ಹನೂರು ತಾಲೂಕಿನ ಚಿಕ್ಕಮಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿರಗೋಡು ಗ್ರಾಮದಲ್ಲಿ ಜಿ.ಪಿ ಡಿ.ಪಿ ಮತ್ತು ಜಲಸಂಜೀವಿನಿ ರೈತರ ಕ್ರಿಯಾ ಯೋಜನೆ ಮಾಹಿತಿ ಅಭಿಯಾನ ಗ್ರಾಮ ಸಭೆ. ಹನೂರು ತಾಲೂಕಿನ ಚಿಕ್ಕಮಾಲಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿರಗೋಡು ಗ್ರಾಮಸಭೆಯಲ್ಲಿ ಮಾತನಾಡಿದ ಚಿಕ್ಕಮಾಲಪುರ ಗ್ರಾಮದ ಜೆಡಿಎಸ್ ಕಾರ್ಯಕರ್ತರಾದ ಶಿವು ಹಾಗೂ ಛಲವಾದಿ ಮಹಾಸಭಾ ಸದಸ್ಯರಾದ ಶಿವುಮೂರ್ತಿ ಚಿಕ್ಕಮಾಲಪುರ ಗ್ರಾಮ ಪಂಚಾಯಿತಿಯ ಗ್ರಂಥಾಲಯವು ಇದ್ದು ಇಲ್ಲದಂತಾಗಿದೆ ಇದನ್ನು ಆದಷ್ಟು ಬೇಗ ಸುಸಜ್ಜಿತ ಗ್ರಂಥಾಲಯವಾಗಿ ಮಾರ್ಪಡಿಸಬೇಕು ಎಂದು ಕೇಳಿಕೊಂಡರು ನಂತರ ಮಾತನಾಡಿದ ಚಿಕ್ಕಮಾಲಪುರ ಗ್ರಾಮದ ಜಿ.ಶ್ರೀನಿವಾಸ್ ಹನೂರು ತಾಲೂಕು ಜಯ ಕರ್ನಾಟಕ ಅಧ್ಯಕ್ಷ ಹಾಗೂ ಬಿಜೆಪಿ ಎಸ್ ಸಿ ಮೋರ್ಚ ಹನೂರು ಮಂಡಲ ಉಪಾಧ್ಯಕ್ಷರು ಕಳೆದ 2 ವರ್ಷಗಳಿಂದ ಮನೆಗಳನ್ನು ಯಾರು ಯಾರಿಗೆ ವಿತರಣೆ ಮಾಡಿದ್ದೀರಿ ಹಾಗೂ ಎಷ್ಟು ಮನೆಗಳು ಪೂರ್ಣವಾಗಿದೆ?ವಿವಿಧ ಇಲಾಖೆಗಳ ವತಿಯಿಂದ ಯಾವ ಯಾವ ಕಾಮಗಾರಿಗಳನ್ನು ಕೈ ಗೊಂಡಿದ್ದೀರ ಹಾಗೂ ಎಷ್ಟು ಪೂರ್ಣವಾಗಿದೆ? ಎಂದು ಪ್ರಶ್ನೆ ಮಾಡಿದರು ನಂತರ ಮಾತನಾಡಿದ ಅವರು ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲು ಮೂರು ವರ್ಷಗಳ ಹಿಂದೆ ಅರ್ಜಿಯನ್ನು ಸಲ್ಲಿಸಿದರು ಸಹ ಗ್ರಾಮ ಪಂಚಾಯಿತಿಯಲ್ಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅದೇ ರೀತಿಯಾಗಿ ಚಿಕ್ಕಮಾಲಪುರ ಗ್ರಾಮ ಪಂಚಾಯಿತಿಯಲ್ಲಿ 2007 ನಲ್ಲಿ ಗ್ರಂಥಾಲಯ ಮೇಲ್ವಿಚಾರಕರಾಗಿ ಆರ್ ಅಂಕರಾಜು ಎಂಬುವರನ್ನು ನೇಮಿಸಲಾಗಿದ್ದು 2022 ಇಲ್ಲಿಯವರೆಗೂ ಸರಿ ಸುಮಾರು 12 ರಿಂದ 13 ಲಕ್ಷ ಗೌರವ ಧನವನ್ನು ಪಡೆದಿರುತ್ತಾನೆ. ಆದರೆ ಚಿಕ್ಕಮಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯ ಆ ಗ್ರಾಮದಲ್ಲಿ ಎಲ್ಲಿ ಇದೆ ಅಂತ ಗ್ರಾಮಸ್ಥರಿಗೆ ತಿಳಿದಿಲ್ಲ ಈತನು ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ತೆರೆಯದೆ ಅನೇಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿಕೊಂಡು ಇರುತ್ತಾರೆ ಈ ವಿಚಾರ ಹಾಲಿ ಅಧ್ಯಕ್ಷರು ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಸದಸ್ಯರುಗಳು ಮಾಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಈಗ ಇರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗು ಸಹ ಎಲ್ಲ ತಿಳಿದಿದ್ದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ದಿನ ಗ್ರಾಮ ಸಭೆ ನಡೆದ ಸಂದರ್ಭದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿದಾಗ ಪ್ರತಿಯುತ್ತರವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಮಹಾದೇವ ಪ್ರಭು ರವರು ಮಾತನಾಡಿ ಮುಂದಿನ ಸಾಮಾನ್ಯ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಎಲ್ಲ ಸಮಸ್ಯೆಗಳನ್ನೂ ಬಗೆಹರೆಸುತ್ತೇವೆ.ಎಂದರು.
ನಂತರ ಮಾತನಾಡಿದ ಜಿ ಶ್ರೀನಿವಾಸ್ ಹಾಗೂ ಶಿವು ಶಿವ ಮೂರ್ತಿ ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
-ಉಸ್ಮಾನ್ ಖಾನ್