ಮಂಗಳೂರು ಖಂಡಿಗೆ,ಚೇಳಾರು,ಜನವರಿ 03,2023: ಶ್ರೀನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಕೆ.ಚಂದ್ರಶೇಖರ ನಾವಡ ರ ಷಷ್ಟ್ಯಬ್ದಿ ಪೂರ್ತಿ ಸಮಾರಂಭದ ಮುಂದುವರಿದ ಕಾರ್ಯಕ್ರಮವಾಗಿ ಇಂದು ಚಂಡಿಕಾ ಹೋಮ ಆಯೋಜಿಸಿದ್ದರು.ಚಂಡಿಕಾ ಹೋಮದ ಪೂರ್ಣಾಹುತಿಯ ಶುಭ ಸಂಧರ್ಭಕ್ಕೆ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಯವರು ಸಾಕ್ಷಿಯಾಗಿದ್ದರು. ಪರಮ ಪೂಜ್ಯ ಸ್ವಾಮೀಜಿಗಳನ್ನು ಹೋಮದ ಪೂರ್ಣಾಹುತಿಯ ನಂತರ ಶ್ರೀಮತಿ ಸುಮಾ ಮತ್ತು ವಿದ್ವಾನ್ ಶ್ರೀ ಚಂದ್ರಶೇಖರ ನಾವಡರು ಸ್ವಾಮೀಜಿಗಳ ಪಾದ ಪೂಜೆಮಾಡಿ ಫಲ ಪುಷ್ಪ ಕಾಣಿಕೆ ಇತ್ತು ಪೂಜ್ಯ ಸಾಮೀಜಿಗಳ ಆಶೀರ್ವಾದ ಪಡೆದು ಕೃತಾರ್ಥರಾದರು. ಸಮಾರಂಭಕ್ಕೆ ಶ್ರೀ.ಹರಿಕೃಷ್ಣ ಪುನರೂರ್,ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀಸುಧಾಕರ ರಾವ್ ಪೇಜಾವರ, ಶ್ರೀ ರವೀಂದ್ರ ರಾವ್ ಬಾಳ, ಶ್ರೀ ಗಿರೀಶ್ ನಾವಡ, ಶ್ರೀ ಚಂದ್ರಶೇಖರ ಹೆಬ್ಬಾರ್ ಕೊಲ್ಯ, ಶ್ರೀನಾಗಭೂಷಣ್, ಶ್ರೀಕೃಷ್ಣ ಪ್ರಸಾದ್,ಅಸಂಖ್ಯಾತ ಶಿಷ್ಯ ಬಳಗ ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು ಇವತ್ತು ಸಂಜೆ ಶ್ರೀ ಹನುಮಗಿರಿ ಯಕ್ಷಗಾನ ಮೇಳ ದವರಿಂದ ಭಾರತ ಜನನಿ ಎಂಬ ಯಕ್ಷಗಾನ ಬಯಲಾಟ ಜರುಗಲಿದೆ, ದಿನಾಂಕ 05/01/2023 ಗುರುವಾರ ದಂದು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ 2022 – 2023 ನೇ ಸಾಲಿನ ನಾಟ್ಯಾಂಜಲಿ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ರವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಖಂಡಿಗೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ವರದಿ-ಚಂದ್ರಶೇಖರ ಹೆಬ್ಬಾರ್ ಕೊಲ್ಯ