ಸಿಂಧನೂರು:- ಜ.05. ತಾಲೂಕಿನ ಗಂಗಾವತಿ ರೋಡ್ ಗೋರೇಬಾಳ ಗ್ರಾಮದಲ್ಲಿ ಶ್ರಿ ಅಂಬಾದೇವಿ ಜಾತ್ರೆಯ ಪಾದಯಾತ್ರೆಗೆ ದಣಿದು ಬರುವ ಭಕ್ತರಿಗೆ ಅನ್ನದಾಸೋಹ ಮಾಡುವುದು ಪವಿತ್ರ ಕೆಲಸವೆಂದು ಗ್ರಾಮದ ಜನಗಳ ನಂಬಿಕೆ ಇಲ್ಲಿ ನಿತ್ಯ ಬೇರೆ ಬೇರೆ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುತ್ತಾರೆ. ಶ್ರೀಅಂಬಾದೇವಿ ಅನ್ನದಾಸೋಹ ಸಮಿತಿ ಗೊರೇಬಾಳ 50 ವರ್ಷಗಳ ಹಿಂದೆ ನಡೆದುಕೊಂಡು ಬಂದಿದೆ.ಬಂದ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಕಲ್ಪಿಸುವ ಅವಕಾಶ ತಮಗೆ ಸಿಕ್ಕ ಭಾಗ್ಯವಾಗಿದೆ. ಈ ಕಾಯಕವನ್ನು ಪ್ರತಿವರ್ಷ ತಪ್ಪದೆ ನಿರ್ವಸಿಕೊಂಡು ಹೋಗುತ್ತೇವೆ ಎಂದು ಗ್ರಾಮದ ಜನರು ಹೇಳುತ್ತಾರೆ. ಅನ್ನ ನೀರಿನ ದಾನ ಮಾಡುವವರಿಗೆ ಸಿರಿ-ಸಂಪತ್ತು,ಪುಣ್ಯ ಲಭಿಸುತ್ತದೆ. ಪಾಪ ನಿವಾರಣೆಯಾಗುತ್ತದೆ ಎಂದು ಗೊರೇಬಾಳ ದಾಸೋಹ ಸಮಿತಿ ಹಿರಿಯ ಮುಖಂಡರಾದ
ರಂಗನಾಥ ನಾಯಕ ಹೇಳಿದರು.ಈ ಸಂದರ್ಭದಲ್ಲಿ ಗಾಲಿ ಜನಾರ್ಧನ್ ರೆಡ್ಡಿ ಆಗಮಿಸಿ ಪೂಜೆ ಸಲ್ಲಿಸಿ ಶ್ರೀ ಅಂಬಾ ದೇವಿಯ ಕೃಪೆ ಗ್ರಾಮದ ಜನತೆಯ ಮೇಲೆ ಇರಲಿ ಎಂದರು ಹಾಗೂ ಗಾಲಿ ಜನಾರ್ಧನ್ ರೆಡ್ಡಿ ಅವರ ಅಭಿಮಾನಿ ಬಳಗ ಮತ್ತು ಗ್ರಾಮದ ಮುಖಂಡರಾದ ಯಮನೂರಪ್ಪ ನಾಯಕ್ ಗ್ರಾಮ ಪಂಚಾಯಿತಿ ಸದಸ್ಯರು ಮಠದ ಪಾಲಾಕ್ಷಯ್ಯ ಸ್ವಾಮಿ, ಅಂಬರೀಶ್ ಗಡ್ಡದ, ಶರಣಪ್ಪ ನಾಯಕ್ ತಳಗೇರಿ, ಓಬಳೇಶ್ ನಾಯಕ್, ಎನ್ ಬಸನಗೌಡ, ಕೆ.ಜೆಪ್ಪಗೌಡ, ಎಂ ಮಲ್ಲನಗೌಡ, ಎಂ ಗಂಗಪ್ಪ, ಶರಣಪ್ಪ ಹರಿಜನ, ಅನೇಕ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತಿಯಲ್ಲಿದ್ದರು.
ವರದಿ: ವೆಂಕಟೇಶ.ಹೆಚ್.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.