ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಬುಧವಾರ ನಡೆದಿದೆ ಎನ್ನಲಾದ ಹಲ್ಲೆ? ಆರೋಪಗಳಿಗೆ ಕುರಿತಂತೆ ಎರಡು ಕಡೆಯವರಿಂದ ದೂರು ಪ್ರತಿದೂರು ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರವೇ ಸತ್ಯಾಸತ್ಯತೆ ತಿಳಿಯಲಿದೆ.ಪಟ್ಟಣ ಪಂಚಾಯ್ತಿ ಹಾಲಿ ಸದಸ್ಯ ವಿಶ್ವನಾಥ ಪವಾಡಶೆಟ್ಟರ್ ಹಾಗೂ ಪಟ್ಟಣ ಪಂಚಾಯ್ತಿ ಮಾಜಿ ಮುಖ್ಯಾಧಿಕಾರಿ ಎನ್ನಲಾದ ಸತ್ಯೇಂದ್ರ ಜಿ ಪಾಟೀಲ್ ಇವರಿಬ್ಬರೂ ತಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಹಲ್ಲೆಯಾಗಿದೆ ಎಂದು ಪರಸ್ಪರರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ,ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು ಪ್ರಸ್ತುತ ಘಟನೆ ಗಾಂಧಿನಗರ ಸ್ಲಂ ಬೋರ್ಡ್ ವಿಚಾರವಾಗಿ ನಡೆದಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ,ಹಲ್ಲೆ ಕುರಿತಂತೆ CCTV ದೃಶ್ಯಾವಳಿಗಳು ಹಾಗೂ ಸಾಕ್ಷಿಗಳ ವಿಚಾರಣೆ ಮೇಲೆ ಪ್ರಕರಣದ ಅಸ್ತಿತ್ವ ಇರಲಿದೆ,ಒಟ್ಟಿನಲ್ಲಿ ಚುನಾವಣೆಯಲ್ಲಿ ಗೆದ್ದ ಬಳಿಕ ಜನರ ಸೇವೆ ಮಾಡುವದನ್ನು ಬಿಟ್ಟು ಕ್ಷುಲ್ಲಕ ವಿಚಾರಗಳಿಗೆ ಪೊಲೀಸ್ ಠಾಣೆ ಮೆಟ್ಟಿಲು ಏರಿರುವ ಜನಪ್ರತಿನಿಧಿಗಳು ಮತ್ತು ಮಾಜಿ ಆಡಳಿತ ಅಧಿಕಾರಿಗಳ ನಡೆ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಬೇಸರ
ವ್ಯಕ್ತ ಪಡಿಸುತ್ತಿದ್ದಾರೆ.ದಕ್ಷತೆಗೆ ಹೆಸರಾದ ಮುಂಡಗೋಡ ಪೊಲೀಸ್ ಠಾಣೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.