ಸಿಂಧನೂರಿನ AK ಗೋಪಾಲ ನಗರದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುರುಗೇಶ ಹೀರೇಮಠ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸುಣ್ಣ ಬಣ್ಣ ಬಳಿಸುವ ಕಾರ್ಯವನ್ನು ಮಾಡಿದ್ದರಿಂದ ಇಂದು ಶುಕ್ರವಾರ ವನಸಿರಿ ಫೌಂಡೇಶನ್ ವತಿಯಿಂದ ಅದೇ ಶಾಲೆಯ ಆವರಣದಲ್ಲಿ ಮುಖಂಡರಾದ ಶ್ರೀ ಮುರುಗೇಶ ಹಿರೇಮಠ ಅವರನ್ನು ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ
ಗೌರವಿಸಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಇವತ್ತಿನ ದಿನಮಾನಗಳಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ. ಪ್ರತಿಯೊಬ್ಬ ಶ್ರಮಜೀವಿಯು ಈ ಪರಿಸರಕ್ಕೆ ತನ್ನದೇ ಕೊಡುಗೆ ನೀಡುತ್ತಾ ಬಂದಿರುತ್ತಾರೆ ಅದೇ ಸಾಲಿನಲ್ಲಿ ಕೂಡ ನಮ್ಮ ಸಿಂಧನೂರು ನಗರದ ಮುರುಗೇಶ ಹಿರೇಮಠ ಅವರು.ಅವರು ಈ ಶಾಲೆಯ ಬಗ್ಗೆ ಕಾಳಜಿವಹಿಸಿ ಶಾಲೆಯ ಅಂದಚೆಂದವಾಗಿ ಕಾಣಲು,ಕಲಿಯುವು ಮಕ್ಕಳಿಗೆ ಉತ್ಸಾಹ ತುಂಬಲು ಮತ್ತು ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕೆಂಬ ಉದ್ದೇಶದಿಂದ ಈ ಶಾಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಾ ಕೊಠಡಿಗಳಿಗೆ ಸುಣ್ಣಬಣ್ಷ ಹಚ್ಚಿಸಿ ಊರಿನ ಯುವಕರಿಗೆ ಮಾದರಿಯಾಗಿದ್ದಾರೆ.ಇವರ ಶಿಕ್ಷ ಕಾಳಜಿ ಪ್ರತಿಯೊಬ್ಬರಿಗೂ ಮಾದರಿಯಾಗಲಿ ಇನ್ನಷ್ಟು ಶಿಕ್ಷಣ ಪ್ರೇಮಿಗಳು ಹುಟ್ಟಿಕೊಳ್ಳಲಿ ಹಾಗೂ ಇವರ ಕನಸುಗಳು ಎಲ್ಲವೂ ನನಸಾಗಲೆಂದು ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಮುರುಗೇಶ ಹಿರೇಮಠ,ಶಾಲಾ ಮಕ್ಕಳು ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಸಸಿಗಳನ್ನು ನೆಟ್ಟು ನೀರುಣಿಸಿದರು.
ಈ ಸಂದರ್ಭದಲ್ಲಿ Eco ಸವನ್, ಮುಖ್ಯ ಗುರುಗಳ ಜಗನಾಥರವ್,ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪುರ,ಶರಣೇಗೌಡ ಹೆಡಗಿನಾಳ,ಶಂಕರಗೌಡ ಎಲೆಕೂಡ್ಲಿಗಿ,ಮಹೇಶ ಹಿರೇಮಠ, ಚಂದ್ರು ಪವಾಡಶೆಟ್ಟಿ ತುರವಿಹಾಳ,ರಂಜಾನ್ ಸಾಬ್, ವೆಂಕಟರೆಡ್ಡಿ ಹೇಡಗಿನಾಳ,ಮುತ್ತು ಪಾಟೀಲ್ ಭೂತಲದಿನ್ನಿ,
ರಾಜು ಪತ್ತಾರ ಬಳಗಾನೂರ,
ದೇವರಾಜ್ ಎಲೆಕೂಡ್ಲಿಗಿ,
ಮುದಿಯಪ್ಪ ಹೊಸಳ್ಳಿ ಕ್ಯಾಂಪ್,
ಶ್ರೀಮತಿ ವಿಜಯ ಲಕ್ಷ್ಮಿ,ಬನಪ್ಪ ಶಿಕ್ಷಕರ,ಅಶ್ವಿನಿ gt,ಹಸೀನಾ ಮುಖ್ಯ ಗುರುಗಳು ಉರ್ದು ಶಾಲೆ,ಉಷಾ d ಶಿಕ್ಷಕಿ, ಸರಸ್ವತಿ ಅಂಗನವಾಡಿ ಶಿಕ್ಷಕಿ,ಚನ್ನಬಸವ ಗಸ್ತಿ ಯುವ ಮುಖಂಡರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.