ಬೆಳ್ಳಂಬೆಳಿಗ್ಗೆ ಕುಡೀತೀವಿ,
ಸಂಜೆಯಲ್ಲೂ ಕುಡೀತೀವಿ
ಕುಡುಕರು ನಾವ್ ಕುಡುಕರು.
ಗೆಳೆಯರು ಸಿಕ್ರೂ ಕುಡೀತೀವಿ
ಒಬ್ಬರೇ ಇದ್ದರೂ ಕುಡೀತೀವಿ
ಸಾರ್ ನಾವು ಕುಡಿಯುತ್ತೇವೆ
ಕುಡಿದು ಖುಷಿಯಾಗುತ್ತೇವೆ.
ಬೇಜಾರಾದ್ರೂ ಕುಡೀತೀವಿ
ಒತ್ತಡವಾದರೂ ಕುಡೀತೀವಿ
ನಾವ್ ನಿತ್ಯವೂ ಕುಡಿಯುವೆವು
ನೆಮ್ಮದಿಗಾಗಿ ಕುಡಿಯುವೆವು.
ಕುಡುಕರು ಸಾರ್ ನಾವು ಕುಡುಕರು
ಕುಡಿಯಲ್ಲಾ ಸಾರ್ ನಾವ್ ನೈಂಟಿ
ಕುಡಿಯೋದ್ ಬರೀ ಕಾಫಿ ಟೀ
ನಾವ್ ಕಾಫಿ ಕುಡುಕರು
ನಾವ್ ಚಹಾ ಕುಡುಕರು
-ಸುನಿಲ್ ಲೇಖಕ್ ಎನ್
ಬೆಂಗಳೂರು