ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಕೊಡಬೇಕಾದ ಪೌರಾಯುಕ್ತ ಹಾಗೂ ಸಿಬ್ಬಂದಿಗಳು ಸೇರಿದಂತೆ ನಗರಸಭೆ ಅಧಿಕಾರಿಗಳಿಗೆ ಯಾರೂ ಕೇಳುವವರು ಹೇಳುವವರು ಇಲ್ಲದಂತೆ ಆಗಿದೆ ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ನಗರಸಭೆ ಕರ ವಸಲಿಗಾರರು ಒಂದೇ ಸ್ಥಳದಲ್ಲಿ ತಳ ಊರಿದ್ದು ೧೦-೧೫ ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದಾರೆ.ಇಂತಹ ಕರವಸಲಿಗಾರರನ್ನು ತಕ್ಷಣವೇ ಬೇರೆ ಕಡೆಗೆ ವರ್ಗವಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿರುತ್ತಾರೆ ಇತ್ತಕಡೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಜನರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಗರಸಭೆ ವಾರ್ಡ್ ನಂಬರ್ ೯ ರಲ್ಲಿ ಬರುವ ನಿವೇಶನ ಸಂಖ್ಯೆ ೧೩-೪೨ ಶ್ರೀಮತಿ ಜಾನಕಿಬಾಯಿ ಗಂ/ ವಿಠ್ಠಲ ಶಿರವಾಳಕರ್ ಸಾ||ಶಹಾಪುರ ಇವರ ಖುಲ್ಲಾ ಜಾಗದಲ್ಲಿ ಅನಧಿಕೃತ ವ್ಯಕ್ತಿಗಳು ಈ ಜಾಗ ತಮ್ಮದೇ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಗರಸಭೆ ಅಧಿಕಾರಿಗಳೊಂದಿಗೆ ಶಾಮಿಲಾಗಿ ಕಾಂಪೌಂಡ್ ನಿರ್ಮಿಸಿಕೊಂಡಿರುತ್ತಾರೆ ಅನಧಿಕೃತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಸದರಿ ಕಾಂಪೌಂಡ್ ತೆರವುಗೊಳಿಸಿ ಮೂಲ ಮಾಲೀಕರಿಗೆ ಸದರಿ ಜಾಗವನ್ನು ಕೊಡಿಸಲು ಕ್ರಮ ಕೈಗೊಳ್ಳಲು ಕೋರಿ ಮನವಿ ಸಲ್ಲಿಸಿರುತ್ತಾರೆ ದಿ ೧೦/೯/೨೦೨೨ ರಂದು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಪೌರಾಯುಕ್ತರಿಗೆ ಸೂಚಿಸಿದರು ಆದರೂ ನಿಯಮಾನುಸಾರ ಕ್ರಮ ಕೈಗೊಂಡ ಕ್ರಮದ ಬಗ್ಗೆ ನೇರವಾಗಿ ಅರ್ಜಿದಾರರ ಸಲ್ಲಿಸಲು ಸೂಚಿಸಿದ್ದಾರೆ ಇಲ್ಲಿವರೆಗೆ ಪೌರಾಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗಾಗಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಕೊಡದ ಪೌರಾಯುಕ್ತರು ಹೇಗೆ ಕೆಲಸ ಮಾಡುತ್ತಾರೆ. ಎಂಬುವುದು ಸಾರ್ವಜನಿಕರಿಗೆ ತಿಳಿಯದಾಗಿದೆ
ವರದಿ-ರಾಜಶೇಖರ ಮಾಲಿ ಪಾಟೀಲ ಶಹಾಪುರ