
ಧಾರವಾಡ : ಇದೇ ಜನೆವರಿ 03, 2023ರಂದು ವಿಜಯಪುರದಲ್ಲಿ DVP ವತಿಯಿಂದ ಕೊಡಮಾಡುವ ಮಾತೇ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಸಮಾರಂಭಕ್ಕೆ ಪದಾಧಿಕಾರಿಗಳ ಸಿದ್ಧತೆ ಮತ್ತು ತಯಾರಿ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕ ಪದಾಧಿಕಾರಿಗಳ ಸಭೆ ಸೇರಿತ್ತು.ಈ ಸಭೆಯಲ್ಲಿ ಪರಿಷತ್ ನ ವಿಭಾಗೀಯ ಸಂಚಾಲಕರಾದ ಕುಮಾರ್ ಚವ್ಹಾಣ ಮಾತನಾಡಿ ದಲಿತ ವಿದ್ಯಾರ್ಥಿ ಪರಿಷತ್ ಇದೊಂದು ವಿಭಿನ್ನವಾದ ವಿದ್ಯಾರ್ಥಿ ಸಂಘಟನೆಯಾಗಿದೆ ಮತ್ತು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ವಿಭಿನ್ನ ಕ್ಷೇತ್ರಗಳಲ್ಲಿ ಭಾಗಿಯಾಗುವಂತಹ ಸಂಘಟನೆಯಾಗಿದೆ ಮುಖ್ಯವಾಗಿ ವಿದ್ಯಾರ್ಥಿ ದೆಸೆಯಿಂದ ಕೆಲಸ ಮಾಡುವಂತಹ ಸಂಘಟನೆಯಾಗಿದೆ ಎಂದು ಪರಿಷತನ್ನು ಉದ್ದೇಶಿಸಿ ಮಾತನಾಡಿದರು.
ದಲಿತ ವಿದ್ಯಾರ್ಥಿ ಪರಿಷತ್ ಒಂದು ರಾಜ್ಯದಲ್ಲಿ ಅಷ್ಟೇ ಅಲ್ಲದೇ ಇಡೀ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿರುವ ಸಂಘಟನೆಯಾಗಿದೆ ಈ ಸಂಘಟನೆಯ ಮೂಲ ಉದ್ದೇಶ ಜಾತಿ, ಮತ, ಧರ್ಮವನ್ನು ಎಣಿಸದೇ ಎಲ್ಲಾ ಸಮುದಾಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಥಾಪಿತವಾದ ಸಂಘಟನೆಯಾಗಿದೆ ಈ ಸಂಘಟನೆಯು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ನಡೆಯುವ ಅನ್ಯಾಯದ ವಿರುದ್ಧ ಸದಾ ಎದ್ದು ನಿಲ್ಲುವುದು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನೇರವಾಗಿ ಮುಖಾಮುಖಿಯಾಗಿ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತಹ ಸಂಘಟನೆಯಾಗಿದೆ ಈಗಾಗಲೇ ಹಲವಾರು ಪ್ರಮುಖ ಹೋರಾಟಗಳ ಮೂಲಕ ಯಶಸ್ವಿ ಕಂಡಂತಹ ಉದಾಹರಣೆಗಳು ರಾಜ್ಯ ಸರ್ಕಾರಕ್ಕೆ ಅಷ್ಟೇ ಅಲ್ಲದೇ ಇಡೀ ಕೇಂದ್ರ ಸರ್ಕಾರಕ್ಕೂ ತಿಳಿದಿರುವ ವಿಷವಾಗಿದೆ.ಇಂತಹ ಸಂಘಟನೆಯನ್ನು ಸ್ಥಾಪಿಸಿ ಬೆಳೆಸಿ ಮುನ್ನೆಡೆಸುತ್ತಿರುವ ಸಾಧನೆ ಪರಿಷತ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಾಥ್ ಪೂಜಾರ ಅವರಿಗೆ ಸಲ್ಲಬೇಕಿದೆ ಇಂತಹ ಪ್ರತಿಷ್ಠೆಯನ್ನು ಹೊಂದಿದ ಪರಿಷತನ್ನು ಸುಗಮವಾದ ರೀತಿಯಲ್ಲಿ ಮುನ್ನೆಡೆಸುವುದು ಎಲ್ಲಾ ಪದಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಧಾರವಾಡ ಜಿಲ್ಲಾ ಸಂಚಾಲಕರಾದ ಹನುಮಂತ ದಾಸರ ಪರಿಷತ್ ಕಾರ್ಯ ಸಾಧನೆಯನ್ನು ಉದ್ದೇಶಿಸಿ ಮಾತನಾಡಿದರು.
ಪರಿಷತ್ ಇನ್ನೂ ಹೆಚ್ಚಿನ ಸದಸ್ಯರನ್ನು ಹೊಂದಬೇಕಿದೆ ಮತ್ತು ಪದಾಧಿಕಾರಿಗಳಿಗೆ ನೀಡಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿಭಾಯಿಸಬೇಕು ವೇಗವಾಗಿ ಘಟಕ ರಚನೆಯಗಬೇಕು ಹಾಗೆಯೇ ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಕೂಡ ಪರಿಷತ್ ಘಟಕ ರಚನೆ ಮಾಡುವುದು ತುಂಬಾ ಅವಶ್ಯಕವಾಗಿದೆ ಎಂದು ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹಾಸಟ್ಟಿ ಹೇಳಿದರು.
ಪ್ರತಿಯೊಂದು ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಅವಲೋಕಿಸುವ ಮೂಲಕ ಪ್ರತಿಯೊಂದು ವಸತಿ ನಿಲಯಗಳಿಗೆ ಹಾಗೂ ಕಾಲೇಜುಗಳಿಗೆ ಪರಿಷತ್ ನ್ನು ಪರಿಚಯಿಸಬೇಕು ಎಂಬುದರ ಕುರಿತು ಪದಾಧಿಕಾರಿಗಳಿಂದ ಪ್ರಸ್ತಾಪ ಬಂತು.
ಈ ವೇಳೆ ನೂತನವಾಗಿ ಆಯ್ಕೆಯಾದ ಶಾಂತಯ್ಯ ಓಸುಮಠ,ರಾಕೇಶ ಆಯಟ್ಟಿ, ರವಿ ಬೇವಿನಮಟ್ಟಿ, ಬಸವರಾಜ ವಾಲಿಕಾರ, ಮಂಜುನಾಥ ಕೊರವರ, ಶಶಿಕುಮಾರ ಬಾವಚಿ, ಬಸವರಾಜ ಕರಿಗಾರ, ನಾಗರಾಜ್ ಮಾದರ, ಸರೋಜಾ. ಎಸ್. ಕೊಟ್ಟೂರ, ದುರಗಮ್ಮ. ಎಚ್. ಹೀಗೆ ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡುವ ಮೂಲಕ ಗೌರವಿಸಿ ಸನ್ಮಾನಿಸಲಾಯಿತು.
