ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡೂರು ರಾಜ್ಯ ಹೆದ್ದಾರಿ ಬಂದ್ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕು ಘಟಕ ವತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಂದು ಕೇಂದ್ರ ಸರ್ಕಾರ ರೈತರ ವಿರೋಧ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸುವುದೇನೆಂದರೆ.
೧)ಕೇಂದ್ರ ಸರ್ಕಾರ ಹಿಂಪಡೆದ ೩ ಕೃಷಿ ಕಾನೂನನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು.
೨) ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗೀಕರಣ ಬಿಲ್ಲನ್ನು ಹಿಂಪಡೆಯಬೇಕು. ಹಾಗೂ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಕಾರ್ಯವನ್ನು ನಿಲ್ಲಿಸಬೇಕು.
೩) ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಕಾನೂನುತ್ಮಕವಾಗಿ ಬೆಲೆಯನ್ನು ನಿಗದಿ ಪಡಿಸಬೇಕು
ಹಾಗೂ ತರಕಾರಿ ಬೆಳೆಗೆ
ಕೇರಳ ಮಾದರಿಯಲ್ಲಿ ಬೆಲೆ ನಿಗದಿ ಪಡಿಸಬೇಕು.
೪) ಭತ್ತ ಖರೀದಿ ಕೇಂದ್ರಗಳನ್ನು ಜಿಲ್ಲೆ ಮತ್ತು ಹೋಬಳಿ ಮಟ್ಟದಲ್ಲಿ ಸ್ಥಾಪನೆ ಮಾಡಬೇಕ ಸರ್ಕಾರವು ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಪಡಿಸಬೇಕು.
೫)ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಮಾಡಿದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
೬) ಜಿಲ್ಲೆಯಲ್ಲಿ ಮಳೆ ಹಾನಿಯಿಂದ ರೈತರ ಬೆಳದ ಭತ್ತಗಳಿಗೆ ಸರ್ಕಾರವು ಪರಿಹಾರ ಧನವನ್ನು ಪ್ರತಿ ಹೆಕ್ಟೇರಿಗೆ ರೂ ೩೫೦೦೦ ನೀಡಬೇಕು.
೭) ಇನ್ಸ್ಪಿರೇಷನ್ ಕಂಪನಿಗಳು
ರೈತರ ಬೆಳೆ ವಿಮೆ ಮಾಡಿಸಿಕೊಂಡು ಬೆಳೆ ವಿಮೆ ನೀಡಿದೆ ಕಂಪನಿಯರು ವಂಚನೆ ಮಾಡುತ್ತಿದ್ದಾರೆ.
ಅಂತಹ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರೈತ ಮುಖಂಡರು ಉಪಸ್ಥಿತರಿದ್ದರು.
ಗುರುನಾಥ ರೆಡ್ಡಿ ಹದನ್ನೂರ ರಾಜ್ಯ ಸಂಘಟನಾ ಕಾರ್ಯದರ್ಶಿ, ವೆಂಕೋಬಾ ಕಟ್ಟಿಮನಿ ಜಿಲ್ಲಾ ಉಪಾಧ್ಯಕ್ಷರು,
ದೇವಿಂದ್ರಪ್ಪ ಕೊಲ್ಲ್ ಕಾರ್ ಶಹಾಪುರ ತಾಲೂಕ ಅಧ್ಯಕ್ಷರು, ಹಣಮಂತ್ರಾಯ
ಗೌಡ ಪರಸನಹಳ್ಳಿ ಸುರಪುರ ತಾಲೂಕ ಅಧ್ಯಕ್ಷರು ,
ಮರೆಪ್ಪ ರಾಕಂಗೇರಾ ತಾಲೂಕ ಪ್ರಧಾನ ಕಾರ್ಯದರ್ಶಿ ಶಹಾಪುರ , ಭೀಮರಾಯ ಇಟಗಿ ತಾಲೂಕ ಸಂಚಾಲಕರು ಶಹಾಪುರ , ಬಸನಗೌಡ ದಂಡಗುಂಡ ಗ್ರಾಮ ಘಟಕ ಅಧ್ಯಕ್ಷರು , ಮಲ್ಲಣ್ಣ ಸಾಹು
ಹೈಯಾಳ ಗ್ರಾಮ ಘಟಕ ಅಧ್ಯಕ್ಷರು , ಸಿದ್ದಲಿಂಗಪ್ಪ ಶಹಾಬಾದ್, ಕರಿಬಸಪ್ಪ ಶಹಾಬಾದ್, ಗದ್ಯಪ್ಪ ಅವಂಟಿಗೇರ್, ಸುರು ಕುಂಬಾರ
ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ