ಹನೂರು ತಾಲೂಕಿನ ಮಹದೇಶ್ವರ ಕ್ರೀಡಾಂಗಣದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಗಣ್ಯರ ಜೊತೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಹಾಗೂ ಹನೂರು ವಿಧಾನ ಸಭಾ ಕ್ಷೇತ್ರ ಬಿಜೆಪಿ ಮುಖಂಡ ಬೀ.ವೆಂಕಟೇಶ್ ರವರು ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಸನ್ಮಾನ ಮಾಡಿದ ಸಂದರ್ಭ. ಕಾಡಂಚಿನ ಕ್ಷೇತ್ರವಾದ ಹನೂರಿನ ಅಭಿವೃದ್ಧಿಗೆ ವಿವಿಧ ಕೊಡುಗೆಗಳನ್ನು ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹನೂರಿನ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಆರ್.ಅಶೋಕ್, ಶ್ರೀ ವಿ.ಸೋಮಣ್ಣ, ಶಾಸಕರಾದ ಶ್ರೀ ಎನ್.ಮಹೇಶ್, ಶ್ರೀ ನಿರಂಜನ್ ಕುಮಾರ್, ಶ್ರೀ ನರೇಂದ್ರ .ಆರ್, ಮಾಜಿ ಶಾಸಕರಾದ ಶ್ರೀಮತಿ ಪರಿಮಲ ನಾಗಪ್ಪ, ಮುಖಂಡರಾದ ಶ್ರೀ ದತ್ತೇಶ್, ಶ್ರೀ ಪ್ರೀತಮ್ ನಾಗಪ್ಪ, ಶ್ರೀ ಜಯಸುಂದರ್, ಶ್ರೀ ಆರ್. ಸುಂದರ್, ಶ್ರೀ ನಿಜಗುಣ ರಾಜು, ಶ್ರೀಮತಿ ಗಾಯತ್ರಿ, ಶ್ರೀ ನಿಶಾಂತ್, ಜಿಲ್ಲಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವರದಿ ಉಸ್ಮಾನ್ ಖಾನ್.