ಖಂಡಿಗೆ , ಚೇಳಾರು ಮಂಗಳೂರು ಜನವರಿ 05 : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ 2022–2023 ನೇ ಸಾಲಿನ ನಾಟ್ಯಾಂಜಲಿ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವರವರಿಗೆ ಪ್ರಶಸ್ತಿ ಪ್ರದಾನವನ್ನು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳು ತಮ್ಮ ದಿವ್ಯ ಹಸ್ತದಿಂದ ನೆರವೇರಿಸಿ ಆಶೀರ್ವದಿಸಿದರು.ಸ್ವಾಮೀಜಿ ತಮ್ಮ ಆಶೀರ್ವಚನ ಭಾಷಣದಲ್ಲಿ ನಾಟ್ಯಾಂಜಲಿ ಕಲಾ ಅಕಾಡೆಮಿಯ ಶ್ರೀ.ಚಂದ್ರಶೇಖರ ನಾವಡರನ್ನು ಪ್ರಶಂಸಿಸಿ ಆಶೀರ್ವದಿಸಿದರು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮುಕ್ತೇಸರ ಶ್ರೀಲಕ್ಷ್ಮಿ ನಾರಾಯಣ ಆಸ್ರಣ್ಣರು ಶ್ರೀ ಮೋಹನ ಆಳ್ವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು ಮತ್ತು ಆಶೀರ್ವದಿಸಿದರು. ಪ್ರಶಸ್ತಿಪಡೆದು ಶ್ರೀ ಮೋಹನ ಆಳ್ವರು ತಮ್ಮ ಜೀವನ ಸಾಗಿಬಂದ ವಿಚಾರವಾಗಿ ವಿವರಿಸುತ್ತಾ “ತಾವೊಬ್ಬ ಕಾಮರ್ಸ್,ಸೈನ್ಸ್ ಮತ್ತು ಮೆಡಿಕಲ್ ವಿದ್ಯಾರ್ಥಿ ಯಾಗಿದ್ದೆ ನಂತರ ವೃತ್ತಿ ಜೀವನ ಒಬ್ಬ ಬಿ ಎಂ ಯಸ್ ಡಾಕ್ಟರ್ ಆಗಿ ಆರಂಭಿಸಿ ಕ್ರಮೇಣ ವಿದ್ಯಾ ಸಂಸ್ಥೆ ಆರಂಭಿಸಿದೆ,ನುಡಿ ಸಿರಿ,ವಿರಾಸತ್,ಜಂಬೂರಿಯಂಥ ರಾಷ್ಟ್ರೀಯ,ಅಂತಾರಾಷ್ಟ್ರೀಯ ಸಮಾವೇಶಗಳನ್ನು ಆಯೋಜಿಸಿದ್ದೆ ನನಗೆ ನನ್ನ ಜೀವನದಲ್ಲಿ ಪೂರ್ಣ ಸಂತೃಪ್ತಿ ಇದೆ, ಮಾತಾ ಪಿತರ ಬಗ್ಗೆ ಹೆಮ್ಮೆಯಿದೆ, ಯಾರಲ್ಲೂ ದ್ವೇಷವಿಲ್ಲ,ಎಲ್ಲರನ್ನೂ ಪ್ರೀತಿಸುತ್ತೇನೆ” ಎಂದು ತಮ್ಮ ಅನುಭವೀ ಭಾಷಣ ಗೈದರು. ನಾಟ್ಯಾಂಜಲಿ ಅಕಾಡೆಮಿಯ ಗೌರವಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರ್,ಶ್ರೀ ಚಂದ್ರಶೇಖರ ನಾವಡ ಮತ್ತು ಡಾ ಮೋಹನ ಆಳ್ವರಿಗೆ ಶುಭಾಂಶನೆಗೈದರು. ಶ್ರೀ ಚಂದ್ರಶೇಖರ ನಾವಡರು, ಶ್ರೀ ಮೋಹನ ಆಳ್ವರ ಜೊತೆ ಕಳೆದ 22 ವರ್ಷಗಳ ಒಡನಾಟ ಮತ್ತು ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.ಸಭಾ ವೇದಿಕೆಯಲ್ಲಿ ನಾಟ್ಯ ಗುರು ಶ್ರೀ ಉಳ್ಳಾಲ ಮೋಹನ ಕುಮಾರ್ ,ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಶ್ರೀ ಶ್ರೀಪತಿ ಭಟ್ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.ಸಭೆಯ ಮುಂಭಾಗದಲ್ಲಿ ಅರವತ್ತು ವಿಶೇಷ ಆಹ್ವಾನಿತ ದೇಶ ಮತ್ತು ವಿದೇಶ ಗಣ್ಯರಿದ್ದರು, ಅವರೆಲ್ಲರಿಗೂ ವಿಶೇಷ ಸ್ಮರಣಿಕೆಗಳನ್ನಿಟ್ಟು ಗೌರವಿಸಲಾಯಿತು.ದಕ್ಷಿಣ ಕನ್ನಡ,ಉಡುಪಿ ಯಿಂದಬಂದ ಹಲವು ಕಲಾ ಸಂಸ್ಥೆಗಳ ಪದಾಧಿಕಾರಿಗಳು ಶ್ರೀ ಚಂದ್ರಶೇಖರ ನಾವಡರಿಗೆ ಶಾಲು ಹೊದಿಸಿ ಸನ್ಮಾನಿಸಿದರು.ಶ್ರೀಸುಧಾಕರ ರಾವ್ ಪೇಜಾವರ,ಶ್ರೀಭುವನಾಭಿರಾಮ ಉಡುಪ ಸತೀಶ್ ರಾವ್ ಇದ್ಯಾ ,ಶ್ರೀ ಸಂತೋಷ್ ಐತಾಳ್ , ಶ್ರೀ ಡಾ ಸತ್ಯಮೂರ್ತಿ ಐತಾಳ್ , ಶ್ರೀ ಗಣೇಶ್ ಕುದ್ರೋಳಿ , ಶ್ರೀ. ಹತ್ವಾರ್ ಮತ್ತು ಅಸಂಖ್ಯಾತ ಕಲಾಭಿಮಾನಿಗಳು ಮತ್ತು ಪ್ರೇಕ್ಷಕ ಬಂಧುಗಳು ಉಪಸ್ಥಿತರಿದ್ದರು.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ