ಶಹಾಪುರ: ಫೆಬ್ರವರಿ ೮ ಮತ್ತು ೯ ರಂದು ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಾಲ್ಮೀಕಿ ಸಂಘದ ನಾಯಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ಸಂಘದ ವತಿಯಿಂದ ಯಾವುದೇ ಜನಪರ ಹೋರಾಟ ಮಾಡುವಾಗ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ. ನಿಸ್ವಾರ್ಥ ಸೇವೆ ಒದಗಿಸಲು ಸಮುದಾಯದ ಒಳಿತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾದಾಗ ಮಾತ್ರ ನಾವು ಮಾಡುವ ಹೋರಾಟಕ್ಕೆ ಯಶಸ್ಸು ಸಿಗುತ್ತದೆ. ಎಂದು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸ್ವಾಮಿಜಿ ಗಳಾದ ಪ್ರಸನ್ನಾನಂದ ಸ್ವಾಮಿಜಿಯವರು ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ವಾಲ್ಮೀಕಿ ಜಾತ್ರೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಮಿಜಿಯವರು ಮಾತನಾಡಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕಾಗಿ ಸ್ವಾಮಿಜಿಯವರು ಧರಣಿ ನಡೆಸಿದಾಗ ವಾಲ್ಮೀಕಿ ಸಂಘದ ನಾಯಕರು ಎಲ್ಲರೂ ಬೆಂಬಲಕ್ಕೆ ನಿಂತು ಮೀಸಲಾತಿ ಪಡೆಯುವಲ್ಲಿ ಕಾರಣೀಭೂತರಾದ ಶೋಷಿತ ಸಮುದಾಯದ ಮುಖಂಡರಿಗೆ ಹಾಗೂ ವಾಲ್ಮೀಕಿ ಜನಾಂಗದವರಿಗೆ ಅಭಿನಂದನೆಗಳು ತಿಳಿಸಿದರು.
ವಾಲ್ಮೀಕಿ ಸಮಾಜದ ನಾಯಕರು ತಾಲೂಕು ಘಟಕದ ಅಧ್ಯಕ್ಷರಾದ ಮರೆಪ್ಪ ಪ್ಯಾಟಿ ಶಿರವಾಳ, ಹಣಮಂತ್ರಾಯ ದೊರೆ ದಳಪತಿ, ಗೌಡಪ್ಪ ಗೌಡ ಆಲ್ದಾಳ, ತಮ್ಮಣ್ಣ ರಾಂಪುರ, ಹಣಮಂತ್ರಾಯ ಟೋಕಾಪುರ, ಸಿದ್ದಣ್ಣ ಮಾನಸೂಣಗಿ, ಶೇಖರ್ ದೊರೆ, ಭೀಮಣ್ಣ ಆಲ್ದಾಳ, ರಾಘವೇಂದ್ರ ಯಕ್ಷಿಂತಿ, ಸತ್ಯನಾರಾಯಣ ಅನವಾರ, ಬಸವರಾಜ ಹವಾಲ್ದಾರ್, ಮಲ್ಲಿಕಾರ್ಜುನ ಯಾದಗಿರಿ, ಶರಣಪ್ಪ ಪ್ಯಾಟಿ, ಅಮರೇಶ ಇಟಗಿ ಸಮಾಜದ ಮುಖಂಡರು ಹಾಗೂ ಗೌರವಾನ್ವಿತ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ ಶಹಾಪುರ