ಕಾರಟಗಿ : ಐತಿಹಾಸಿಕ ಇತಿಹಾಸವುಳ್ಳ ಮುಕ್ಕುಂದಾ ಗ್ರಾಮದ ಮುರಹರಿ ದೇವಸ್ಥಾನ, ಸೋಮನಾಥ ದೇವಸ್ಥಾನ ಕರಿಬೀರೇಶ್ವರ ದೇವಸ್ಥಾನ, ಮುಕ್ಕುಂದ ಕೋಟೆ, ಪಾಪನಾಶಿ, ಈಶ್ವರ ದೇವಸ್ಥಾನ, ಗಡ್ಡೆ ಖಾದ್ರಿ ದರ್ಗಾ ಸೇರಿದಂತೆ ವಿವಿಧ ಸ್ಥಳಗಳ ವೀಕ್ಷಣೆ ಮಾಡಿದರು.
ಚಾಲುಕ್ಯ ಕಾಲದ ಇತಿಹಾಸ ಹೊಂದಿರುವ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮವು ಅನೇಕ ವಿಶೇಷತೆಯನ್ನು ಹೊಂದಿದೆ. ಅದರಲ್ಲೂ ಮುಖ್ಯವಾಗಿ ಭಾರತ ದೇಶದಲ್ಲಿಯೇ ಮುಕ್ಕುಂದಾ ಎನ್ನುವ ಊರಿಲ್ಲ, ಮುರಹರಿ ಎನ್ನುವ ದೇವಸ್ಥಾನವಿಲ್ಲ ನಾಣ್ಣುಡಿಯಂತೆ ಐತಿಹಾಸಿಕ ಮುರಹರಿ ದೇವಸ್ಥಾನವನ್ನು ಹಾಗೂ ಸೋಮನಾಥೇಶ್ವರ ದೇವಸ್ಥಾನವನ್ನು ಗ್ರಾಮದ ಹೃದಯ ಭಾಗದಲ್ಲಿ ಕಾಣಬಹುದು. ಹಾಗೇ ಅಂದಿನ ಆಡಳಿತ ಅವಧಿಯಲ್ಲಿ ಸುತ್ತು 25 ಹಳ್ಳಿಗೂ ವ್ಯವಹಾರಿಕ ಕೇಂದ್ರವಾಗಿ ಗ್ರಾಮವು ಉಳಿದಿತ್ತು. ಗ್ರಾಮದಲ್ಲಿ ಕೋರ್ಟ್, ಕಚೇರಿ, ಪೋಲಿಸ್ ಠಾಣೆ, ಪೋಸ್ಟ್ ಆಫೀಸ್, ಬ್ಯಾಂಕ್ ಸೇರಿದಂತೆ ಅನೇಕ ಶಾಖೆಗಳು ಇದ್ದವು ಎನ್ನುವುದಕ್ಕೆ ಕುರುಹುಗಳು ಕಾಣಬಹುದು. ಅಂದಿನ ದಿನಮಾನದಲ್ಲಿ ಎರಡು ನೂರಕ್ಕೂ ಹೆಚ್ಚು ಕಂಚುಗಾರರ ಕುಟುಂಬವು ಅಲ್ಲಿ ನೆಲೆಸಿದ್ದು, ಕಂಚಿನ ಪಾತ್ರೆಗಳು ಹೇರಳವಾಗಿ ದೊರೆಯುತ್ತಿದ್ದವು ಎನ್ನುವ ಮಾಹಿತಿ ದೊರೆತಿದೆ. ಗ್ರಾಮದ ಕಾವಲಿಗೆಂದು ದ್ವಾರ ಬಾಗಿಲಲ್ಲಿ ಬೃಹತ್ ಮಟ್ಟದಲ್ಲಿ ಕೋಟೆಯನ್ನು ಕಟ್ಟಲಾಗಿದ್ದು ಆ ಸ್ಥಳದಲ್ಲಿ ಕಾವಲುಗಾರರು ಗ್ರಾಮವನ್ನು ರಕ್ಷಿಸಲು ಇರುತ್ತಿದ್ದರು ಎನ್ನಲಾಗಿದೆ. ವ್ಯವಹಾರಿಕ ಗ್ರಾಮ ಪ್ಲೇಗ್ ರೋಗದ ಬಂದು ಜನರು ಗ್ರಾಮವನ್ನು ತೊರೆದು ಬೃಹತ್ ಪಟ್ಟಣ ಕಿರಿದಾಗಿದೆ, ಅಲ್ಲದೆ ಅನೇಕ ಕುರುವುಗಳು ನೆಲಸಮವಾಗಿದೆ ಎಂದು ಹೇಳಲಾಗಿದೆ. ಈ ಗ್ರಾಮದಲ್ಲಿ ತುಂಗಭದ್ರ ನದಿಯು ಅಭಿಮುಖವಾಗಿ ( ಮೇಲ್ಮುಖ) ಹರಿಯುತ್ತಿದ್ದು ಆ ಸ್ಥಳದಲ್ಲಿ ಐತಿಹಾಸಕ ಪಾಪನಾಶಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಆ ನೀರಿನಲ್ಲಿ ಸಂಕ್ರಮಣ ದಿನದಂದು ಮಿಂದರೇ ಪಾಪವೆಲ್ಲ ನಾಶವಾಗುವದು ಎನ್ನುವ ಪ್ರತೀತಿ ಇಂದಿಗೂ ಇದ್ದು ಸಂಕ್ರಾಂತಿಯ ದಿನದಂದು ಸಾವಿರಾರು ಜನ ಸ್ಥಳಕ್ಕೆ ಆಗಮಿಸಿ ಜಳಕ ಮಾಡಿ ಪಾಪ ಕಳೆದುಕೊಳ್ಳುತ್ತಾರೆ. ನದಿಯ ದಡದಲ್ಲಿ ಐತಿಹಾಸಿಕ ಇತಿಹಾಸವನ್ನೇ ತಿಳಿಸುವ ಈಶ್ವರ ದೇವಸ್ಥಾನವನ್ನು ಕಾಣಬಹುದು. ಈಗ ಅದು ಸಂಪೂರ್ಣವಾಗಿ ನಿಧಿಗಳ್ಳರ ಪಾಲಾಗಿದೆ. ಅಲ್ಲಲ್ಲಿ ಕಳ್ಳರು ಹಗೆದು ಹಾಗೆ ಬಿಟ್ಟಿರುವ ಕುರುಹುಗಳನ್ನು ಕಾಣಬಹುದು. 12ನೇ ಶತಮಾನದ ಸೂಫಿ ಸಂತರು ಆ ಸ್ಥಳಕ್ಕೆ ಆಗಮಿಸಿ ಅಲ್ಲಿಯೇ ಐಕ್ಯರಾಗಿದ್ದು ಆ ಸ್ಥಳದಲ್ಲಿ ಬೃಹತ್ ಖಾದ್ರಿ ದರ್ಗಾವನ್ನು ಕಾಣಬಹುದು.
ಒಟ್ಟಿನಲ್ಲಿ ಕಾರಟಗಿ ಸಂಚಾರದ ಬಳಗವು ಹೇಳುವಂತೆ ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಗ್ರಾಮ ಮುಕ್ಕುಂದವಾಗಿದ್ದು, ಐತಿಹಾಸಿಕ ವಾಸ್ತುಶಿಲ್ಪಗಳು ಅಲ್ಲಲ್ಲಿ ಬಿದ್ದು ನಶಿಸಿ ಹೋಗುತ್ತಿವೆ. ಐತಿಹಾಸಿಕ ದೇವಸ್ಥಾನಗಳು ರಕ್ಷಣೆ ಇಲ್ಲದೆ ಹಾಳಾಗಿ ಬೀಳುತ್ತಿವೆ. ಕೂಡಲೇ ಸಂಬಂಧಪಟ್ಟ ಪುರಾತತ್ವ ಇಲಾಖೆ, ತಾಲೂಕ ಪಂಚಾಯಿತಿ, ತಾಲೂಕ ದಂಡಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಗೊಂಡು ಇತಿಹಾಸ ಸಾರುವ ದೇವಸ್ಥಾನಗಳ ಉಳಿವಿಗೆ ನಿಲ್ಲಬೇಕಿದೆ. ಮುಂದಿನ ಪೀಳಿಗೆಯು ಇತಿಹಾಸವನ್ನು ಹರಿಯಲು ಇಂದಿನಿಂದಲೇ ಸಂಬಂಧಪಟ್ಟ ಅಧಿಕಾರಿಗಳ ರಕ್ಷಣೆ ಅಗತ್ಯವಿದೆ. ಸ್ಥಳೀಯರು ಸಹ ರಕ್ಷಣೆಗೆ ನಿಲ್ಲಬೇಕು ಐತಿಹಾಸಿಕ ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರಟಗಿ ಸಂಚಾರಿ ಬಳಗದ ಸದಸ್ಯರಾದ ರಮೇಶ ಬನ್ನಿಕೊಪ್ಪ, ಉಮೇಶ ಮರ್ಲಾನಹಳ್ಳಿ, ವಿರೇಶ ಕೆ, ಮಂಜುನಾಥ ಸ್ವಾಮಿ, ರಮೇಶ ತೊಂಡಿಹಾಳ, ಮಲ್ಲಯ್ಯಸ್ವಾಮಿ, ಶ್ರೀನಿವಾಸ ಮರ್ಲಾನಹಳ್ಳಿ, ವಿರೇಶ ಇದ್ದರು.