ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆಯಲ್ಲಿ ಆಯುಷ್ಮಾನ್ ಎಂ.ಎ.ಸಲೀಂ. ಐ.ಪಿ.ಎಸ್. ಎಂದರೆ ಸಾಕು ಭ್ರಷ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ಚಡ್ಡಿ ಒದ್ದೆಯಾಗುತ್ತದೆ ಇನ್ನುಳಿದಂತೆ ಇತ್ತೀಚಿನ ದಿನಗಳಲ್ಲಿ ನಾಗರೀಕ ಸೇವೆಯಲ್ಲಿರುವ ಪೊಲೀಸರ ಕರ್ತವ್ಯಕ್ಕೆ ದಕ್ಕೆ ತರುತ್ತಾ ಪಟ್ಟ ಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಕರ್ತವ್ಯ ನಿರತ ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮೇಲಾಧಿಕಾರಿಗಳ ಬಳಿ ಚಾಡಿ ಹೇಳಿ ಸಿಬ್ಬಂದಿಗಳು ಅಮಾನತ್ತಾಗುವಂತೆ ಮಾಡುತ್ತಿದ್ದ ಕೆಲ ಕುಬ್ಜ ಮಾನವರ ವ್ಯವಸ್ಥಿತವಾದ ಕುತಂತ್ರವನ್ನು ಬಯಲಿಗೆಳೆಯುವ ಸಲುವಾಗಿ ಮಾನ್ಯರಾದ ಆಯುಷ್ಮಾನ್ ರವಿಕಾಂತೇ ಗೌಡ .ಐ.ಪಿ.ಎಸ್. ರವರು ಇಲಾಖೆಗೆ ಬಾಡಿವೋರ್ನ್ ಕ್ಯಾಮೆರಾ ತಂದಿರುತ್ತಾರೆ. ಸದರಿ ಬಾಡಿ ವೋರ್ನ್ ಕ್ಯಾಮೆರಾ ಬಂದ ಮೇಲೆ ಬಹುತೇಕ ಪೊಲೀಸರ ವರ್ತನೆ ನೂರಕ್ಕೆ 90 ಪ್ರತಿಶತ ಬದಲಾಗಿರುವುದು ಕಂಡು ಬರುತ್ತಿದೆ ಹೀಗಿರುವಾಗ ಉಪ್ಪಾರ ಪೇಟೆ ಸಂಚಾರ ಠಾಣಾ ಸರಹದ್ದಿನಲ್ಲಿ ಇಡೀ ಪೊಲೀಸ್ ವ್ಯವಸ್ಥೆಗೆ ಕಳಂಕ ಎನ್ನುವಂತೆ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾದ ಎ.ಎಸ್.ಐ. ಶ್ರೀ ಸುರೇಶ್.ಎಸ್.ಕೆ. ರವರು ಈ ದಿನ ಬ್ಯಾಟರಾಯನ ಪುರದ ಕುಮ್ಕೋ ಜಂಕ್ಷನ್ ನಲ್ಲಿ ಟಾಟಾ ಏಸ್ ನ ಚಾಲಕ ಜಮೀರ್ ಎಂಬ ವ್ಯಕ್ಕಿಗೆ ಕರ್ಣಕಠೋರವಾದ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯವಾದದ್ದು ಈ ವಿಷಯವನ್ನು ಕಿವಿಯಲ್ಲಿ ಕೇಳಿದಾಗಿನಿಂದ ಪೊಲೀಸರ ಮುಖ ನೋಡಿದರೆ ಭಯವಾಗುತ್ತದೆ. ಪಾರದರ್ಶಕವಾದ ಆಡಳಿತಕ್ಕೆ ಹೆಸರಾಗಿರುವ ತಾವು ಈ ಕೂಡಲೇ ಸದರಿ ಎ.ಎಸ್.ಐ. ರವರು ಧರಿಸಿರುವ ಬಾಡಿ ವೋರ್ನ್ ಕ್ಯಾಮೆರಾವನ್ನು ಪರಿಶಿಲಿಸಿ ಟಾಟಾ ಏಸ್ ಚಾಲಕನಿಂದ ಏನಾದರೂ ಉದ್ಧಟತನದ ಪ್ರದರ್ಶನವಾಗಿದ್ದರೆ ಕೂಡಲೇ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವಂತೆಯೂ ಹಾಗೂ ಅಧಿಕಾರಿರವರಿಂದ ಉದ್ಧಟತನ ಪ್ರದರ್ಶನವಾಗಿದ್ದರೆ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಂಡು ನೊಂದ ಜಮೀರ್ ರವರಿಗೆ ನ್ಯಾಯ ದೊರಕಿಸಿಕೊಟಟ್ಟು ಇಲಾಖೆಯ ಮೇಲಿರುವ ಗೌರವವನ್ನು ಮತ್ತಷ್ಟು ಹೆಚ್ಚಿಸಬೇಕಾಗಿ ಖಾವಂದಿರಾದ ತಮ್ಮಲ್ಲಿ ನಮ್ರತೆಯ ಮನವಿ ಸರ್.
–ಸುಭಾಷ್ ಎಸ್. (ಸಾಮಾಜಿಕ ಕಾರ್ಯಕರ್ತರು. ಪತ್ರಿಕಾ ವರದಿಗಾರರು). ಬೆಂಗಳೂರು ನಗರ.