ಶಹಾಪುರ ಸರ್ಕಾರಿ ಆಸ್ಪತ್ರೆಗೆ ಲಕ್ಷ ಯೋಜನೆ ಅನುಷ್ಠಾನ ಪ್ರಸೂತಿ ಗುಣಮಟ್ಟ ರಾಜ್ಯದಲ್ಲೇ
ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಅನುಷ್ಠಾನಾಧಿಕಾರಿ ಡಾ||ರಾಜಕುಮಾರ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.ಪ್ರತಿ ದಿನ ನೂರಾರು ಜನರು ತಪಾಸಣೆಗೆಂದು ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮುಖಾಂತರ ಒಳ್ಳೆ ಮಾದರಿ ಆಸ್ಪತ್ರೆಯಾಗಿದೆ.ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಮಹಿಳಾ ತಜ್ಞ ವೈದ್ಯರು ಆರೋಗ್ಯ ತಪಾಸಣೆಗೆ ಬರುವ ಗರ್ಭಿಣಿ ಹೆಣ್ಣು ಮಕ್ಕಳಿಗೆ ಉತ್ತಮ ಸೇವೆ ನೀಡುವ ಮೂಲಕ ತಾಯಿ ಮಗುವಿನ ಹೆರಿಗೆಯ ಸಮಯದಲ್ಲಿ ಬಾಣಂತಿ ತಾಯಂದಿರಿಗೆ ತೊಂದರೆ ಆಗದಂತೆ ಅವರಿಗೆ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಆರೈಕೆ ನೀಡಿದ್ದರ ಹಿನ್ನೆಲೆಯಲ್ಲಿ ತಾಯಂದಿರ ಮತ್ತು ಮಕ್ಕಳ ಸಾವು ಪ್ರಕರಣಗಳು ಸಂಖ್ಯೆಗಳು ಕಡಿಮೆಯಾಗುತ್ತವೆ ರಾಜ್ಯ ಸರ್ಕಾರ ಶಹಾಪುರ ಸರ್ಕಾರಿ ಆಸ್ಪತ್ರೆ ಒಳ್ಳೆ ಗುಣಮಟ್ಟದ ಪ್ರಸೂತಿ ಆಸ್ಪತ್ರೆ ಪ್ರಮಾಣ ಪತ್ರ ಪಡೆಯಲು ಅರ್ಹತೆ ಹೊಂದಿದೆ ಎಂದು ಹೇಳಿದರು. ಮುಂದೆ ಒಂದು ದಿನ ರಾಷ್ಟ್ರ ಮಟ್ಟದ ಉತ್ತಮ ಗುಣಮಟ್ಟದ ಖಾತ್ರಿ ಯೋಜನೆಗೆ ಆಯ್ಕೆ ಮಾಡುವ ತವಕದಲ್ಲಿ ಶಹಾಪುರ ಸರ್ಕಾರಿ ಆಸ್ಪತ್ರೆ ಮುಂದೆ ಸಾಗುತ್ತದೆ ಎಂದು ತಿಳಿಸಿದರು ಈ ಸಹಜ ಹೆರಿಗೆ ತಾಯಂದಿರಿಗೆ ೩ ದಿನ ಮತ್ತು ಶಸ್ತ್ರಚಿಕಿತ್ಸೆ ಮಾಡಿದಲ್ಲಿ ೭ ದಿನಗಳು ಆಸ್ಪತ್ರೆಯಲ್ಲಿ ಅವರಿಗೆ
ಆರೋಗ್ಯ ಸುಧಾರಣೆ ಉಪಚಾರ ಮಾಡಲಾಗುತ್ತದೆ. ಕರ್ನಾಟಕ ರಾಜ್ಯದ ಗುಣಮಟ್ಟ ಲಕ್ಷ ಯೋಜನೆ ಅನುಷ್ಠಾನ ಅಧಿಕಾರಿ ಡಾ|| ರಾಜಕುಮಾರ ಆರ್, ಸಿ.ಎಚ್. ಅವರು ತಿಳಿಸಿದರು.ಹೆರಿಗೆ ಸಮಯದಲ್ಲಿ ತಾಯಿ ಮಗುವಿನ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಶಸ್ತ್ರಚಿಕಿತ್ಸೆ ಮುಖಾಂತರ ಮಗುವನ್ನು ಕಾಪಾಡುವುದರೊಂದಿಗೆ. ಆಯುಷ್ ಮಾನ ಭಾರತದ ಅಡಿಯಲ್ಲಿ ಹೆಚ್ಚಿನ ಗುಣಮಟ್ಟದ ಆರೋಗ್ಯಕರ ಸುಧಾರಣೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಶಹಾಪುರ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಸ್ಥಾನ ಪ್ರಮಾಣ ಪತ್ರಕ್ಕೆ ಬಾಚಿಕೊಂಡಿದೆ ಇನ್ನೂ ಹೆಚ್ಚಿನ ಗುಣಮಟ್ಟದ ಆರೋಗ್ಯಕರ ಸುಧಾರಣೆ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಡಾ||ರಾಜಕುಮಾರ ಶುಭ ಹಾರೈಸಿದರು.
ವರದಿ-ರಾಜಶೇಖರ ಮಾಲಿ ಪಾಟೀಲ ಶಹಾಪುರ