ಶಹಾಪುರ:ಕೇಂದ್ರ ಸರ್ಕಾರದಿಂದ ಜೇವರ್ಗಿ- ಶಹಾಪುರ ದಿಂದ ಸುರಪುರಕ್ಕೆ ಬೈಪಾಸ್ ರಸ್ತೆ ಕಾಮಗಾರಿ ಮಂಜೂರಿಗೊಳಿಸಿದ್ದು ರಸ್ತೆ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳ ಹಾಗೂ ಸಂಸದರ ನೇತೃತ್ವದಲ್ಲಿ ಸಭೆ ನಡೆಯಿತು ಎಂದು ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ಜಿಲ್ಲಾಧಿಕಾರಿಗಳ ಸಭೆ ಬಳಿಕ ಶಹಾಪುರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬೈಪಾಸ್ ರಸ್ತೆ ಕಾಮಗಾರಿ ಸಂಪೂರ್ಣ ಮಾಹಿತಿ ನೀಡಿದರು.ಶಹಾಪುರ ನಗರ ವೇಗವಾಗಿ ಬೆಳೆಯುತ್ತಿದೆ ಆದಕಾರಣ ನಗರದ ಬೈಪಾಸ್ ರಸ್ತೆಗಾಗಿ ಹಲವಾರು ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಬೈಪಾಸ್ ರಸ್ತೆ ಕಾಮಗಾರಿ ಕುರಿತು ದೃಡ ನಿರ್ಧಾರದ ಕೈಗೊಂಡ ಜೇವರ್ಗಿಯಿಂದ ಶಹಾಪುರ ಹಾದು ಹೋಗುವ ಸುರಪುರಕ್ಕೆ ಒಟ್ಟು ೯೦ ಕಿ.ಮಿ ೪ ಲೈನ್ ರಸ್ತೆ ಕಾಮಗಾರಿ ಮಂಜೂರು ಮಾಡಲಾಗಿದೆ ರಾಯಚೂರು ಲೋಕಸಭಾ ಸದಸ್ಯರಾದ ರಾಜಾ ಅಮರೇಶ ನಾಯಕ್ ಅವರಿಗೆ ಶರಣಬಸಪ್ಪಗೌಡ ದರ್ಶನಾಪೂರ ಶಾಸಕರು ಅಭಿನಂದನೆಗಳನ್ನು ಹೇಳಿದರು.
೮ ತಿಂಗಳಲ್ಲಿ ರಸ್ತೆ ಕಾಮಗಾರಿ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ ಎಂದು ಹೇಳಿದರು.
ಜೇವರ್ಗಿ ತಾಲೂಕಿನ ಭೀಮಾ ಬ್ರೀಜ್ ಯಿಂದ ಪ್ರಾರಂಭಗೊಳ್ಳುವ ಬೈಪಾಸ್ ರಸ್ತೆ ೪ ಲೈನ್ ರಸ್ತೆ ಕಾಮಗಾರಿ ಹುಲಿಕಲ್ ಮಾರ್ಗದಿಂದ ಹಾದು ಹೋಗುವ ರಸ್ತೆ ಸೈದಾಪುರ ಉಮರದೊಡ್ಡಿ ದೊಡ್ಡ ಸಗರ ಶಾರದಹಳ್ಳಿ ಮಾರ್ಗವಾಗಿ ಸುರಪುರಕ್ಕೆ ತಲುಪುತ್ತದೆ. ಇದರಲ್ಲಿ ೩ ಬ್ರೀಡ್ಜಗಳು ೫೦ ಸಿಡಿಗಳು. ೨೩ ಮೈನರ್ ಬ್ರಿಡ್ಜ್ ಗಳು ೫ ಮೇಜರ್ ಜಂಕ್ಷನ್ ಗಳು ಒಳಗೊಂಡಿದ್ದು ಒಟ್ಟು ೩೭೯.೩೯ ಹೆಕ್ಟೇರ್ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ೫೫.೨೩ ಹೆಕ್ಟೇರ್ ಸರ್ಕಾರ ಭೂ ಪ್ರದೇಶದೊಳಗೆ ಹಾದು ಹೋಗುವ ಬೈಪಾಸ್ ರಸ್ತೆ ಒಟ್ಟು ೩೨೪.೬೭ ಹೆಕ್ಟೇರ್ ಖಾಸಗಿ ಜಮೀನು ಅವಶ್ಯಕತೆ ಇದೆ ಒಟ್ಟು ೨ ಜಿಲ್ಲೆ ೨೧ ಹಳ್ಳಿಗಳು ಒಳಗೊಂಡಿರುತ್ತವೆ.ಬೈಪಾಸ್ ರಸ್ತೆ ಕಾಮಗಾರಿ ಅಂದಾಜು ೧೨೦.೨೦ ಕೋಟಿ ರೂ.ಗಳ ಕ್ರಿಯಾ ಯೋಜನೆಯಾಗಿದ್ದು.ಕೇಂದ್ರ ಸರ್ಕಾರ ಅನುದಾನ ಒದಗಿಸಲಿದೆ ಎಂದು ಶರಣಬಸಪ್ಪಗೌಡ ದರ್ಶನಾಪೂರರವರು ಸಂಪೂರ್ಣವಾಗಿ ಮಾಹಿತಿ ನೀಡಿದರು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ