
ವಿಜಯಪುರ: ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದು ಶ್ರೀಗಳ ಲಿಂಗೈಕ್ಯದ ಸುದ್ದಿಯನ್ನು ತಿಳಿದ ಅಪಾರ ಭಕ್ತರಿಗೆ ದುಃಖವನ್ನು ಉಂಟು ಮಾಡಿದೆ,ಆದ್ಯಾತ್ಮ ಮತ್ತು ತತ್ವ ಶಾಸ್ತ್ರದ ಕೊಂಡಿ ಕಳಚಿದೆ ಇನ್ನೂ ಅವರ ಜ್ಞಾನ ಬಂಡಾರಿಯ ಅಮೃತವಾಣಿಯ ಸಾಲುಗಳು ಮಾತ್ರ ನಮಗೆ ನೆನಪು ಮಾತ್ರ ಸಾಧ್ಯ,ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ದರ್ಶನವನ್ನು ಸೈನಿಕ ಶಾಲೆ ಬಿಜಾಪುರದಲ್ಲಿ ವ್ಯವಸ್ಥೆ ಮಾಡಲಾಗಿದೆ ಘನವೆತ್ತ ಪ್ರಧಾನಮಂತ್ರಿಗಳು ಬೆಳಿಗ್ಗೆ 11 ಗಂಟೆಗೆ ಶ್ರೀಗಳ ಒಂದು ಅಂತಿಮ ದರ್ಶನವನ್ನು ಪಡೆದುಕೊಂಡು ಸಾಯಂಕಾಲ 5:00 ವರೆಗೆ ಶ್ರೀಗಳ ಲಿಂಗೈಕ್ಯ ಅಂತ್ಯ ಸಂಸ್ಕಾರವನ್ನು ನೆರವೇರಿಸಲಿದ್ದಾರೆ ಎಂದು ಶ್ರೀ ಸಿದ್ದೇಶ್ವರ ಜ್ಞಾನ ಯೋಗಾಶ್ರಮದ ಅಧಿಪತಿಗಳು ಹಾಗೂ ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಮಠದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು
