ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾಹಿತಿಯನ್ನು ನೀಡಲು ನಿರಾಕರಿಸಿದ ಅಭಿವೃದ್ದಿ ಅಧಿಕಾರಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇ ಬೇನ್ನೂರು ಗ್ರಾಮ ಪಂಚಾಯತಿ ಅಭಿವೃದ್ಧಿ 2019 ರಿಂದ 2022 ರ ವರಗೆ ಅಭಿವೃದ್ಧಿ ನಡೆದ 14 ನೇ ಹಣಕಾಸಿನ ಯೋಜನೆಯಲ್ಲಿ ಬಂದಿರುವ ಅನುಧಾನ ಸಂಪೂರ್ಣ ಖರ್ಚು ವೆಚ್ಚ ಮತ್ತು ಕಾಮಗಾರಿ ಅಭಿವೃದ್ಧಿ ಹಕ್ಕು ಮಾಹಿತಿಯ ಪೈಕಿ 10/05/22 ರಂದು ಅಧಿಕಾರಿಯಾದ PDO ಮಹೇಶ್ ರಾಥೋಡ್ ಅವರಿಗೆ ಮಾಹಿತಿ ಪಡೆಯುವ ಹಕ್ಕು 2005 ರಡಿಯಲ್ಲಿ ಮಾಹಿತಿಗೆ ಅರ್ಜಿ ಸಲ್ಲಿಸಿ ಇಂದಿಗೆ 7 ತಿಂಗಳು ಕಳೆದರು ಪಂಚಾಯತಿಯ ಲೆಕ್ಕ ಬುಕ್ಕ ಇಲ್ಲದಾಗೆ ವರ್ಥಿಸುತ್ತಿರುವ PDO ಮಹೇಶ್ ರಾಠೋಡ್ ಅವರು ಮಾಹಿತಿ ನಿರಾಕರಿಸುತ್ತಿದ್ದಾರಾ?
ನಾವು ಒಂದು ಅವರಿಗೆ ಮಾಹಿತಿ ಕೇಳಿದ್ದೇವೆ.2019 ರಿಂದ 2022 ವರೆಗೆ 14ನೆಯ ಹಣಕಾಸಿನ ಯೋಜನೆಯಲ್ಲಿ ಬಂದಿರುವ ಅನುದಾನ ಸಂಪೂರ್ಣ ಖರ್ಚು ವೆಚ್ಚ ಮತ್ತು ಕಾಮಗಾರಿ ವಿವರ ಸಂಪೂರ್ಣ ಮಾಹಿತಿ ಕೊಡಬೇಕಾಗಿ ಎಂದು ಮಾಹಿತಿ ಕೇಳಲಾಗಿತ್ತು. ಆದರೆ ಇವರು ಯಾವುದೇ ರೀತಿ ಮಾಹಿತಿ ನಮಗೆ ಕೊಟ್ಟಿಲ್ಲ,
ಸರ್ಕಾರದ ಆದೇಶ ಇದೆ ಮಾಹಿತಿ ಕೇಳಿದ 45 ದಿನಗಳ ಒಳಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಬೇಕು ಆದರೆ ಮಾಹಿತಿಯನ್ನು ಕೇಳಿ 7 ತಿಂಗಳು ಕಳೆದರು ನಮಗೆ ಸಂಬಂಧ ಇಲ್ಲವೇನೋ ಅಥವಾ ಲೆಕ್ಕಾಚಾರದ ಪುಸ್ತಕ ಕಳೆದ ಹಾಗೆ ವರ್ತಿಸಿ ಹಲವಾರು ಅನುಮಾನಗಳಿಗೆ ಆಹ್ವಾನ ಮಾಡುತ್ತಿದ್ದಾರೆ.
ಹಿರೇಬೆನ್ನೂರು ಗ್ರಾಮ ಪಂಚಾಯತಿಯಲ್ಲಿದ್ದ ಜನಾರ್ದನ್ ಕುಲಕರ್ಣಿ ಅವರ ಎರಡೂವರೆ ವರ್ಷದ ಅಧಿಕಾರದಲ್ಲಿ 14 ನೇ ಹಣಕಾಸಿನ ಯೋಜನೆಯಲ್ಲಿ ನಡೆದ ಗೋಲ್ಮಾಲ್ ನಮಗೆ ಗೊತ್ತಿದ್ದು ಹಕ್ಕು ಮಾಹಿತಿಯನ್ನ ಕಾನೂನಾತ್ಮಕವಾಗಿ ಅರ್ಜಿ ಸಲ್ಲಿಸಿದರು ಇಂದಿನ PDO ಮಹೇಶ್ ರಾಠೋಡ್ ಅವರು ನಿರಾಕರಿಸುತ್ತಿದ್ದಾರೆ ಇದರ ಅರ್ಥ ಒಳರ್ಥವನ್ನ ಗ್ರಾಮದ ಜನರೇ ಅರ್ಥ ಮಾಡಿಕೊಳ್ಳಬೇಕಾಗಿದೆ

ಈ ಮಾಹಿತಿಯನ್ನು ಕೇಳುವುದಕ್ಕಿಂತ ಮೊದಲು ಆ ಊರಿನ ಜನಗಳಿಗೆ ನಾವು ದೂರವಾಣಿಯೊಂದಿಗೆ ಮಾತನಾಡಿದಾಗ ಹಲವಾರು ಜನರ ದ್ವನಿಯಲ್ಲಿ ಕೇಳಿದ್ದು ಅಭಿವೃದ್ಧಿಯ ಅಂದರೇನು ಸ್ವಾಮಿ..? ಅಭಿವೃದ್ಧಿಯ ಹೆಸರಲ್ಲೇ ಅಧಿಕಾರಿಗಳು ಜೇಬು ತುಂಬಿಸುವ ಕಾಮಗಾರಿನ ಹೀಗೆಲ್ಲ ಅವರು ನಮಗೆ ಉತ್ತರಿಸಿದರೂ ನಮ್ಮಲ್ಲಿ ಯಾವುದೇ ರೀತಿ ಕೆಲಸಗಳು ಸರಿಯಾಗಿ ಮಾಡುವುದಿಲ್ಲ ಒಂದು ವೇಳೆ ಮಾಡಿದರೆ ಕೆಲಸವು ಮಾಡುವದಕಿಂತ ಮೊದಲೇ ಬಿಲ್ಲಗಳನ್ನು ತೆಗೆಯುತ್ತಾರೆ ನಾವು ಏನಾದರೂ ಕೇಳಲು ಹೋದರೆ ಆಯ್ತು ಕೆಲಸ ಮಾಡ್ತೇವೆ ಎಂದು ದೌರ್ಜನ್ಯ ಮಾಡುತ್ತಾ ಗಡಸು ದ್ವನಿಯಲ್ಲಿ ಮಾತಾಡಿಸೋಕೆ ಶುರು ಮಾಡುತ್ತಾರೆ ಅನ್ನುತ್ತಾರೆ

ಆದರೆ ಸರ್ಕಾರದ ಆದೇಶ ಏನಿದೆ….?
ಕೆಲಸ ಮಾಡುವುದಕಿಂತ ಮೊದಲು ಕ್ರಿಯಾ ಯೋಜನೆ ಮಾಡಬೇಕು ನಂತರ ಕೆಲಸ ಮಾಡಬೇಕು ಕೆಲಸವು ಕಾಮಗಾರಿಗಳನ್ನೇ ಮಾಡಬೇಕು ಈ ಕೆಲಸ ಎಷ್ಟು ಆಗಿದೆ ಎಂಬುದನ್ನು ಕುರಿತು ಬಿಲ್ ತೆಗೆಯಬೇಕು ಎಂಬುದು ಸರಕಾರ ಆದೇಶವಿದೆ
ಇಲ್ಲಿ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಲಾರದೆ ಕೆಲಸಗಳು ನಡೆದಿವೆ ಎಂಬುದು ನಾವು ಕೇಳು ಪಟ್ಟಿದ್ದೇವೆ.
ಈ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಆಟ ಎಂದು ಮೇಲ್ನೋಟಕ್ಕೆ ಕಂಡು ಬರ್ತಾ ಇದೆ.

ವರದಿ. ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ