2022-23ನೇ ಸಾಲಿನ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಾದ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ, ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ಮಂಗಳ ವಾರ ಬೆಂಗಳೂರಿನ ರಾಜಭವನದಲ್ಲಿ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಕ್ರೀಡಾಸಚಿವ ಡಾ| ಕೆ.ಸಿ. ನಾರಾಯಣ ಗೌಡ ಉಪಸ್ಥಿತರಿದ್ದರು.
ವಿಜಯಪುರ ಶ್ರೀಮತಿ ಅಲ್ಕಾ ಎನ್ ಪಡತಾರೆ ಇವರು 1996-1998ರಲ್ಲಿ ಎಫ್ ಐ ಎಸ್ ಪದವಿಯನ್ನು ಸೈಂಗ್ ಕ್ರೀಡೆಯಲ್ಲಿ ಪಡೆದಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸೈಕ್ಲಿಂಗ್ ಅಂತರರಾಷ್ಟ್ರೀಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿರುತ್ತಾರೆ ಹಾಗೂ ಸಾರ್ಕ್ ಸೈಕ್ಲಿಂಗ್ ಚಾಂಪಿಯನ್ ಷಿಪ್ ನ ಭಾರತ ಮಹಿಳಾ ತಂಡ ತರಬೇತುದಾರರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಅಲ್ಲದೇ ಇವರಿಗೆ 1994ರಲ್ಲಿ ಉತ್ತಮ ಕ್ರೀಡಾಪಟು ಎಂದು ದಸರಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರಿಂದ ತರಬೇತಿ ಪಡೆದ ಕ್ರೀಡಾಪಟುಗಳಾದ ಗಂಗು ಬಿರಾದಾರ, ಕಾವೇರಿ ಬಣಕಾರ, ಸಾಬು ಗಾಣಿಗೇರ್, ಲಕ್ಷ್ಮಣ್ ಕುರಣಿ, ಸವಿತ ಅಣ್ಣೆಪ್ಪನವರ್, ಸವಿತ ಗೌಡ ಇವರುಗಳು ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಣಿಗಳನ್ನು ಪಡೆದಿರುತ್ತಾರೆ.
ಅವರಿಗೆ ರಾಜ್ಯ ಸರ್ಕಾರದಿಂದ ಜೀವಮಾನ ಸಾಧನೆ ಪುರಸ್ಕಾರ ಹಾಗೂ ತಲಾ 1.50 ಲಕ್ಷ ರೂ.ನೀಡಿ ಪುರಸ್ಕರಿಸಲಾಯಿತು
ಜೀವಮಾನ ಸಾಧನೆ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ ದಾನಮ್ಮನವರ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ಎಸ್.ಜಿ.ಲೋಣಿ ಮತ್ತಿತರರು ಇದ್ದರು.