ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಕಾರ್ಯಕರ್ತ ಪೂರ್ವಭಾವಿ ಸಭೆಯು ನಡೆಸಲಾಯಿತು ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಆದೇಶ ಹೋರಡಿಸಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎನ್.ಜಗದೀಶ ಮತ್ತು ಕಾರ್ಯಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಕಾಂತ ಚಹ್ವಾಣ, ಇವರ ಆದೇಶದ ಮೇರೆಗೆ ಆದೇಶವನ್ನು ಹೋರಡಿಸಲಾಯಿತು.ಈ ಸಭೆಯ ಅಧ್ಯಕ್ಷತೆ ಶ್ರೀ ರಾಕೇಶ ಎಸ್.ಕಲ್ಲೂರ,ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಮತ್ತು ನೇತೃತ್ವವನ್ನು ಶ್ರೀ ಮಹೇಶ ನಾಯಕ್,ಜಿಲ್ಲಾಧ್ಯಕ್ಷರು,ವಿಜಯಪುರ,ಶ್ರೀನಿಂಗರಾಜ ಬಗಲಿ,ಜಿಲ್ಲಾ ಉಪಾಧ್ಯಕ್ಷರು,ಪ್ರವೀಣ ನಾಟೀಕಾರ, ಜಿಲ್ಲಾ ಮುಖಂಡರು ಇವರ ಸಮ್ಮುಖದಲ್ಲಿ ಜಯ ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚನ್ನಪ್ಪಗೌಡ ಎಸ್. ಬಿರಾದಾರ ಇವರನ್ನು ಆಯ್ಕೆ ಮಾಡಲಾಯಿತು. ಮತ್ತು ಸಿಂದಗಿ ನೂತನ ತಾಲೂಕಿನ ಅಧ್ಯಕ್ಷರನ್ನಾಗಿ ಸಂತೋಷ ಮನಗೂಳಿ ಇವರನ್ನು ಆಯ್ಕೆ ಮಾಡಿ ಆದೇಶ ನೀಡಲಾಯಿತು.
ಈ ಸಭೆಯಲ್ಲಿ ದೇವರ ಹಿಪ್ಪರಗಿ ತಾಲೂಕ ಅಧ್ಯಕ್ಷರಾದ ರಹೆಮಾನಸಾಬ ಕನಕಾಲ್.ಉಪಾಧ್ಯಕ್ಷರಾದ ಸಿದ್ರಾಮಪ್ಪ ಅವಟಿ ಮತ್ತು ಸಿಂದಗಿ ತಾಲ್ಲೂಕಿನ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ರೇವಣ್ಣಸಿದ್ದ ಹಿರೇಮಠ,ಭೀಮಣ್ಣ ಯಳಮೇಲಿ, ನಾನಾಗೌಡ ಪಾಟೀಲ,ಮಾಂತೇಶ ನಾಗೋಜಿ, ಸಂಗಮೇಶ ಇಜೇರಿ,ರಮೇಶ ರಾಠೊಡ,ಭೀಮರಾಯ ಬಿಂಗೋಳ್ಳಿ,ಮಡಿವಾಳಪ್ಪ ರೋಡಗಿ,ಶರತ ಪಟ್ಟಣಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತ್ತರಿದ್ದರು.
ವರದಿ-ಖಾದರಬಾಷ ಮೇಲಿನಮನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.