ಚಾಮರಾಜನಗರ ಜಿಲ್ಲೆಯ ಹನೂರು:ಹಲವಾರು ವಿದ್ಯಾರ್ಥಿಗಳು ಹೆಚ್ವಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಗಳಿಗೆ ಆಶ್ರಯಿಸುವುದು ಸಾಮಾನ್ಯವಾಗಿದೆ ಅದೇ ರೀತಿಯಲ್ಲಿ ನಾವುಗಳು ಕಾಲೇಜುಗಳಿಗೆ ಹೊರಡಲು ಸರ್ಕಾರಿ ವಾಹನ ಅವಶ್ಯಕತೆ ಇದೆ ಆದರೆ ನಮಗೆ ಸಂಸ್ಥೆಯವರು ಸ್ಪಂದಿಸದಿರುವುದು ನಮಗೆ ಬಹಳ ಅನಾನುಕೂಲಕ್ಕೆ ಎಡೆಮಾಡಿಕೊಟ್ಟಿದೆ ಎಂದು ಲೊಕ್ಕನಳ್ಳಿ ಗ್ರಾಮದ ವಿದ್ಯಾರ್ಥಿ ಹರೀಶ್ ತಿಳಿಸಿದರು.
ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಪದವಿ ವಿದ್ಯಾರ್ಥಿ ಹರೀಶ್ ಅವರು ನಮ್ಮ ಲೊಕ್ಕನಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ನೂರ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನ ನಿತ್ಯ ಸಂಚಾರ ಮಾಡುತ್ತಿದ್ದು,ಹಲವು ಬಾರಿ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಿಲ್ಲ ಅದ್ದರಿಂದ ಈ ಭಾಗದ ಎಲ್ಲಾ ವಿಧ್ಯಾರ್ಥಿಗಳು ಭಾಗವಹಿಸಿ ಪ್ರತಿಭಟನೆ ಮಾಡಿದ್ದೆವು,ಘಟನೆ ನಡೆದ ನಂತರ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ ಘಟಕ ವ್ಯವಸ್ಥಾಪಕರು ಮುಂದಿನ ವಾರದಲ್ಲಿ ಈ ಸಮಸ್ಯೆಯನ್ನು ಇತ್ಯಾರ್ಥಪಡಿಸುವುದಾಗಿ ತಿಳಿಸಿದರು.
ಇದೇ ಸಮಯದಲ್ಲಿ ಕೊಳ್ಳೇಗಾಲದ
ಮಾನಸ ಕಾಲೇಜು,ಮಹದೇಶ್ವರ ಕಾಲೇಜು , ವಿವೇಕಾನಂದ ಕಾಲೇಜಿನಲ್ಲಿ, ಹನೂರಿನ ಜಿ ವಿ ಗೌಡ ,ಕ್ರಿಸ್ತರಾಜ ,ಇನ್ನಿತರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.
ವರದಿ ಉಸ್ಮಾನ್ ಖಾನ್.