಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಶ್ರೀನಿವಾಸಮೂರ್ತಿ ಮುಂದುವರೆದು ಮಾತನಾಡಿ ಸಂಘ ಉದ್ಘಾಟನೆಯ ದಿನದಂದು ಮಂತ್ರಾಲಯ ಕ್ಷೇತ್ರದ ಪೀಠಾಧಿಪತಿಗಳು ಸೇರಿದಂತೆ ಕ್ಷೇತ್ರದ ಶಾಸಕ ಎಂ.ಎಸ್ ಸೊಇಮಲಿಂಗಪ್ಪ ಮಾಜಿ ಶಾಸಕ ಬಿ.ಎಂ ನಾಗರಾಜ, ಸಿರುಗುಪ್ಪ ನಗರಸಭೆಯ ಅಧ್ಯಕ್ಷಿಣಿ ಕೆ.ಸುಶೀಲಮ್ಮ ವೆಂಕಟರಮರೆಡ್ಡಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಸಚ್ಚಿದಾನಂದಮೂರ್ತಿ ಅಖಿಲ ಕರ್ನಾಟಕ ಮಹಾಸಭಾದ ಪ್ರಮೋದ್ ಮನೋಲಿ,ಅಭಿವೃದ್ಧಿ ಮಂಡಳಿಯ ನಿರ್ದೇಶಕ ರಾಘವೇಂದ್ರ ಭಟ್, ಕಾರ್ಯಕಾರಿ ಸಮಿತಿಯ ಉಮೇಶ ಶಾಸ್ತ್ರಿ,ರಾಜ್ಯ ಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಎಂ.ಜಿ ಅನಂತಮೂರ್ತಿ,ಆಮ್ ಆದ್ಮಿ ಪಕ್ಷದ ಮುಖಂಡ ದರಪ್ಪ ನಾಯಕ,ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಪ್ರಕಾಶ ರಾವ್,ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಗಾಯಕ ಅನಂತ ಕುಲಕರ್ಣಿ ರಾಯಚೂರಿನ ಹಾಸ್ಯ ಕಲಾವಿದ ರಾಘವೇಂದ್ರಾಚಾರ್ ಸೇರಿದಂತೆ ಅನೇಕ ಪ್ರಮುಖರು ಆಗಮಿಸಲಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲು ತಾಲ್ಲೂಕು ಬ್ರಾಹ್ಮಣ ಸಂಘದವರಲ್ಲಿ ಮತ್ತು ಎಲ್ಲ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.