ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬಂಗ್ಲೆ ಮಲ್ಲಿಕಾರ್ಜುನ ಅವರು ನಡೆದು ಬಂದ ಹಾದಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ಕಿರು ಪರಿಚಯ ಹಾಗೂ ಮುನ್ನೋಟ

ದ್ವನಿ ಸಂಘಟನೆಯು ಪತ್ರಕರ್ತರ ಪರವಾಗಿ ಹೋರಾಟ ಮಾಡಲೆಂದೇ ಹುಟ್ಟು ಹಾಕಿದ ಸಂಘಟನೆ ಇದರ ಸಂಸ್ಥಾಪಕ ಅಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನ್ ರವರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿದರರು, ಮೂಲತಃ ಬಳ್ಳಾರಿ ಜಿಲ್ಲೆ. ತನ್ನ ವಿಧ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿ, ನಂತರದ ದಿನಗಳಲ್ಲಿ ಕೆಲವು ರಂಗಗಳಲ್ಲಿ ಕೆಲಸ ಮಾಡಿ, ನಂತರ ಇವರು ಪತ್ರಿಕಾ ರಂಗವನ್ನು ಆಯ್ಕೆ ಮಾಡಿಕೊಂಡು, ಅದನ್ನೇ ತನ್ನ ವೃತ್ತಿ ಜೀವನವನ್ನಾಗಿ ಮಾಡಿಕೊಂಡು, ಸುಮಾರು 20 ರಿಂದ 24 ವರ್ಷಗಳ ಕಾಲ ಅನೇಕ ಪತ್ರಿಕಾ ಸಂಸ್ಥೆಗಳಲ್ಲಿ, ಮುದ್ರಣ ಮಾಧ್ಯಮ ಆಗಿರಬಹುದು ಅಥವಾ ದೃಶ್ಯ ಮಾಧ್ಯಮ ಆಗಿರಬಹುದು, ಪತ್ರಕರ್ತರಾಗಿ ಹಾಗೂ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅನುಭವಿಗಳು. ಪತ್ರಕರ್ತರ ಕಷ್ಟ-ನಷ್ಟ, ನೋವು-ನಲಿವು, ಏಳು-ಬೀಳುಗಳನ್ನು ಚೆನ್ನಾಗಿ ಅರಿತವರಾಗಿರುವ ಕಾರಣ ಪತ್ರಕರ್ತರ ಪರವಾಗಿ ಧ್ವನಿ ಎತ್ತುವ ನಿಟ್ಟಿನಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಎಂಬ ರಾಜ್ಯ ಸಂಘಟನೆಯನ್ನು ಸಂಸ್ಥಾಪಿಸಿದರು. ಇವರು ಬೇರೊಂದು ಪತ್ರಕರ್ತರ ಸಂಘಟನೆಯಲ್ಲಿ ಸದಸ್ಯರಾಗಿ, ಜಿಲ್ಲಾಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಅನುಭವಿಗಳು. ಮುಂದೊಂದು ದಿನ, ಕೆಲವೇ ಸ್ನೇಹಿತರೊಡನೆ ಕೂಡಿ ಸ್ಥಾಪನೆ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಇಂದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತನ್ನ ಶಾಖೆ ಹೊಂದಿರುವುದು ಶ್ಲಾಘನೀಯ. ಈ ಸಂಘಟನೆ ಆರಂಭವಾಗಿ ಕೇವಲ ಆರು ತಿಂಗಳಲ್ಲಿಯೇ ರಾಜ್ಯಾದ್ಯಂತ ತನ್ನದೇ ಆದಂತ ಚಾಪನ್ನು ಮೂಡಿಸುತ್ತಿರುವುದು ಶ್ಲಾಘನೀಯವೇ ಸರಿ. ಕರ್ನಾಟಕ ರಾಜ್ಯದಲ್ಲಿ ಪತ್ರಕರ್ತರ-ಸಂಪಾದಕರ ಹಲವಾರು ಸಮಸ್ಯೆಗಳು ಇರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ, ಸಣ್ಣ ಪತ್ರಿಕೆಗಳ, ರಾಜ್ಯಮಟ್ಟದ ಪತ್ರಿಕೆಗಳ, ಜಿಲ್ಲಾ ಮಟ್ಟದ ಪತ್ರಿಕೆಗಳ, ಪ್ರಾದೇಶಿಕ ಪತ್ರಿಕೆಗಳ ಸಮಸ್ಯೆಗಳು ಹಲವಾರು ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಲ್ಲಿ ಪ್ರಮುಖವಾದ ವಿಚಾರವೇನೆಂದರೆ ಕರ್ನಾಟಕ ರಾಜ್ಯದಲ್ಲಿ ಮಾಧ್ಯಮ ಪಟ್ಟಿಯಲ್ಲಿ ಅಂದರೆ ವಾರ್ತಾ ಇಲಾಖೆಯ ಪಟ್ಟಿಯಲ್ಲಿ ಸೇರಿರುವಂತಹ ಪತ್ರಿಕೆಗಳು ಮಾತ್ರ ಅಧಿಕೃತ ಪತ್ರಿಕೆಗಳು ಅಥವಾ ಪತ್ರಕರ್ತರು ಅಂತ ಬಿಂಬಿಸುತ್ತಿರುವುದು ನೋವಿನ ಸಂಗತಿಯಾಗಿರಿವುದು ಪತ್ರಿಕಾ ಮಿತ್ರರೆಲ್ಲರಿಗು ತಿಳಿದಿರುವ ಸಾಮಾನ್ಯ ವಿಚಾರ. ಅದೇ ರೀತಿಯಾಗಿ ದೃಶ್ಯ ಮಾಧ್ಯಮಗಳ ಸಂಸ್ಥೆಗಳ ವಿಚಾರದಲ್ಲೂ ಇದೆ ಆಗಿದೆ ಎಂಬುದು ಬೇಸರದ ಸಂಗತಿ. ಈ ರಾಜ್ಯದಲ್ಲಿ ದಿನಪತ್ರಿಕೆಗಳು, ವಾರಪತ್ರಿಕೆಗಳು, ಪಾಕ್ಷಿಕ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು ಹೀಗೆ ಹಲವಾರು ಪತ್ರಿಕೆಗಳು ಇವೆ. ಭಾರತ ರಾಷ್ಟ್ರದ ಸಂವಿಧಾನದ ಅಡಿಯಲ್ಲಿ ಬರುವ ಆರ್‌ಎನ್ಐ (ರಿಜಿಸ್ಟರ್ ಆಫ್ ನ್ಯೂಸ್ ಪೇಪರ್ ಫಾರ್ ಇಂಡಿಯಾ) ಎಂಬ ಸಂಸ್ಥೆಯು ಪತ್ರಿಕಾ ಕರ್ತವ್ಯವನ್ನು ನಡೆಸಲು ಯೋಗ್ಯವಾದವರಿಗೆ-ವಿದ್ಯಾವಂತರಿಗೆ ಅನುಮತಿ ನೀಡುತ್ತದೆ. ಆರ್‌ಎನ್ಐ ಇಂದ ಅನುಮತಿ ಪಡೆದಂತ ವ್ಯಕ್ತಿ ಅಥವಾ ಪತ್ರಕರ್ತ ಅಥವಾ ಪತ್ರಿಕೆ ಸಂಸ್ಥೆಯು ಪತ್ರಿಕರಂಗದ ಕುಟುಂಬಸ್ಥನಾಗಿರುತ್ತಾನೆ ಎಂಬುದು ಸಾಮಾನ್ಯ ಸಂಗತಿ. ರಿಜಿಸ್ಟರ್ ಆಫ್ ನ್ಯೂಸ್ ಪೇಪರ್ ಫಾರ್ ಇಂಡಿಯಾ ಎಂಬ ಸ್ವಾಯತ್ತತ ಸಂಸ್ಥೆಯು ಪರಾವನೆಗೆ ನೀಡಿದ ಮೇಲೆ ಅವರು ಪತ್ರಕರ್ತ ಎಂದು ನಂಬಿರುವಾಗ, ಕರ್ನಾಟಕ ರಾಜ್ಯ ಸರ್ಕಾರದ ಅಧೀನದಲ್ಲಿರುವ ವಾರ್ತಾ ಇಲಾಖೆ ಎಂಬ ಮಹಾ ಬುದ್ದಿವಂತಸಂಸ್ಥೆ ಅಥವಾ ನಿಗಮ ಅಥವಾ ಇಲಾಖೆ ಕೆಲವರನ್ನು ಮಾತ್ರ ಪತ್ರಕರ್ತರು ಎಂದು ಬಿಂಬಿಸುವ ತಾರತಮ್ಯ ಏಕೆ ಎಂಬುದು ಪ್ರಶ್ನೆ. ಕೇವಲ ಮಾಧ್ಯಮ ಪಟ್ಟಿಯಲ್ಲಿರುವಂತಹ ಪತ್ರಿಕೆಗಳಿಗೆ ಮಾನ್ಯತೆ ಮತ್ತು ಸಂಬಂಧಪಟ್ಟ ಮಾಧ್ಯಮ ಸಂಸ್ಥೆಯ ಪತ್ರಕರ್ತರಿಗೆ ಅಕ್ರಿದಿಟೇಷನ್ ಕಾರ್ಡನ್ನು ಕೊಡ್ತಾ ಬಂದಿರುವ ವಾರ್ತಾ ಇಲಾಖೆಯ ಕಾರ್ಯವೈಖರಿಯನ್ನ ಪ್ರಶ್ನೆ ಮಾಡಬಾರದೇಕೆ. ಸಣ್ಣ ಪತ್ರಿಕೆಗಳಿಗೆ ಜಾಹೀರಾತು ನೀಡುವುದಕ್ಕೂ ತಾರತಮ್ಯ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ, ಕೆಲವು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ವಾರ್ಷಿಕ ಕೋಟಿ ಕೋಟಿ ರೂಗಳ ಜಾಹೀರಾತು, ಅದೇ ಮಾಧ್ಯಮ ಪಟ್ಟಿಯೆಲ್ಲಿರದ ಸಣ್ಣ – ಪುಟ್ಟ – ಮದ್ಯಮ ಪತ್ರಿಕೆಗಳಿಗೆ ಕೇವಲ ವಾರ್ಷಿಕ 4 ಸಾವಿರ ರೂಗಳು, ಇದೆಂತ ವಿಪರ್ಯಾಸ, ಹಳ್ಳದ ಕಡೆಗೆ ನೀರು ಹರಿದಂತೆ. ಬಡ ಪತ್ರಿಕಾ ಸಂಸ್ಥೆ ಅಥವಾ ಬಡ ಪತ್ರಕರ್ತರನ್ನು ಪ್ರೋತ್ಸಾಹಿಸುವುದು ಬಿಟ್ಟು ಅನುಕೂಲಸ್ಥರಿಗೆ ಅನುಕೂಲ ಮಾಡುವಂತಿದೆ ವಾರ್ತಾ ಇಲಾಖೆಯ ಕಾರ್ಯವೈಖರಿ, ಇದು ಎಷ್ಟು ಸರಿ ಎಂಬ ಪ್ರಶ್ನೆಯು ಉದ್ಭವವಾಗದೆ ಇರದು. ಮಾನಸಿಕವಾಗಿ, ನೈತಿಕವಾಗಿ ತುಳಿತಕ್ಕೆ ಒಳಗಾಗಿರುವ ಪತ್ರಕರ್ತರ ಪರವಾಗಿ ಧ್ವನಿ ಎತ್ತಬೇಕು ಎಂದು ಮುನ್ನಲೆಗೆ ಬಂದಿರುವ ಸಂಘಟನೆಯೇ ಬಂಗ್ಲೆ ಮಲ್ಲಿಕಾರ್ಜುನ್ ಸ್ಥಾಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ. ಸಾರಿಗೆ ನಿಗಮದ ಬಸ್ ಪಾಸ್ ವಿಚಾರವೂ ಕೂಡ ಇದಕ್ಕೆ ಹೊರತಾಗಿಲ್ಲ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಕ್ರಿಡಿಟೇಷನ್ ಕಾರ್ಡ್ ಹೊಂದಿರುವ ಪತ್ರಕರ್ತರಿಗೆ ರಾಜ್ಯದ್ಯಂತ ಸಂಚರಿಸಲು ಉಚಿತ ಬಸ್ ಪಾಸ್ ನೀಡುತ್ತಿದೆ, ಪಾಪ, ಸಾರಿಗೆ ನಿಗಮ ನಷ್ಟದಲ್ಲಿದ್ದರು ಸಹ ಉಚಿತ ಬಸ್ ಪಾಸ್ ನೀಡುತ್ತಿದೆ ಎಂದರೆ ಹೆಮ್ಮೆಯ ಸಂಗತಿ. ನನ್ನ ಪ್ರಶ್ನೆ ಏನೆಂದರೆ ಅಕ್ರಿಡಿಟೇಷನ್ ಕಾರ್ಡ್ ಹೊಂದುವ ಒಬ್ಬ ಪತ್ರಕರ್ತ ರಾಜ್ಯ ಪೂರಾ ಸುತ್ತಿ ಸುದ್ದಿ ಸಂಗ್ರಹಿಸುತ್ತಾನೆಯೆ ಎಂಬುದು ಪ್ರಶ್ನೆ. ಜಿಲ್ಲಾ ಕೇಂದ್ರ ಸ್ಥಾನದಿಂದ ತಾಲೂಕು ಕೇಂದ್ರ ಸ್ಥಾನಕ್ಕೂ ಹೋಗುತ್ತಾನೆಯೋ ಇಲ್ವೋ ತಿಳಿಯದು, ಆದರೆ ರಾಜ್ಯ ಪೂರಾ ಸುತ್ತಲೂ ಉಚಿತ ಬಸ್ ಪಾಸ್ ಯಾಕೆ. ನನ್ನ ಅನಿಸಿಕೆ ಪ್ರಕಾರ ಉಚಿತ ಬಸ್ ಪಾಸ್ ರದ್ದುಪಡಿಸಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಿಎಂಟಿಸಿ ಸಾರಿಗೆ ಆರ್ ಎನ್ ಐ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ 600 ರೂಪಾಯಿ ಪಡೆದು ಬಸ್ ಪಾಸ್ ನೀಡುವಂತೆ ಯಾಕೆ ರಾಜ್ಯ ಸಾರಿಗೆ ಸಂಸ್ಥೆಯು ಉಚಿತ ಬಸ್ ಪಾಸ್ (ಅಕ್ರಿಡಿಟೇಷನ್ ಹೊಂದಿರುವ ಪತ್ರಕರ್ತ ರ ಬಸ್ ಪಾಸ್) ರದ್ದುಪಡಿಸಿ ಬಿಎಂಟಿಸಿ ಸೂತ್ರದಂತೆ ಪ್ರತಿ ಜಿಲ್ಲೆಗೆ 1200 ರೂಗಳನ್ನು ಪಡೆದು ಬಸ್ ಪಾಸ್ ನೀಡಬಾರದು ಎಂಬ ಪ್ರಶ್ನೆ. ರಾಜ್ಯ ರಸ್ತೆ ಸಾರಿಗೆ ಅಥವ ನಗರ ಸಾರಿಗೆ ಆಗಲಿ ಪ್ರತಿ ಜಿಲ್ಲೆಗೆ 1200 ರೂಪಾಯಿ ಪಡೆದು ಬಸ್ ಪಾಸ್ ನೀಡಲಿ, ಆಗ ನಿಗಮಕ್ಕು ಆದಾಯ ವೃದ್ದಿಯಾಗುತ್ತದೆ. ನಿಜವಾದ ಪತ್ರಕರ್ತ ವರ್ಷಕ್ಕೆ ಒಂದು ಜಿಲ್ಲೆಗೆ 1200 ರೂಪಾಯಿ ಕೊಡಲು ಯೋಗ್ಯನಲ್ಲ ಎಂದು ವಾರ್ತಾ ಇಲಾಖೆ ಅಥವಾ ಸಂಬಂಧಪಟ್ಟ ಇಲಾಖೆ ತೀರ್ಮಾನಿಸಿದಂತಿದೆ. ತಿಂಗಳಿಗೆ 100 ರೂಪಾಯಿ ಅಷ್ಟೆ, ಅದು ಕೊಡಲು ಪತ್ರಕರ್ತ ಯೋಗ್ಯನಲ್ಲವೆ. ಇಂತಹ ತಾರತಮ್ಯವನ್ನು ಹೋಗಲಾಡಿಸಲೆಂದೆ ಹುಟ್ಟಿರುವ ಸಂಘಟನೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ. ಧ್ವನಿಯು ಪತ್ರಕರ್ತರ ಧ್ವನಿಯಾಗಿ ನಿಲ್ಲಲು ಸದಾ ಸಿದ್ಧ. ಕೇವಲ ಇದಷ್ಟೇ ಅಲ್ಲ ಮಾಶಾಸನ, ಆರೋಗ್ಯ ವಿಮೆ, ಸೂರು, ಇನ್ನೂ ಹಲವಾರು ಬೇಡಿಕೆಗಳನ್ನು ಪತ್ರಕರ್ತರ ಪರವಾಗಿ, ಧ್ವನಿಯಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯು ಈ ರಾಜ್ಯದಲ್ಲಿ ಪತ್ರಕರ್ತರ ಧ್ವನಿಯಾಗಿ ಹೋರಾಡಲು ಸದಾ ಸಿದ್ದ. ರಾಜ್ಯಾದ್ಯಂತ, ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪತ್ರಕರ್ತ ಸಿಪಾಯಿಗಳಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಧ್ವನಿ ಸಂಘಟನೆಗೆ ನಮ್ಮೆಲ್ಲ ಪತ್ರಕರ್ತರ ಬೆಂಬಲ ಮುಖ್ಯ. ಪತ್ರಕರ್ತರೆಲ್ಲರು ಒಂದಾಗಿ ನಮ್ಮ ಧ್ವನಿಗೆ ಧ್ವನಿಯಾಗಿ, ಮುಂದಿನ ದಿನಗಳಲ್ಲಿ ನಡೆಯುವ ಹೋರಾಟಕ್ಕೆ ಜೊತೆಯಾಗಿ ಎಂಬುದು ನನ್ನ ಆಶಯ. ಪತ್ರಕರ್ತರ ಹಕ್ಕು ನಮ್ಮ ಹಕ್ಕು ಎಂಬುದು ಧ್ವನಿಯ ನಿಲುವು. ಮುಂದಿನ ಹೋರಾಟಗಳಲ್ಲಿ ಧ್ವನಿ ಸಂಘಟನೆ ಯಶಸ್ವಿಯಾಗಲಿ ಎಂಬುದು ಪತ್ರಕರ್ತರ ಆಶಯ.

ವರದಿ ರಾಜಶೇಖರ ಮಾಲಿ ಪಾಟೀಲ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ