ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆ ವ್ಯಾಪ್ತಿಯ ಎಸ್.ಡಬ್ಲೂ.ಎಂ ಅನುದಾನದಲ್ಲಿ ನಿರ್ಮಾಣವಾದ ಕಾಂಪೌಂಡ್ ವಾಲ್ ಕಾಮಾಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಮಗಾರಿಯ ವಿವರ ಕೋರಿ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಕೊಪ್ಪಳ ಇವರಿಗೆ ಆರ್.ಟಿ.ಐ ಹೋರಾಟಗಾರ,ಸ್ಥಳೀಯ ನಿವಾಸಿ ಮುತ್ತುರಾಜ್ ಕಟ್ಟೀಮನಿ ಇವರು
ದೂರು/ಮನವಿಯನ್ನು ನೀಡಿದರೂ ಸಹ ಸ್ಥಳ ತನಿಖೆ ಮಾಡದೆ ಉಡಾಪೆ ಉತ್ತರವನ್ನು ನೀಡಿದ ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿಗಳ ನಡೆಯು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರಿಗೆ
ಈ ಬಗ್ಗೆ ದೂರು ಸಲ್ಲಿಸಿದರೂ ಅವರೂ ಕೂಡಾ ಮುಖ್ಯಾಧಿಕಾರಿಗಳಿಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹಿಂಬರಹ ನೀಡಿದ್ದಾರೆ.ಇದ್ಯಾವದಕ್ಕೂ ಉತ್ತರ ನೀಡದೆ ಮೌನವಹಿಸಿರುವ ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಸದರಿ ಕಾಮಗಾರಿಯು ಎಷ್ಟು ಮೊತ್ತದ ಕಾಮಾಗಾರಿ ಎಂದೂ ಸಹ ನಮೂದು ಮಾಡದೇ ಹಿಂಬರಹ ನೀಡಿದ್ದಾರೆ
ಕಾಮಗಾರಿಯ ಮಾಹಿತಿ ಬಗ್ಗೆ ನೀಡಿದ ಮನವಿ ಪತ್ರ,ಆರ್.ಟಿ.ಐ ಅರ್ಜಿ,ಮೇಲಾಧಿಕಾರಿಗಳ ಆದೇಶಕ್ಕೆ ಯಾವುದೇ ಉತ್ತರ ಇದುವರೆಗೂ ಸಿಕ್ಕಿಲ್ಲ
ಈ ಎಲ್ಲಾ ಅಂಶಗಳು ಈ ಕಾಮಾಗಾರಿಯ ಬಗ್ಗೆ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ.ಕಳಪೆ ಕಾಮಗಾರಿ ನಡೆದ ಬಗ್ಗೆ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿರುವ
ಅಧಿಕಾರಿಗಳಾದ ಜೆ.ಇ,ಎಇಇ ಮತ್ತು ಗುತ್ತಿಗೆದಾರ ಇವರಲ್ಲಿ ತಪ್ಪು ಯಾರಿಂದ ನಡೆದಿದೆ ಎಂದು ಮೇಲಾಧಿಕಾರಿಗಳು ತನಿಖೆ ನಡೆಸಿ ಸತ್ಯವನ್ನು ಹೊರಹಾಕಿ ಎಂದು ದೂರುದಾರನಾದ ಶ್ರೀ ಮುತ್ತುರಾಜ್ ಕಟ್ಟಿಮನಿ ಆರೋಪಿಸಿದ್ದಾರೆ.
