ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ.ಸುದರ್ಶನ್ ಸಜ್ಜನ್ ಹೇಳಿಕೆ
ರಾಯಚೂರು,ಡಿ.೨೮- ಹುಲಗೇರಿ ಹಾಗೂ ವಜ್ಜಲ್ ಅವರು ಹಿರಿಯ ರಾಜಕಾರಣಿಗಳು ಇವರೇ ಹೀಗೆ ಬಹಿರಂಗ ಸಭೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಾ ಹೋದರೆ, ಜನರ ಸಮಸ್ಯೆಯನ್ನು ಬಗೆಹರಿಸುವರು ಯಾರು? ಹಾಗಾಗಿ ಇಂತಹ ಕಿತ್ತಾಟಗಳನ್ನ ಮಾಡೋದು ಬಿಟ್ಟು ಜನರ ಸೇವೆ ಮಾಡುವುದರತ್ತ ಗಮನ ನೀಡಬೇಕು.
ಯಾವುದೇ ಪಕ್ಷದವರು ಇರಲಿ ಹೀಗೆ ಬಹಿರಂಗವಾಗಿ ಸಭೆಯಲ್ಲಿ ಕಿತ್ತಾಡಿಕೊಳ್ಳುವುದು ಒಳ್ಳೆಯದಲ್ಲ. ಕ್ಷೇತ್ರದ ಅಭಿವೃದ್ಧಿಯತ್ತ ಗಮನ ನೀಡಬೇಕಾಗಿರೋದು ಪ್ರತಿಯೊಬ್ಬ ರಾಜಕಾರಣಿಗಳ ಕರ್ತವ್ಯ, ಜನರು ನಮ್ಮಿಂದ ಬಯಸುವುದು ಒಳ್ಳೆಯದು ಹೀಗೆ ಅದನ್ನೆಲ್ಲಾ ಬಿಟ್ಟು ಬಹಿರಂಗವಾಗಿ ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪ ಮಾಡೋದು ಒಳ್ಳೆ ಸಂಪ್ರದಾಯವಲ್ಲವೆಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ. ಸುದರ್ಶನ್ ಸಜ್ಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.