ಲಿಂಗಸುಗುರ:ಇಂದು ಲಿಂಗಸೂಗೂರನಲ್ಲಿ ಮಾಜಿ ಸಚಿವರು ಹಾಗೂ ಕುಷ್ಟಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಹುಟ್ಟು ಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಶರಣಗೌಡ ಪಾಟೀಲ್ ಬಯ್ಯಾಪೂರ ಸಾಹೇಬರು ತಮ್ಮ ಅಮೃತ ಹಸ್ತದಿಂದ ಸಸಿಗೆ ನೀರೆರೆದು ಉದ್ಘಾಟಿಸಿದರು ಸ್ವಾಮಿ ವಿವೇಕಾನಂದ ಹಾಗೂ ಶ್ರೀ ಅನ್ನದಾನಗೌಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ನಂತರ ಮಾತನಾಡಿದ ಮಹನೀಯರು ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಅಮರೇಶ ಪಾಟೀಲ್ ಮಾಕಪುರ್ ಲಿಂಗಸುಗುರ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ರುದ್ರಗೌಡ ಪಾಟೀಲ್ ಮಾತನಾಡಿ ಯುವಕರು ಸಮಾಜ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಏನಾದರೂ ಕೊಡುಗೆಯನ್ನ ಕೊಡಬೇಕಾದರೆ ಡಾಕ್ಟರ್ ಆಗಿರಬೇಕಾಗಿಲ್ಲ ಇಂತಹ ಸ್ವಯಂ ಪ್ರೇರಿತ ಶಿಭಿರಗಳಲ್ಲಿ ಭಾಗವಹಿಸಿ ಕೊಡುಗೆಯನ್ನು ಕೊಡಬಹುದು ಎನ್ನುವ ವಿಶೇಷ ಕಾಳಜಿಯ ಮಾತುಗಳನ್ನ ಆಡಿದರು ಮುಂದುವರೆದು ಡಾ.ನಾಗನಗೌಡ ಪಾಟೀಲ್ ರಕ್ತ ದಾನಮಾಡುವದರಿಂದ ಮನುಷ್ಯನ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಅನ್ನುವದರ ಬಗ್ಗೆ ವಿವರವಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಶ್ರೀ ಶರಣಪ್ಪ ಮೇಟಿ, ಶ್ರೀ ಡಾ/ ಲಕ್ಷ್ಮಪ್ಪ , ಭೂಪನಗೌಡ ಕರಡಕಲ್, ಶರಣಗೌಡ ಪಾಟೀಲ್ ಹಿರಿಯ ವೈದ್ಯರು , ಅಮರೇಶ್ ನಾಡಗೌಡ, ಡಾ.ಲಷ್ಮಪ್ಪ ,ಗುಂಡಪ್ಪ ನಾಯಕ್, ಪ್ರಮೋದ್ ಕುಲಕರ್ಣಿ, ಗೋಪಾಲ್ ರೆಡ್ಡಿ, ಹಾಗೂ ಪಾಮಯ್ಯ ಮುರಾರಿ ಉಪಸ್ಥಿರಿದರು
ವರದಿ:ರವಿಕುಮಾರ್ ಪಾಟೀಲ್