ಹನೂರು ತಾಲೂಕಿನ ಕ್ಷೇತ್ರದ ಮಧುವನ ಹಳ್ಳಿ ಸಮೀಪದ ನಿಸರ್ಗ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಚಿಂತನ ಮಂಥನ
ಸಮಾನಮನಸ್ಕರ ಸಭೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಹಾಗೂ ಲೋಕ್ಕನಹಳ್ಳಿಯ ವಿಷ್ಣು ಕುಮಾರ್ ಬೆಂಬಲಿಗರು ಸಾಮೂಹಿಕವಾಗಿ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಮುಖಂಡ ನಿಶಾಂತ್ ರವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಮಹದೇವಸ್ವಾಮಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕಾರ್ಯಕರ್ತರಲ್ಲಿ ಆದ ಗೊಂದಲದಿಂದ ನಾವು ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜುನಾಥ್ ರವರನ್ನು ಬೆಂಬಲಿಸಬೇಕಾಯಿತು ಕಳೆದ ಚುನಾವಣೆಯ ನಂತರ ಮಂಜುನಾಥ್ ರವರನ್ನು ನಮ್ಮನ್ನು ಯಾವುದೇ ಪಕ್ಷ ಸಂಘಟನೆಗೆ ಹಾಗೂ ಯಾವುದೇ ಕಾರ್ಯ ಕ್ರಮದಲ್ಲಿ ತೆಗೆದುಕೊಳ್ಳದ ಹಿನ್ನೆಲೆ ಇದೀಗ ಚುನಾವಣೆ ಬಂದಿರುವುದು ಸುಮ್ಮನೆ ಕೂರಲು ಸಾಧ್ಯವಾಗದೆ ಸಮಾನ ಮನಸ್ಕರಾದ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಶಾಂತ್ ಕ್ಷೇತ್ರದ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ ಜಾತಿ ಸಮುದಾಯ ಪಕ್ಷ ಎಲ್ಲವನ್ನು ಮೀರಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಸಂಕಲ್ಪವೇ ನನ್ನ ಗುರಿ ಇದು ನನ್ನ ಜೀವನದಲ್ಲಿ ಮರೆಯಲಾಗದ ದಿನ ಹಿರಿಯ ಮುಖಂಡರೆ ಎಲ್ಲರೂ ಜೆಡಿಎಸ್ ಪಕ್ಷ ತೊರೆದು ನನಗೆ ಬೆಂಬಲ ನೀಡಿರುವುದರಿಂದ ನನಗೆ ಆನೆ ಬಲ ಬಂದಂತಾಗಿದೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೋಡುತ್ತೇನೆ ಎಂದರು.
ಕ್ಷೇತ್ರದ ಹತ್ತಾರು ಮುಖಂಡರು ಅಭಿಪ್ರಾಯ ಮಂಡಿಸಿ ಇದರಲ್ಲಿ ಹೆಚ್ಚಿನ ಮುಖಂಡರು ನಿಶಾಂತ್ ರವರ ಪರವಾಗಿತ್ತು.
ಪೊನ್ನಾಚಿ ಮಹಾದೇವಸ್ವಾಮಿ,ಮಂಗಲ ರಾಜಶೇಖರ,ಪೊನ್ನಾಚಿ ಅಧ್ಯಕ್ಷರಾದ ಶಿವ ಬಸವಪ್ಪ ,ಲೊಕ್ಕನಹಳ್ಳಿ ವಿಷ್ಣುಕುಮಾರ್,ವಡಿವೇಲು , ರಾಮಲು,ಪುಟ್ಟರಾಜು ಲಾಯರ್,ಗುರುಸ್ವಾಮಿ,ಅಧ್ಯಕ್ಷ , ಬೈಲೂರು ಮಹಾದೇವಸ್ವಾಮಿ ,ದಿವ್ಯಾನಂದಮೂರ್ತಿ,ಮಂಗಲ ವಿಶ್ವಣ್ಣ,ರಾಮಪುರ ಮಾದೇಶ್,ಸಿದ್ದಪ್ಪ, ಪಿ ಜಿ ಪಾಳ್ಯ ಬಸವರಾಜು,ಪಾಳ್ಯ ರಾಚಪ್ಪ,ಮರೂರು ಎಸ್ ಶಿವಣ್ಣ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ:ಉಸ್ಮಾನ್ ಖಾನ್.