ಕಲಬುರಗಿ:ಇದೇ ಡಿಸೆಂಬರ್ ೨೦/೧೨/೨೦೨೨ ರಂದು ಸಾಂಸ್ಕೃತಿಕ ಭವನ ಗೋಕುಲ ನಗರ ಫಿಲ್ಟರ್ ಬೆಡ್ ಬಡಾವಣೆ ಕಲಬುರ್ಗಿಯಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ಮಹಾಂತಜ್ಯೋತಿ ಪ್ರತಿಷ್ಠಾನ ಕಲಬುರ್ಗಿ ಹಾಗೂ ಕವಿ ಧ್ವನಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕದ ವಿಮೋಚನಾ ಅಮೃತ ಮಹೋತ್ಸವ ಸಂಭ್ರಮದ ಹಾಗೂ ಅಮೃತ ಪುತ್ರ ಹಾಗೂ ಜೀವಮಾನ ಪ್ರಶಸ್ತಿ ಸಮಾರಂಭ ಜರುಗಲಿದೆ.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಾನ್ಯಶ್ರೀ ಡಾ.ಬಸವರಾಜ ಪಾಟೀಲ ಸೇಡಂ ಮಾನವ ಸಂಪನ್ಮೂಲ
ಅಧ್ಯಕ್ಷರು ಕೃಷಿ ಮತ್ತು ಸಂಸ್ಕೃತಿ ಸಂಘ ಕಲಬುರ್ಗಿಯವರು ಆಗಮಿಸಲಿದ್ದು.ಕಾರ್ಯಕ್ರಮದ ಅಧ್ಯಕ್ಷತೆಯು ಮಾನ್ಯ ಡಾ.ಮ.ಗು.ಬಿರಾದರ.
ನಿವೃತ್ತ ಕನ್ನಡ ಪ್ರಧ್ಯಾಪಕರು ಹಿರಿಯ ಸಾಹಿತಿಗಳು ಕಲಬುರ್ಗಿ ಕಾರ್ಯಕ್ರಮದ ಉದ್ಘಾಟನೆ ಶ್ರೀಮತಿ.ಶಶಿಕಲಾ ಟೇಂಗಳಿ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷರು ಬೆಂಗಳೂರು.ಮುಖ್ಯ ಅತಿಥಿಗಳಾಗಿ ಮಾನ್ಯ ಪ್ರಭಾಕರ ಜೋಶಿ.ನಿರ್ದೇಶಕರು ರಂಗಾಯಣ ಕಲಬುರ್ಗಿ.
ಇನ್ನೋರವ ಅತಿಥಿಗಳು ಮಾನ್ಯ ಶ್ರೀ ವಿಜಯಕುಮಾರ ತೇಗಲತಿಪ್ಪಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಕಲಬುರ್ಗಿ ವಹಿಸಲಿದ್ದಾರೆ.ಇದೆ ಸಂದರ್ಭದಲ್ಲಿ ವಿಶೇಷ ಪ್ರಶಸ್ತಿ ಸಮಾರಂಭ ಜರುಗಲಿದ್ದು ಇದರಲ್ಲಿ ಕಿರುತೆರೆ ಮತ್ತು ಹಿರಿತೆರೆ ನಟಿ ಬೆಂಗಳೂರು, ಶಂಭುಲಿಂಗ ವಾಲ್ದೊಡ್ಡಿಯ ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಬೀದರ, ಡಾ.ಎ.ಎಸ್.ಭದ್ರಶೆಟ್ಟಿ.
ಅಧ್ಯಕ್ಷರು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ದಳ ಕಲಬುರ್ಗಿ,ಡಾ. ಶ್ರೀಮತಿ ವಿಶಾಲಾಕ್ಷಿ ವಿಶ್ವನಾಥ ಕರಡ್ಡಿ ನಿವೃತ್ತಿ ಪ್ರಾಚಾರ್ಯರು ಹಾಗು ಹಿರಿಯ ಸಾಹಿತಿಗಳು ಕಲಬುರ್ಗಿ ಹಾಗೂ ಶ್ರೀಮತಿ.ಆಶಾ ವಿಶ್ವನಾಥ ಖೂಬಾ .ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಸಾಹಿತಿಗಳು ಕಲಬುರ್ಗಿ. ಇವರಿಗೆ ಆತ್ಮೀಯವಾಗಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದ ಸಹಕರಿಸಲು ಎರಡು ಸಂಸ್ಥೆಗಳ ಪರವಾಗಿ ವಿನಂತಿಸಿಕೊಳ್ಳಲಾಗಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ