ಬೆಂಗಳೂರು:ಒಳ ಮೀಸಲಾತಿ ಸದಾಶಿವ ಆಯೋಗ ವರದಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ವಿರೋಧಿಸಿ ಬೆಂಗಳೂರಿನ ಜಸ್ಮಾ ಭವನದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ನಡೆದ ಚಿಂತನ ಮಂಥನ ಸಭೆಯಲ್ಲಿ ಭೋವಿ ಗುರುಪೀಠದ ಪರಮಪೂಜ್ಯ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು, ಬಂಜಾರ ಗುರು ಪೀಠದ ಸರ್ದಾರ್ ಸೇವಾಲಾಲ್ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು ಸಭೆಯಲ್ಲಿ ಬಂಜಾರ, ಬೋವಿ, ಕೊರಚ ಕೊರಮ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಮುಖಂಡರು ಉಪಸ್ಥಿತರಿದ್ದು ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಯಿತು.
ಜನವರಿ 10/01/2023 ರಂದು ಬೆಂಗಳೂರಿನಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಬಂಜಾರ,ಭೋವಿ ,ಕೊರಚ ,ಕೊರಮ ಅಲೆಮಾರಿ ಸಮುದಾಯದ ನೇತೃತ್ವದಲ್ಲಿ ಸುಮಾರು ಹತ್ತು ಲಕ್ಷ ಜನರನ್ನು ಸೇರಿಸಿ ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ದಿನಾಂಕ ನಿಗದಿಪಡಿಸಲಾಯಿತು.ಭೋವಿ ,ಕೊರಚ ,ಕೊರಮ ಅಲೆಮಾರಿ ಸಮುದಾಯದ ನೇತೃತ್ವದಲ್ಲಿ ಸುಮಾರು ಹತ್ತು ಲಕ್ಷ ಜನರನ್ನು ಸೇರಿಸಿ ರಾಜ್ಯಮಟ್ಟದ ಬೃಹತ್ ಹೋರಾಟಕ್ಕೆ ದಿನಾಂಕ ನಿಗದಿಪಡಿಸಲಾಯಿತು. 2)ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಒಂದು ನಿಯೋಗ ಮಾನ್ಯ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಮನವರಿಕೆ ಮಾಡುವುದು.
ವರದಿ. ಶ್ರೀಕಾಂತ ರಾಠೋಡ