ಉತ್ತರ ಕನ್ನಡ:ಶಿವಾಜಿ ಸರ್ಕಲ್ ಮುಂಡಗೋಡ
ನಗರದಲ್ಲಿ ಹೆಚ್ಚಿನ ವಾಹನ ಸಂದಣಿಯಾಗುತ್ತಿರುವ ಸ್ಥಳವಾಗಿದ್ದು,ಬಸ್ ಸ್ಟ್ಯಾಂಡ್ ಸೇರಿದಂತೆ ಕೆಲವೆಡೆ ಬೇಕಾಬಿಟ್ಟಿ ವಾಹನಗಳ ನಿಲುಗಡೆ ಮತ್ತು ಬೀದಿ ಬದಿ ರಸ್ತೆ ವ್ಯಾಪಾರಿಗಳು ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವುದು ಟ್ರಾಫಿಕ್ ಜಾಮ್ ಆಗಲು ಕಾರಣ ವಾಗುತ್ತಿದ್ದು,ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಶಿವಾಜಿ ಸರ್ಕಲ್ ನಿಂದ 30 ಮೀಟರ್ ಗಳವರೆಗೆ ವಾಹನ ನಿಲುಗಡೆ ನಿಷೇಧಿಸಿ, ಮುಂಡಗೋಡ ನಗರದಾದ್ಯಂತ ವಾಹನ ಗಳ ಸರಿಯಾದ ಕ್ರಮಬದ್ದ ನಿಲುಗಡೆ ಆಗುವಂತೆ ನೋಡಿಕೊಳ್ಳುವ ಅಗತ್ಯ ಎದ್ದು ಕಾಣುತ್ತಿದೆ.
