ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಿಂದ ಬಂಡಳ್ಳಿ ಗ್ರಾಮಕ್ಕೆ ಹಾದು ಹೋಗುವ ರಸ್ತೆಯ ಪಾಡು ಕೇಳುವವರು ಯಾರೂ ಇಲ್ಲ ಇಲ್ಲಿನ ರಸ್ತೆ ಸುಮಾರು ವರ್ಷಗಳಿಂದ ಹದಗೆಟ್ಟಿದ್ದು ವಾಹನಗಳು ಸಂಚರಿಸುವಾಗ ಹಲವಾರು ಬಾರಿ ವಾಹನಗಳು ರಸ್ತೆ ಗುಂಡಿಗಳನ್ನು ತಡೆಯಲು ಹೋಗಿ ಮುಖಾಮುಖಿ ಡಿಕ್ಕಿ ಹೊಡೆದು ತಮ್ಮ ಪ್ರಾಣಗಳನ್ನು ಕಳೆದುಕೊಂಡ ಪ್ರಸಂಗಗಳು ಟ್ರಾಕ್ಟರ್ ಗಳು ಮಗುಚಿ ಬಿದ್ದಿರುವ ಪ್ರಸಂಗಗಳು ನಡೆದಿವೆ ಇಷ್ಟೆಲ್ಲಾ ಆಗಿದ್ದರೂ ಸಹ ಜನಪ್ರತಿನಿಧಿಗಳು ಹಾಗೂ ನಮ್ಮ ಕ್ಷೇತ್ರದ ಶಾಸಕರು ಇತ್ತ ಕಡೆ ಗಮನ ಹರಿಸಿದೆ ಇರುವುದು ದುಃಖಕರ ಸಂಗತಿ ಇನ್ನೂ ಮುಂದೆಯಾದರೂ ಶಾಸಕರು ಇತ್ತ ಕಡೆ ಭೇಟಿ ಮಾಡಿ ಜನರ ಸಂಕಷ್ಟಕ್ಕೆ ಸಹಕರಿಸಬೇಕೆಂದು ಗ್ರಾಮಸ್ತರು ಕೇಳಿ ಕೊಳ್ಳುತ್ತಿದ್ದಾರೆ ಹಾಗೂ ಇದು ಮುಂದಿನ ದಿನಗಳಲ್ಲಿ ಸರಿಯಾಗದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ವರದಿ :ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.