ಸಿಂಧನೂರು.ಜ .2 : ಸುಮಾರು 20 ದಿನಗಳ ಹಿಂದೆ ಸಿಂಧನೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಅನಾಥವಾಗಿ ಸಿಕ್ಕಿದ್ದ ಸುಮಾರು ಒಂದೂವರೆ ವರ್ಷದ ಮಗುವನ್ನು ಆಗಿನ ಸದ್ಯದ ಪರಿಸ್ಥಿತಿಯನ್ನು ಅರಿತು ಆ ಮಗುವಿನ ಲಾಲನೆ ಪೋಷಣೆಯ ಅವಶ್ಯಕತೆಯನ್ನು ಗಮನಿಸಿ ಪೊಲೀಸ ಅಧಿಕಾರಿಗಳು ಕಾರುಣ್ಯ ಆಕ್ರಮಕ್ಕೆ ಒಪ್ಪಿಸಿದ್ದರು.ಆ ಮಗುವನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ್ದ ಸಹನಾ ಮಕ್ಕಳ ಆಸ್ಪತ್ರೆಯ ಡಾ. ಕೆ ಶಿವರಾಜ ಆ ಮಗುವಿಗೆ ಹೃದಯದ ತೊಂದರೆ ಇರುವುದನ್ನು ತಿಳಿಸಿ ಉಚಿತವಾಗಿ 20 ದಿನಗಳ ಕಾಲ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು ನಂತರ ಪೊಲೀಸ್ ಇಲಾಖೆ ಅಧಿಕಾರಿಗಳು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಿಂಧನೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುದೀಪ್ ಅವರಿಗೆ ಮತ್ತು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಲಿಂಗನಗೌಡ ಅವರಿಗೆ ಮಾಹಿತಿ ನೀಡಿ ಪೊಲೀಸ್ ಅಧಿಕಾರಿಗಳ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳ ಮತ್ತು ಕಾರುಣ್ಯ ಆಶ್ರಮದ ಸಿಬ್ಬಂದಿಗಳು ಮತ್ತು ಸ್ಥಳೀಯ ಆಸ್ಪತ್ರೆಯ ವೈದ್ಯರುಗಳ ಸಮಕ್ಷಮದಲ್ಲಿ ರಾಯಚೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು ಈ ಸಮಯದಲ್ಲಿ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಇಂತಹ ಘಟನೆಗಳು ನಗರದಲ್ಲಿ ನಡೆಯಬಾರದು ಈ ಮಗುವಿಗೆ ತಾಯಿಯಿದ್ದು ಆ ತಾಯಿಯು ಕೆಟ್ಟ ಕಟ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿ ತಾಯಿ ಎನ್ನುವ ಸ್ಥಾನಕ್ಕೆ ಆಗೌರವ ತೋರುತ್ತಿದ್ದಾಳೆ. ಇವಳಿಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಿತ ಎಷ್ಟು ಬುದ್ಧಿ ಹೇಳಿದರು ಕೇಳದೆ ಮನಬಂದಂತೆ ನಡೆದುಕೊಳ್ಳುತ್ತಿದ್ದಾಳೆ.ನಮ್ಮ ಸಿಂಧನೂರಿನ ಪೊಲೀಸ್ ಇಲಾಖೆ ಮಾನವೀಯತೆಯ ಮಂದಿರವಾಗಿದೆ ಪೊಲೀಸ್ ಇಲಾಖೆ ಎಲ್ಲಾ ಅಧಿಕಾರಿಗಳು ಸಹಿತ ತಮ್ಮ ಅಧಿಕಾರ ಮೀರಿ ಇಂತಹ ಅನೇಕ ಹಲವಾರು ಸಮಾಜ ಪರ ಕಾರ್ಯಗಳನ್ನು ಮಾಡುತ್ತಿರುವುದು ನಮ್ಮ ಸಿಂಧನೂರಿನ ಪುಣ್ಯ ಸಹನಾ ಮಕ್ಕಳ ಆಸ್ಪತ್ರೆಯ ಡಾ.ಕೆ.ಶಿವರಾಜ ಅವರು ಆ ಮಗುವಿಗೆ ಚಿಕಿತ್ಸೆ ನೀಡುವುದರ ಮೂಲಕ ಬೇಕಾಗಿರುವ ಉಡುಪುಗಳು ಮತ್ತು ಪೌಷ್ಟಿಕ ಆಹಾರಗಳನ್ನು ಪೂರೈಸಿದ್ದು ಭಗವಂತನ ರೂಪದ ಸೇವೆಯಾಗಿದೆ ಎಂದು ಮಾತನಾಡಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಂಧನೂರು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಕಾರುಣ್ಯ ಆಶ್ರಮದ ವತಿಯಿಂದ ವಿಶೇಷ ಅಭಿನಂದನೆಗಳನ್ನು ಅರ್ಪಿಸಿದರು.ಈ ಸಮಯದಲ್ಲಿ ಸಿಂಧನೂರು ನಗರ ಠಾಣೆ ಪಿ.ಎಸ್.ಐ. ಗಳಾದ ಸೌಮ್ಯ ಹಿರೇಮಠ. ಸುದೀಪ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಿಂಧನೂರು. ಲಿಂಗನಗೌಡ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಿಂದನೂರು. ಮತ್ತು ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಬಸಮ್ಮ,ಅಮರೇಶ,ಮರಿಯಪ್ಪ,ಮಂಜುನಾಥ ಗಾಣಿಗೇರ,ಓಬಳೇಶ್ ನಾಯಕ್ ಅನೇಕರು ಉಪಸಿತರಿದ್ದರು.
ವರದಿ:ವೆಂಕಟೇಶ್ ಹೆಚ್ ಬೂತಲದಿನ್ನಿ