ಗಂಗಾವತಿ: ತಾಲೂಕು ವ್ಯಾಪ್ತಿಗೆ ಬರುವ ಕಾರಟಗಿ ಕನಕಗಿರಿ ತಾಲೂಕಿನ ಸುತ್ತಮುತ್ತಲಿನ ಆರಾಧ್ಯ ದೈವ ಕಾಯಕಯೋಗಿ ಶ್ರೀ ಚನ್ನಬಸವೇಶ್ವರ ತಾತನವರ 77 ನೇಯ ಪುಣ್ಯ ಸ್ಮರಣೋತ್ಸವ
ಬೆಳಿಗ್ಗೆ ರುದ್ರಾಭಿಷೇಕ ಮಂಗಳಾರತಿಯೊಂದಿಗೆ ಪೂಜೆ ನೆರವೇರಿಸಲಾಯಿತು, ತಾಲೂಕಿನ ಸುತ್ತಮುತ್ತಲಿನ ಜನರು ಬೆಳಿಗ್ಗೆ ತಮ್ಮ ತಮ್ಮ ಊರಿನಿಂದ ಅಜ್ಜನ ಜಾತ್ರೆಗೆ ಪಾದಯಾತ್ರೆ ಮಾಡುವ ಮೂಲಕ ಗದ್ದಿಗೆ ದರ್ಶನವನ್ನು ಪಡೆದರು, ತಮ್ಮ ಭಕ್ತಿಯ ಮೂಲಕ ಅನ್ನ ಸಂತರ್ಪಣೆ ಮತ್ತು ದಾಸೋಹದ ಭಕ್ತಿ ಸೇವೆ, ಮಾಡಿದರು, ಜೋಡಿ ರಥೋತ್ಸವವನ್ನು ಬುಧವಾರ ಸಂಜೆ 5: 45,ನಿಮಿಷಕ್ಕೆ ಭಕ್ತಿಯ ಜನ ಸಾಗರದಲ್ಲಿ ಜೋಡಿ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.




















