ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸರಳ ಸಜ್ಜನಿಕೆಯ ಶ್ರೀ ಸಿದ್ದೇಶ್ವರ ಸ್ವಾಮೀಜಿ

ನಡೆದಾರೋ ಜಗದೊಳಗ ಸತ್ಯವನು ಸಾರುತ
ಭಕ್ತಿ ಭಾವದೊಳಗ ಭಕ್ತರೊಂದಿಗೆ ಬೆರೆಯುತ
ಬಂಧು ಬಾಂಧವರೊಂದಿಗೆ ಬದುಕಿರೆನ್ನುತ
ಭಾವೈಕ್ಯತೆ ಮೆರೆದರು ಮೊಗದಲಿ ಮಂದಹಾಸವ ಬೀರುತ….!!

ತಿಳಿಸ್ಯಾರೋ ಜನಮನಕ ಜನನ ಮರಣದ ಬದುಕ
ನಿಷ್ಠೆಯಿಂದಿರಲಿ ಪ್ರತಿನಿತ್ಯ ಕಾಯಕ
ಭಕ್ತಿಯಿಂದಿರಲಿ ಬದುಕಿನ ಭಾವನೆಗಳ ಪ್ರಾಯೋಗಿಕ
ಮೂರು ದಿನದ ಸಂತೆಯನು ಚಿಂತೆಯಿಲ್ಲದೇ ಸಾಗಿಸುವುದೆಂದರು ಸಾರ್ಥಕ….!!

ತೊಟ್ಟು ನಡೆದರು ಕಲ್ಮಶವಿಲ್ಲದ ಬಿಳಿ ಬಟ್ಟೆಯ
ಮೆಟ್ಟಿ ನಡೆದರು ಆಡಂಬರವಿಲ್ಲದ ಪಾದರಕ್ಷೆಯ
ಸ್ವರ್ಗವನ್ನೇ ತೋರಿದರು ಸುತ್ತಮುತ್ತಲಿನ ನಿಸರ್ಗದಲಿ
ಧನ್ಯಮಾರ್ಗವನ್ನೇ ನೀಡಿದರು ದಾರಿದ್ರ್ಯವ ತೊಲಗಿಸಿ ಧರೆಯಲಿ..!!

ಹೇಳ್ಯಾರೋ ತತ್ವಗಳನು ಬದುಕಲು ಜನಮನಕೆ
ಬದುಕುತ ಭಾವಗಳದಿ ಬೆರೆಯುತ ಅನುದಿನಕೆ
ಆಶೆಗಳನು ದೂರವಿಡಿ ಭಾಷೆಗಳನು ಬರೆದಿಡಿ
ರಾಶಿ ರಾಶಿ ಮಾತುಗಳಿಗೆ ಮೋಸ ಹೋಗಬೇಡಿರೆಂದರು….!!

ನಕ್ಕು ನಗಿಸು ನಗುವಿರುವವರಿಗೆ ಮೊಗದಲಿ
ಕುಣಿದು ಕುಪ್ಪಳಿಸು ಕೈ ಕಾಲಿರುವವರರಿಗೂ ದೇಹದಲಿ
ತಪ್ಪಿ ನುಡಿಯದಿರು ತೂಕವಿರುವವರೆಗೆ ಮಾತಿನಲಿ
ಸಪ್ಪಗೆ ಕೂಡದಿರು ಮುಪ್ಪು ಬಂದು ಮುಗಿಯುವವರೆಗೂ ಬದುಕಿಗೆಂದರು…..!!

ನಿರಾಕರಿಸಿದರು ಸ್ವಾಭಿಮಾನದಲಿ ಪ್ರತಿಷ್ಠೆತೆಯ ಪುರಸ್ಕಾರಗಳನು
ತಿರಸ್ಕರಿಸಿ ಸಾಗಿದರು ಆಸೆ ಅಂತಸ್ತು ಸಿರಿ ಸಂಪತ್ತಿನ ಅವಕಾಶಗಳ
ಪರಿಸರ ಸ್ನೇಹಿಯಾಗಿ ಪಸರಿಸಿತು ಹೆಸರು ಆಧ್ಯಾತ್ಮದ ಉಸಿರಿನಲಿ
ಪರಸ್ಪರವಾಗಿ ಸೇರಿ ಸಾಗಿದರು ಕಾಣದ ಲೋಕಕೆ ಭಕ್ತ ಮನಗಳಲಿ…!!

  • ಎಚ್. ಡಿ. ಹೊಗರನಾಳ.
    ಮೊ: 9945246234
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ