ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರೀತನ್ ರ ರಾಜಕೀಯ ಭವಿಷ್ಯಕ್ಕೆ ಸಂಸದರಾದಿಯಾಗಿ , ಸಿದ್ದಲಿಂಗ ಶ್ರೀಗಳ ಅಭಯ

ಹನೂರು :ರಾಜಕಾರಣದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಹಿರಿಯ ನಾಯಕ ಅಭಿವೃದ್ಧಿ ಹರಿಕಾರರಾದ ದಿವಂಗತ ಮಾಜಿ ಸಚಿವರಾದ ಲಿಂಗೈಕ್ಯ ಹೆಚ್ ನಾಗಪ್ಪ ನವರ ಪುಣ್ಯಸ್ಮರಣೆಯನ್ನು ಶ್ರೀ ಹೆಚ್ .ನಾಗಪ್ಪ ಪ್ರತಿಷ್ಠಾನ, ಕಾಮಗೆರೆ ರಿ. ವತಿಯಿಂದ ಅಭಿಮಾನಿಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮದಿಂದ ಜನರಿಗೆ ಮಾದರಿಯಾಗಲಿ ಎಂದು ಸಿದ್ದಗಂಗಾ ಮಠದ ಸ್ವಾಮೀಜಿಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದರು .
ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮೈದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು ಕಾಡುಗಳ್ಳ ವೀರಪ್ಪನ್ ಅಪಹರಣದ ನಂತರ ನಾಗಪ್ಪನವರನ್ನು ಕೊಂದಿರಬಹುದು ಆದರೆ ಅವರ ಆತ್ಮ ನಮ್ಮಿಂದ ದೂರವಾಗಿಲ್ಲ‌ ಆದರೆ ದೂರಮಾಡಿದರು, ಹೃದಯವಂತರಾಗಿದ್ದರು ನಾನು ನಾಗಪ್ಪರ ಸಮಾಧಿಯಲ್ಲಿನ ಬರವಣಿಗೆಯನ್ನು ಗಮನಿಸಿದೆ ಅದರಲ್ಲಿ ಮಾದರಿ ರಾಜಕಾರಣಿ ,ಆದರ್ಶವಾದಿಗಳು‌ ಬಸವಣ್ಣನವರ ವಚನವನ್ನು ಅಳವಡಿಸಿಕೊಂಡವರು, ಮಾಜಿ ಸಚಿವರು ಅಗಲಿದ ಸಂದರ್ಭದಲ್ಲಿ ಸಂಸಾರವನ್ನು ಬೆಳಗಿಸಿದ ಮಹಾನ್ ತಾಯಿ ಪರಮಳ ನಾಗಪ್ಪ ಇವರು ಶ್ರೀ ಮಂತ ಕುಟುಂಬದಲ್ಲಿ ಜನಿಸಿ ಬಯಲುಸೀಮೆಗೆ ಬಂದು ಹುಚ್ಚಪ್ಪರ ಮನೆ ಬೆಳಗಿದವರು, ಮೌಲ್ಯಯುತವಾದ ಬದುಕನ್ನು ನಡೆಸಿಕೊಂಡ ಬಂದ ಮನೆತನವಿದು, ಸಂಸದರಾದ ಪ್ರಸಾದ್ ರವರು ಅಧರ್ಮಕ್ಕೆ ಬೆಲೆಯಿಲ್ಲ ಧರ್ಮಕ್ಕೆ ಬೆಲೆ ಕೊಡುತ್ತೆನೆಂದರು ಪ್ರತಿಷ್ಠಾನದ ಜೊತೆಯಲ್ಲಿ ಎಲ್ಲಾರು ಭಾಗಿಯಾಗುವುದು ನಮ್ಮ ಕರ್ತವ್ಯವಾಗಿದೆ ಮುಂದೆ ನಾಗಪ್ಪನವರ ಸ್ಥಾನವನ್ನು ಪ್ರೀತನ್‌ ರಿಗೆ‌ ತುಂಬಲು ಜನತೆ ಅವಕಾಶ ಮಾಡಿಕೊಡಬೇಕೆಂದು ಶುಭಕೋರಿದರು.
ಇದೇ ಸಮಯದಲ್ಲಿ ಮಾತನಾಡಿದ ಚಾಮರಾಜನಗರ ಲೋಕಸಭಾ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ ನಾಗಪ್ಪ ಪ್ರತಿಷ್ಟಾನ ವತಿಯಿಂದ ಹಮ್ಮಿಕೊಂಡಿರುವ ಕಾರ್ಯವು ಶ್ಲಾಘನೀಯವಾದದ್ದು , ಅವರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೆ ವಿನಹ ಆದರೆ ಬೌತಿಕ ವಾಗಿ ನಮ್ಮ ಜೊತೆಯಲ್ಲಿ ಇದ್ದಾರೆ ಚುನಾವಣೆ ನಿಂತ ಮೇಲೆ ಹನ್ನೊಂದು ಬಾರಿ ಸ್ಫರ್ದಿಸಿ ಸುಮಾರು ಐವತ್ತು ವರ್ಷಗಳ ಗತಿಸಿವೆ ನಾನು ನಂಬಿದ ತತ್ವಕ್ಕೆ ಸ್ವಾಭಿಮಾನಕ್ಕೆ ದಕ್ಕೆ ಬಂದರೆ ತಿರುಗಿ ಬೀಳುವ ವ್ಯಕ್ತಿ ನಾನು ಪಟ್ಟಣವಾಸಿ ರಾಜಕೀಯದಲ್ಲಿ
ನನಗೆ ಹಳ್ಳಿಗಳಲ್ಲಿ ಪರಿಚಯ ಮಾಡಿದ ವ್ಯಕ್ತಿ ನಾಗಪ್ಪರವರಾಗಿದ್ದರು, ರಾಜ್ಯದಲ್ಲಿದ್ದ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಕಾಲದಲ್ಲಿ ದುಡಿದ ವ್ಯಕ್ತಿಯಾಗಿದ್ದು , ಪರಿವರ್ತನೆ ಜಗದ ನಿಯಮ ಸಮಾಜದಲ್ಲಿ ಸಮಸ್ಯೆಗಳಿಲ್ಲದ ಹಳ್ಳಿಗಳೇ ಇಲ್ಲ ಕಂದಾಯ ಸಚಿವನಾಗಿದ್ದಗ ಹನೂರು ತಾಲ್ಲೂಕು ಕೇಂದ್ರವಾಗಿದೆ ಇಲ್ಲಿ ಜಾತಿ ಮುಖ್ಯವಾಗುವುದಿಲ್ಲ ರಾಮಮನೋಹರ್ ರವರು ನೀತಿಯ ಪ್ರಕಾರ ಎಷ್ಟೆ ಮಟ್ಟದಲ್ಲಿ ಬೆಳೆದರು ನಾವು ಕೈಮುಗಿದು ಕೇಳಬೇಕು ನಾಟಕಗಳಿಗೆ ಸಿಮಿತವಾಗಬಾರದು ಜನತೆಗೆ ಕೊಟ್ಟಮಾತು ಉಳಿಸಿಕೊಳ್ಳಬೇಕು ಸೋಲು ಗೆಲುವು ಸಹಜ ಹುಟ್ಟು ಆಕಸ್ಮಿಕ ಸಾವು ಖಚಿತ ಇದರ ಮದ್ಯೆ ಜನಪ್ರಿಯತೆ ಗಳಿಸಿದ ವ್ಯಕ್ತಿ ಅಪರೂಪದ ರಾಜಕಾರಣಿ ಅಂತಿಮ ದಿನಗಳಲ್ಲಿ ಬಹಳ ನೋವು ಉಂಡವರು ಅವರ ಸ್ಮರಣೆಯ ಮುಖ್ಯ ಪ್ರತಿಷ್ಠಾನಕ್ಕೆ ಸಾರ್ಥಕವಾಗಿತು ಎನ್ನುವ ರೀತಿಯಲ್ಲಿ ಬೆಳೆಯಬೇಕು .ರಾಜಕೀಯಲ್ಲಿ ಅಧಿಕಾರ ಬರೊದ್ ಅಮುಲುಬರುವಂತಹದು ಆದರೆ ಮಧ್ಯ ಸೇವನೆಗಿಂತ ಅಪಾಯಕಾರಿ ಹರಣಹೊದರು ಶರಾಣಗಾಬೇಡಿ ಅಧರ್ಮದವರಿಗೆ ಸಾಕರ ಮೂರ್ತಿಯಾದವರು ಸಿದ್ದೇಶ್ವರ ಸ್ವಾಮೀಜಿ ಯಾವುದೇ ವ್ಯಕ್ತಿ ತನ್ನತನವನ್ನು ಬಿಡಬಾರದು ನಿಮ್ಮ ಕುಟುಂಬಕ್ಕೆ ನಾನು ಚಿರರುಣಿಯಾಗಿರುತ್ತೇನೆ ಚಿನ್ನದಂತ ಹೊಳಪು ಬರುತ್ತದೆ ಪ್ರೀತನ್ ವೃತ್ತಿಯಲ್ಲಿ ವೈದ್ಯರು ಜನರಿಗೆ ನಿನ್ನ ಸೇವೆ ಅಗತ್ಯ ವಾಗಿದೆ ,ನಾಗಪ್ಪನವರ ಹೆಸರು ಅನನ್ಯವಾಗಿರಲಿ ಎಂದರು.ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ ನಾಗಪ್ಪನವರ ಕನಸು ರಾಮರಾಜ್ಯವನ್ನು ಮಾಡಲು ಕನಸುಕಂಡವರು ,ಪ್ರತಿಮನೆಯಲ್ಲಿ ನಾಗಪ್ಪನವರ ಭಾವಚಿತ್ರವನ್ನು ದೇವರ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಇದಕ್ಕೆ ಅವರ ಕೆಲಸಕಾರ್ಯವೆ ಸಾಕ್ಷಿ ಯಾವುದೇ ಸಚಿವರು ಯಾವುದೇ ಜಾತಿಗೆ ಸಿಮೀತರಾಗಿಲ್ಲ‌ ,ಗುಡ್ಡಗಾಡು ಪ್ರದೇಶಗಳಲ್ಲಿ ಶಾಲೆಗಳನ್ನು ತೆರದವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದವರು ,ಮುಂದಿನ ಪಿಳಿಗೆಗೆ ಮಾದರಿಯಾಗಲಿ ಪ್ರತಿಷ್ಠಾನದಿಂದ ಒಳಿತನ್ನು ಮಾಡಲಿ ಎಂದರು.ಮಾಜಿ ಸಚಿವರಾದ
ಎನ್ ಮಹೇಶ್ ಮಾತನಾಡಿ ಅವರು ಗತಿಸಿ ಇಪ್ಪತ್ತು ವರ್ಷಗಳು ಕಳೆದರೂ ಬಂದಿರುವ ಜನ ನೋಡಿದರೆ ಅವರು ಬದುಕಿದ್ದಾರೆ ಎಂದು ಅನ್ನಿಸುತ್ತಿದೆ ಸೊಲು ಗೆಲುವನ್ನು ಸಮಾನಾಂತರವಾಗಿ ಸ್ವೀಕರಿಸಿದ ಮಹಾನಾಯಕ ,ಅವರ ಸರಳತೆ ನಮಗೆ ಮಾದರಿ ಅವರು ಎಂದೂ ಸಹ ಕುತಂತ್ರದ ರಾಜಕಾರಣ ಮಾಡಿಲ್ಲ ನೀವು ಹೆಚ್ ನಾಗಪ್ಪ ಪ್ರತಿಷ್ಠಾನದ ಭವಿಷ್ಯ ಉಜ್ವಲವಾಗಲಿ ಎಂದು ತಿಳಿಸಿದರು .
ಇದೇ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ. ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳು ಶ್ರೀ ಮರಳೆ ಗವಿಮಠ, ಪೂಜ್ಯಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಸಾಲೂರು ಬೃಹನ್ ಮಠ, ಪೂಜ್ಯಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸೂರ್ಯ ಸಿಂಹಾಸನ ಮಠ ಇನ್ನು ಮುಂತಾದ ಸ್ವಾಮೀಜಿಗಳು , ನಿರಂಜನ್ ಕುಮಾರ್,ಡಾಕ್ಟರ್ ಪ್ರೀತನ್, ದಿವಂಗತ ಹೆಚ್ ನಾಗಪ್ಪ ಕುಟುಂಬದವರು, ತಮಿಳುನಾಡಿನ ಮಾಜಿ ಶಾಸಕ ಧರ್ಮಲಿಂಗಂ, ಮಾಜಿ ಶಾಸಕ ಭಾರತಿ ಶಂಕರ್, ಪ್ರೊಫೆಸರ್ ಶಿವನಂಜಪ್ಪ, ಬಿಜೆಪಿ ಉಪಾಧ್ಯಕ್ಷ ಡಾಕ್ಟರ್ ದತ್ತೇಶ್ .ಮಂಡಲ ಅಧ್ಯಕ್ಷರಾದ ಸಿದ್ದಪ್ಪ ,ಸೇರಿದಂತೆ ಇನ್ನೂ ಮುಂತಾದ ಮುಖಂಡರುಗಳು ಹಾಗೂ ಅಭಿಮಾನಿಗಳು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ