ಜಮಾತೇ ಇಸ್ಲಾಮಿ ಹಿಂದ್ ವಿಜಯಪುರ ನಗರ ಶಾಖೆ ವತಿಯಿಂದ ಯುವಕರಿಗಾಗಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಜಮಾತ್‌ನ ಬಾಗಲಕೋಟ ಜಿಲ್ಲಾ ಸಂಚಾಲಕರಾದ ಜನಾಬ ಸಹೀದ್ ಅಹ್ಮದ್ ಕೊತ್ವಾಲ ಆಗಮಿಸಿದ್ದರು.ಅವರು ಯುವಕರನ್ನುದ್ದೇಶಿಸಿ ಮಾತನಾಡುತ್ತಾ ಜಗತ್ತಿನಲ್ಲಿ ಕ್ರಾಂತಿಗಳು ಯುವಕರಿಂದಲೇ ಸಂಭವಿಸಿವೆ ಯುವಕರು ಸಾಮಾಜಿಕ ಪರಿವರ್ತನೆಗಾಗಿ ಎದ್ದೇಳಬೇಕೆಂದು ಕರೆ ನೀಡಿದರು.
ಇನ್ನೋರ್ವ ಅತಿಥಿಗಳಾದ ಎಂ.ಡಿ.ಬಳಗಾನೂರ ರವರು ಮಾತನಾಡಿ, ಯುವಕರು ಸಮಾಜದ ಬೆನ್ನೆಲುಬು ಆಗಿದ್ದಾರೆ. ಮುಸ್ಲಿಂ ಸಮುದಾಯದ ಯುವಕರು ನಿರಾಶೆಗೊಳ್ಳದೆ ಸಕಾರಾತ್ಮಕ ಚಿಂತನೆಯ ಅಳವಡಿಸಿಕೊಳ್ಳಬೇಕು ಹಾಗೂ ಅನ್ಯಧರ್ಮಿಯರೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸಿ ಅವರ ತಪ್ಪು ತಿಳುವಳಿಕೆಯನ್ನು ದೂರಮಾಡಬೇಕೆಂದರು.
ವಕೀಲರಾದ ಜ. ಮಹಮೂದ ಕಾಜಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಜನಸಂಖ್ಯೆಯಲ್ಲಿ ಶೇಕಡ 60 ರಷ್ಟು ಯುವಕರಾಗಿದ್ದಾರೆ ಸಮಾಜ
ಅವರ ಕಡೆ ಆಶಾಭಾವನೆಯಿಂದ ನೋಡುತ್ತಿದೆ ಎಂದರು.ಸಮಾಜದ ಸುಧಾರಣೆಯನ್ನು ಯುವಕ ಸುಧಾರಣೆಯ ಮೇಲೆ ಅವಲಂಬಿತ ಎಂದರು.
ಜಮಾತ್ ನ ಸ್ಥಾನೀಯ ಅಧ್ಯಕ್ಷರಾದ ಮಹಮ್ಮದ್ ಯೂಸುಫ್ ಕಾಜಿಯವರು ಅಧ್ಯಕ್ಷತೆವಹಿಸಿದ್ದರು.
ವೇದಿಕೆಯ ಮೇಲೆ ಸೊಲಿಡ್ಯಾರಿಟಿ ಯೂಥ್ ಮೂಮೆಂಟನಾ ಅಧ್ಯಕ್ಷರಾದ ಮುದಸ್ಪೀರ್, ಬಾಲಸಿಂಗ್ ಉಪಸ್ಥಿತರಿದ್ದರು. ಇದೇ ವೇಳೆ ಸೊಲಿಡ್ಯಾರಿಟಿ, ದಿನಾಂಕ 18 ಡಿಸೆಂಬರ್ ರಂದು ನಡೆಯುವ ಅಧೀವೇಶನದ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
-ಮುಹಮ್ಮದ ನಾಸೀರ ಇನಮದಾರ