ಮುಂಡಗೋಡ ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಿಸಿಯೂಟ ಅಡುಗೆ ತಯಾರಿ ವೇಳೆ ಸಾಂಬಾರಿನಲ್ಲಿ ಇಲಿ ಬಿದ್ದರೂ, ಅದೇ ಸಾಂಬಾರನ್ನು ಮಕ್ಕಳಿಗೆ ಬಡಿಸಿದ ಅಡುಗೆ ತಯಾರಕರ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆ ಊಟವನ್ನು ಸೇವಿಸಿದ ಇಬ್ಬರು ಮಕ್ಕಳು ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆದುಕೊಂಡಿದ್ದು,
ಇಷ್ಟೆಲ್ಲಾ ತಿಳಿದಿದ್ದರೂ ಬೇಜವಾಬ್ದಾರಿತನದಿಂದ ವರ್ತಿಸಿದ ಮತ್ತು ಅಡುಗೆ ತಯಾರಿ ವೇಳೆ ನಿರ್ಲಕ್ಷ ತೋರಿದ ಅಡುಗೆ ತಯಾರಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳ ಬೇಕು ಎಂದು ಪೋಷಕರು ತರಾಟೆ ತೆಗೆದುಕೊಂಡಿದ್ದಾರೆ .
ಇದೆ ವೇಳೆ ಬಿ ಇ ಓ ಅಕ್ಕಮಹಾದೇವಿ ಗಾಣಿಗೇರ ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಫೀಕ್ ನಾಯಕ್ ಶಿಸ್ತುಕ್ರಮ ಕೈಗೊಳ್ಳುವ ಭರವಸೆ ನೀಡಿದರು