ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಿಂದ ವೆಂಕಟೇಶ್ವರ ಕ್ಯಾಂಪ್ ರಸ್ತೆ ಮಾರ್ಗದಲ್ಲಿ ಸಾಮಾಜಿಕ ಅರಣ್ಯ ವಲಯ ಸಿಂಧನೂರು ವತಿಯಿಂದ ನೆಡಲಾದ ಸಸಿಗಳಿಗೆ ರೈತರು ಹೊಲಗಳ ಹುಲ್ಲಿಗೆ ಬೆಂಕಿ ಹಚ್ಚಿದಾಗ ಸಸಿಗಳಿಗೆ ತಗುಲಿ ಸಸಿಗಳು ಸುಟ್ಟು ಹೋಗಿದ್ದವು ಅದನ್ನು ತಿಳಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಸ್ಥಳಕ್ಕೆ ಭೇಟಿ ವೀಕ್ಷಿಸಿ ಮಾತನಾಡಿ ಸಿಂಧನೂರು ತಾಲೂಕಿನಾದ್ಯಂತ ರೈತರು ಭತ್ತ ಕಟಾವು ಮಾಡುತ್ತಿದ್ದು,ನಂತರ ಹುಲ್ಲಿಗೆ ಬೆಂಕಿ ಹಚ್ಚಿ ಹೊಲ ಮತ್ತೆ ಸಸಿನಾಟಿ ಮಾಡಲು ಹಸನುಮಾಡುತ್ತಿದ್ದಾರೆ.ರೈತರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಯಾರೂ ಕೂಡಾ ತಮ್ಮ ಹೊಲಗಳಲ್ಲಿ ಬೆಂಕಿ ಹಚ್ಚುವಾಗ ರಸ್ತೆ ಬದಿಯ ಸಸಿಗಳಿಗೆ ತಗುಲದಂತೆ ನೋಡಿಕೊಳ್ಳಿ,ಸಸಿಗಳಿಗೆ ಬೆಂಕಿ ತಗುಲಿದರೆ ಮತ್ತೆ ಚಿಗುರುವುದು ಕಠಿಣ ದಯಮಾಡಿ ರೈತ ಭಾಂಧವರಲ್ಲಿ ಸಸಿಗಳಿಗೆ ಬೆಂಕಿ ತಗುವುಲಾರದಂತೆ ನೋಡಿಕೊಳ್ಳಬೇಕು ಎಂದು ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ನಂತರ ಸಸಿಗಳ ಸುತ್ತಲೂ ಹುಲ್ಲು ಇರುವುದನ್ನು ಸ್ವಚ್ಛಗೊಳಿಸಿ ಎಲ್ಲಾ ಸಸಿಗಳಿಗೆ ನೀರುಣಿಸಿದರು.
ಈ ಸಂದರ್ಭದಲ್ಲಿ ವನಸಿರಿ ಸದಸ್ಯರಾದ ವೆಂಕಟರಡ್ಡಿ, ಗ್ರಾಮದ ಯುವಕರಾದ ಚಂದ್ರಪ್ಪಗೌಡ,ಹನುಮಂತ ಹಿರೇಮನಿ ಹಾಗೂ ಇನ್ನಿತರರು ಇದ್ದರು.