ಕಲಬುರ್ಗಿ:ಮೊದಲು ಪಕ್ಷ ಅಧಿಕಾರಕ್ಕೆ ತನ್ನಿ ಯಾರಿಗೆ ಸಿಎಂ ಮಾಡಬೇಕು ಯಾರನ್ನು ಮಂತ್ರಿ ಮಾಡಬೇಕಂಬುವುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅಧ್ಯಕ್ಷರಾಗಿ ಮೊದಲ ಬಾರಿಗೆ ಕಲಬುರ್ಗಿ ನಗರಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ ಕೋರಲು ಎನ್.ವಿ ಮೈದಾನದಲ್ಲಿ ಆಯೋಜನೆ ಮಾಡಿರುವ “ಕಲ್ಯಾಣ ಕ್ರಾಂತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಎಐಸಿಸಿ ಅಧ್ಯಕ್ಷನಾಗಿ ನಾನು ಮೊದಲ ಬಾರಿಗೆ ಕಲಬುರ್ಗಿ ನಗರಕ್ಕೆ ಆಗಮಿಸುತ್ತಿರುವುದರಿಂದ ತಾವೇಲ್ಲಾ ಸೇರಿ ಕಲಬುರ್ಗಿ ನಗರದಲ್ಲಿ ಸುಮಾರು ೫ ಕಿ.ಮೀ ವರೆಗೆ ಭವ್ಯ ಮೆರವಣಿಗೆ ಮೂಲಕ ನನಗೆ ಬರಮಾಡಿಕೊಂಡಿದ್ದೀರಿ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅಭಿಮಾನದಿಂದ ಸ್ಮರಿಸಿದರು.
ನಾನು ಯಾವುದನ್ನೂ ಬಯಸಲಿಲ್ಲ ಎಲ್ಲವೂ ನನಗೆ ಹುಡುಕಿಕೊಂಡು ಬಂದಿವೆ ನನಗೆ ಚುನಾವಣೆಗೆ ನಿಲ್ಲುವ ಮನಸ್ಸಿರಲಿಲ್ಲ ಆಗ ಸೋನಿಯಾ ಗಾಂಧಿ ಅವರು ಒತ್ತಾಯ ಮಾಡಿದರು ಅಂದು ಕಲಬುರ್ಗಿಯಲ್ಲಿ ನಡೆದ ಸಭೆಯಲ್ಲಿ ನಾನು ಆರಿಸಿ ಬಂದರೆ ಈ ಭಾಗಕ್ಕೆ ಆರ್ಟಿಕಲ್ ೩೭೧(ಜೆ) ಜಾರಿಗೆ ತರುವುದಾಗಿ ಪ್ರಮಾಣಮಾಡಿದರು ಅದರಂತೆ ನಾನು ಮೊದಲ ಬಾರಿಗೆ ಸಂಸತ್ತಿಗೆ ಸ್ಪರ್ಧೆ ಮಾಡಿದೆ ಆನಂತರ ಎಲ್ಲಾ ಸಂಸದರನ್ನು ವೈಯಕ್ತಿಕ ಭೇಟಿ ಮಾಡಿ ನಮಗೆ ಬೆಂಬಲ ನೀಡುವಂತೆ ಕೋರಿದೆ ಇದಕ್ಕೆ ಸೋನಿಯಾ ಗಾಂಧಿ ಅವರು ಸಲಹೆ ಸಹಕಾರ ಮಾರ್ಗದರ್ಶನ ನೀಡಿದರು ಅಲ್ಲದೆ ಅಂದು ರಾಜ್ಯದಲ್ಲಿದ್ದ ನಮ್ಮ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತರಲು ಸಮಿತಿ ರಚನೆ ಮಾಡಿದರು.
ಆರ್.ಟಿ.ಕಲ್ ೩೭೧(ಜೆ) ಜಾರಿಯಾದ ನಂತರ ಮೊದಲ ಬಾರಿಗೆ ವಾರ್ಷಿಕ ರೂ ೧೫೦೦ ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿ ಅದರಂತೆ ಅನುದಾನ ನೀಡಿದೆವು ಎಂದು ನೆನೆದರು. ಹಾಗೇಯೇ ಮುಂದೆ ಬಂದ ಸರ್ಕಾರಗಳು ಅದರಂತೆ ನಡೆದುಕೊಳ್ಳಲಿಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಾನು ಗುಜರಾತ್ ಗೆ ಹೋದಾಗ ಮೋದಿ ೭೧೦೦೦ ಸರ್ಕಾರದ ಹುದ್ದೆ ತುಂಬಿದ ಆದೇಶದ ಪ್ರತಿಯನ್ನು ಕೊಟ್ಟಿರುವ ಸುದ್ದಿಯನ್ನು ಟಿವಿಯಲ್ಲಿ ನೋಡಿದೆ. ಸರ್ಕಾರದ ಅಧಿಕಾರಿಗಳು ಮಾಡಿದ ಕೆಲಸವನ್ನು ಪ್ರಧಾನಿಗಳು ನಾನು ಮಾಡಿದೆ ಎಂದು ಹೇಳಿ ಪ್ರಚಾರ ತೆಗೆದುಕೊಂಡರು ಆದರೆ ದೇಶದಲ್ಲಿ ೩೦ ಲಕ್ಷ ಹುದ್ದೆಗಳು ಖಾಲಿ ಇವೆ ಅವುಗಳನ್ನು ತುಂಬುತ್ತಿಲ್ಲ ಈ ಹುದ್ದೆ ಭರ್ತಿಯಾದರೆ ಎಷ್ಟು ಕುಟುಂಬಗಳಿಗೆ ಅನುಕೂಲವಾಗಲಿದೆ ಅಂದಾಜು ಎರಡು ಕೋಟಿ ಜನರಿಗೆ ಅನ್ನ ಸಿಗಲಿದೆ ಆಗ ಕೆಲಸ ಮಾಡುವ ಬದಲು ಬರೀ ಮಾತುಗಳೇ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಈ ಭಾಗದ ಅಭಿವೃದ್ಧಿಗೆ ಪ್ರತಿ ವರ್ಷ ರೂ.೫೦೦೦ ಕೋಟಿ ಅನುದಾನ ನೀಡುವುದರ ಜೊತೆಗೆ ಹೊಸ ಕೈಗಾರಿಕೆ ನೀತಿ ಜಾರಿಗೆ ತರುವ ಮೂಲಕ ಒಂದು ಲಕ್ಷ ಹುದ್ದೆ ಸೃಷ್ಟಿಸುತ್ತದೆ.
ಗೋದಾವರಿ ಹಾಗೂ ಕೃಷ್ಣ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡುತ್ತೇನೆ.
ಈ ಭಾಗದ ಜನರಿಗೆ ಮನೆ ಕಟ್ಟಿ ಕೊಡಲಿದ್ದೇವೆ ನಾವು ಭರವಸೆ ನೀಡಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ