ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಶ್ರೀಸಿಮೆಂಟ್ ಕೊಡ್ಲಾ ಬೆನಕನಹಳ್ಳಿ ರೈತರಿಗೆ ವಂಚನೆ ಆಗಿದೆ ಅಂತ ಕಂಪನಿಯವರು ಭೂಸ್ವಾಧೀನ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಕಡಿಮೆ ದರದಲ್ಲಿ ರೈತರ ಹೊಲಗಳನ್ನು ಶ್ರೀಸಿಮೆಂಟ್ ಕಂಪನಿಯವರು ಬೆನಕನಹಳ್ಳಿ, ದೊಣಗಾವ್,ರಾಜೋಳ,ಹುಳುಗೋಳು
ಈ ಎಲ್ಲಾ ಗ್ರಾಮದ ರೈತರ ಜಮೀನನ್ನು ಖರೀದಿ ಮಾಡಿದ ಜಮೀನನ್ನು ಮರಳಿ ಹಿಂದಕ್ಕೆ ಪಡೆದು ಕೊಡಬೇಕೆಂದು ರೈತರು ನ್ಯಾಯವನ್ನು ಕೇಳುವ ಮುಖಾಂತರ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದರು.ಸರ್ಕಾರದಿಂದ ನ್ಯಾಯವನ್ನು ಒದಗಿಸಿಕೊಡಬೇಕೆಂದು ರೈತರ ಸಂಘ ಪ್ರತಿಭಟನೆ ನಡೆಸಿತು. ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ರೈತರಿಗೆ ಯಾವುದೇ ರೀತಿ ಅನ್ಯಾಯ ಆಗಿಲ್ಲ ನಾವು ರೈತರ ಬೆಂಬಲವಾಗಿ ಇರುತ್ತೇವೆ ನ್ಯಾಯ ದೊರೆಯುವವರೆಗೂ ಬಿಡುವುದಿಲ್ಲ ಎಂದು ಸೇಡಂ ಕ್ಷೇತ್ರದ ಜೆಡಿಎಸ್ ಮುಖಂಡರಾದ ಬಾಲರಾಜ್ ಗುತ್ತೇದಾರ್ ಈ ಪ್ರತಿಭಟನೆಗೆ ಸಾಥ್ ನೀಡಿದರು.ನವ ಕರ್ನಾಟಕದ ರಾಜ್ಯ ರೈತ ಸಂಘದ ಅಧ್ಯಕ್ಷರಾದ ದಯಾನಂದ್ ಪಾಟೀಲ್ ಕತ್ತಲ ಬಸವೇಶ್ವರ ಗುಡಿಯಿಂದ ಕಲ್ಬುರ್ಗಿ ಕ್ರಾಸ್ ವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನೆಯನ್ನು ನಡೆಸಿದರು ರೈತರ ಹೊಲವನ್ನು ಸಹಿ ಮಾಡಿ 100 ಜನರಿಗೆ ಜಾಬ್ ಕಾರ್ಡ್ ಕೊಡಿಸುತ್ತೇವೆ ಶ್ರೀ ಸಿಮೆಂಟ್ ಕಂಪನಿ ಅಧ್ಯಕ್ಷರು ಹೇಳಿದರು
ರೈತರಿಗೆ ಯಾವುದೇ ಜಾಬ್ ಕಾರ್ಡ್ ಕೊಟ್ಟಿಲ್ಲ ಎಂದು ಪ್ರತಿಪಾದಿಸಿದರು ಈ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಗ್ರಾಮಗಳು ಬೆನಕನಹಳ್ಳಿ ಕೊಡ್ಲಾ ಡೋನೆಗಾವ್ ಹುಳುಗೋಳ್ ನ್ಯಾಯವನ್ನು ಒದಗಿಸಿಕೊಡಬೇಕೆಂದು ಸುಮಾರು 500 ಜನರು ರೈತರ ಪರವಾಗಿ ಸಂಘಟನೆಯನ್ನು ಕತ್ತಲ ಬಸವೇಶ್ವರ ಗುಡಿಯಿಂದ ಕಲ್ಬುರ್ಗಿ ಕ್ರಾಸ್ ವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನೆ ಮಾಡಿದರು.
ರೈತರ ಬೇಡಿಕೆಗಳು
1)ಶ್ರೀ ಸಿಮೆಂಟ್ ಕಂಪನಿ ರೈತರಿಗೆ ಜಾಬ್ ಕಾರ್ಡನ್ನು ಒದಗಿಸಬೇಕು
2)ರೈತರಿಗೆ ಬೆಳೆ ಹಾನಿಯನ್ನು ಕಂಪನಿಯಿಂದ ದೊರಕಿಸಿಕೊಳ್ಳಬೇಕು
3) ರೈತರಿಗೆ ಕಂಪನಿಯಿಂದ ಸೌಲಭ್ಯ ಸೌಲತ್ತುಗಳನ್ನು ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು