ಯಾದಗಿರಿ (ಶಹಾಪುರ): ಎತ್ತಿನ ದಾಳಿಗೆ ಒಳಗಾಗಿ ಗುದದ್ವಾರದ ಒಳಭಾಗ ಶೇ. 90 ರಷ್ಟು ಗಾಯಗೊಂಡಿದ್ದ ವ್ಯಕ್ತಿಗೆ ಶಹಾಪುರ ತಾಲೂಕು ಆಸ್ಪತ್ರೆ ವೈದ್ಯರಾದ ಡಾ.ಮೋಸಿನ್ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಜೀವ ಉಳಿಸಿದ್ದಾರೆ.
ಶಹಾಪುರ ನಗರದ ತಾಲೂಕು ಆಸ್ಪತ್ರೆ ಬಡ ರೋಗಿಗಳ ಆಶಾ ಕಿರಣ,ಕೋವಿಡ್ ಬಂದಾಗಲಂತೂ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡಿ,ಜೀವದಾನ ಮಾಡಿತ್ತು ಇದೀಗ ಎತ್ತಿನ ದಾಳಿಗೆ ತುತ್ತಾದ ವ್ಯಕ್ತಿಯೊಬ್ಬನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೇ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎಂದು ಸಾಬೀತು ಮಾಡಿದೆ.
ಹೌದು,ಯಂಕಪ್ಪ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಹಳಿಸಗರ ಗ್ರಾಮದವರು ಕಳೆದ ದಿನಾಂಕ 7ರಂದು ತಮ್ಮ ಹೊಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಎತ್ತು ಏಕಾಏಕಿ ಮೈಮೇಲೆ ಎರಗಿ ಮಾರಣಾಂತಿಕವಾಗಿ ದಾಳಿ ನಡೆಸಿತ್ತು ಪರಿಣಾಮ ಎತ್ತಿನ ಮೊನಚಾದ ಕೊಂಬು ಯಂಕಪ್ಪನ ಗುದದ್ವಾರದ ಒಳಭಾಗದಿಂದ ಪ್ರವೇಶಿಸಿ ದೊಡ್ಡಕರುಳಿಗೂ ಹಾನಿ ಉಂಟುಮಾಡಿತ್ತು ಶೇ. 90 ರಷ್ಟು,ಗುದದ್ವಾರದ ಒಳ ಪರದೆ ವಿರೂಪಗೊಂಡಿತ್ತು.
ತಕ್ಷಣವೇ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಬಂದ ಗಾಯಾಳು ಯಂಕಪ್ಪನನ್ನು ದಾಖಲು ಮಾಡಲಾಗಿತ್ತು ಶಹಾಪುರ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರಾದ ಡಾ.ಮೋಸಿನ್ ಹಾಗೂ ಸಿಬ್ಬಂದಿಗಳ ಸುದೀರ್ಘ ಸಮಯದ ಸತತ ಶಸ್ತ್ರಚಿಕಿತ್ಸೆ ಕೈಗೊಂಡ ಪರಿಣಾಮ ಯಂಕಪ್ಪ ಜೀವಾಪಾಯದಿಂದ ಪಾರಾಗಿದ್ದಾರೆ.
1.50 ಲಕ್ಷದ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿದ ವೈದ್ಯರು:
ಗುದದ್ವಾರದ ಪ್ರಮುಖ ಭಾಗಗಳಿಗೆ ಯಾವುದೇ ರೀತಿಯ ಅಪಾಯವಾಗದಂತೆ ಪುನರ್ ರಚನೆ ಮಾಡಲು ಶಸ್ತ್ರಚಿಕಿತ್ಸೆಯನ್ನು ಶಹಾಪುರ ಆಸ್ಪತ್ರೆಯ ತಜ್ಞ ಡಾ.ಮೋಸಿನ್,ನೇತೃತ್ವದ ತಂಡ ಯಶಸ್ವಿಯಾಗಿದೆ.
ಈ ರೋಗಿಯ ಗುದದ್ವಾರದಲ್ಲಿ ತುಂಡಾಗಿದ್ದ ಒಳಪರದೆ
ಜೋಡಿಸುವ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ.ಇದೀಗ ಯಂಕಪ್ಪ ಯಥಾಸ್ಥಿತಿಗೆ ಮರಳಿದ್ದಾರೆ ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ 1.50 ಲಕ್ಷ ರೂ ವೆಚ್ಚವಾಗಬಹುದಾದ ಗಂಭೀರ ಸ್ವರೂಪದ ಈ ಶಸ್ತ್ರಚಿಕಿತ್ಸೆಯನ್ನು ಶಹಾಪುರ ತಾಲೂಕು ಆಸ್ಪತ್ರೆ ಅಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಉಚಿತವಾಗಿ ನಡೆಸಿ ಅನುಕೂಲ ಮಾಡಿಕೊಟ್ಟಿದೆ.
ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವ ಜನರ ಮಧ್ಯೆ ಶಹಾಪುರ ತಾಲೂಕು ಆಸ್ಪತ್ರೆ ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿ ಬಡ ರೋಗಿಯ ಜೀವ ಉಳಿಸುವುದರ ಮೂಲಕ ಸರ್ಕಾರಿ ಆಸ್ಪತ್ರೆಗಳು ಕೂಡ ಖಾಸಗಿ ಆಸ್ಪತ್ರೆಗಳಿಗೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.
ಇಂತಹ ಅಪರೂಪದ ಪ್ರಕರಣದಲ್ಲಿ ನಮ್ಮ ಆಸ್ಪತ್ರೆಯ ವೈದ್ಯ ಸಿಬ್ಬಂದಿ ತಂಡ ಸಮಯ ಪ್ರಜ್ಞೆ ಯಿಂದ ಒಬ್ಬ ಬಡ ರೋಗಿಯ ಜೀವ ಉಳಿಸಿ ಮಾದರಿಯಾಗಿದ್ದಾರೆ ಸಾರ್ವಜನಿಕರು ಉತ್ತಮ ಸೌಲಭ್ಯ ಒದಗಿಸಲು ತಾಲೂಕು ಆಸ್ಪತ್ರೆ ಸುಸಜ್ಜಿತವಾಗಿದೆ ಇದರ ಸೌಲಭ್ಯ ತಾಲೂಕಿನ ಜನರು ಪಡಿಯಬೇಕು ಎಂದು
ಡಾ.ಪದ್ಮಾನಂದ ಗಾಯಕ್ವಾಡ್,ಮುಖ್ಯ ಆಡಳಿತ ವೈದ್ಯಧಿಕಾರಿಗಳು ತಾಲೂಕು ಆಸ್ಪತ್ರೆ ಶಹಾಪುರ ತಿಳಿಸಿದರು
‘ಬುಲ್ ಗೋರ್ ಇಂಜ್ಯೂರಿ’ ಎಂಬ ಗಂಭೀರ ಗಾಯಕ್ಕೊಳಗಾಗಿದ್ದ ಬಡ ರೈತನನ್ನು ಅಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಉಚಿತವಾಗಿ ವಿಶಿಷ್ಟ ರೀತಿಯ ಶಸ್ತ್ರ ಚಿಕೆತ್ಸೆ ಮಾಡಿ ಜೀವ ಉಳಿಸಿಲಾಗಿದೆ.ಇದು ಒಂದು ಗಂಭೀರ ಪ್ರಕರಣವಾಗಿದ್ದು ತುಂಬಾ ಸರಳರೀತಿಯಲ್ಲಿ ನಾವು ಹಾಗೂ ನಮ್ಮ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ ಎಂದು ಡಾ|| ಪದ್ಮನಂದ ಗಾಯಕ್ವಾಡ್ ತಾಲೂಕು ವೈದಾಧಿಕಾರಿಗಳು ಶಹಾಪೂರ ಡಾ|| ಶರಣರಡ್ಡಿ ಅರಿವಳಿಕೆ ತಜ್ಞರು ಶಹಾಪುರ
ಡಾ|| ಮೋಸಿನ್
ಶಸ್ತ್ರಚಿಕಿತ್ಸೆ ತಜ್ಞ ವೈದ್ಯರು
ಶಹಾಪುರ ತಾಲೂಕು ಆಸ್ಪತ್ರೆ ಇವರು ಪತ್ರಿಕೆಗೆ ಮಾಹಿತಿ ನೀಡಿದರು
ವರದಿ:ರಾಜಶೇಖರ್ ಮಾಲಿ ಪಾಟೀಲ,ಶಹಾಪೂರ